ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪಲ್ಲಮಜಲು ಎಂಬಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ ನೇತೃತ್ವದ ಪೊಲೀಸರು ಆರೋಪಿಗಳಾದ ಪಲ್ಲಮಜಲು ನಿವಾಸಿಗಳಾದ ಇಬ್ರಾಹಿಂ ಎಂಬವರ ಪುತ್ರ ಅಲ್ತಾಫ್ (24), ಆದಂ ಎಂಬವರ ಪುತ್ರ ಅಬ್ದುಲ್ ರಝಾಕ್ (28), ಅಬ್ದುಲ್ ಲತೀಫ್ ಎಂಬವರ ಪುತ್ರ ಸಲ್ಮಾನ್ (26) ಹಾಗೂ ಮೂಡನಡುಗೋಡು ಗ್ರಾಮದ ನಿವಾಸಿ ಸಿಲ್ವಸ್ಟರ್ ಮೆನೆಜಸ್ ಎಂಬವರ ಪುತ್ರ ಪ್ರೀತಂ ರೋಲ್ಸನ್ ಮೆನೇಜಸ್ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಗಳಿಂದ ಪೊಲೀಸರು ಸುಮಾರು 150 ಗ್ರಾಂ ಗಾಂಜಾ, ಒಂದು ಆಟೋರಿಕ್ಷಾ, ಒಂದು ಮೋಟಾರು ಸೈಕಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 49/2 ಕಲಂ 8(ಸಿ) 20(ಬಿ)(1) ಎನ್.ಡಿ.ಎಸ್.ಪಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.
0 comments:
Post a Comment