ನರಿಕೊಂಬು ಕಂಟೈನ್‍ಮೆಂಟ್ ಪ್ರದೇಶಕ್ಕೆ ಇನ್ಸಿಡೆಂಟ್ ಕಮಾಂಡರ್ ರಾಜಣ್ಣ ಭೇಟಿ - Karavali Times ನರಿಕೊಂಬು ಕಂಟೈನ್‍ಮೆಂಟ್ ಪ್ರದೇಶಕ್ಕೆ ಇನ್ಸಿಡೆಂಟ್ ಕಮಾಂಡರ್ ರಾಜಣ್ಣ ಭೇಟಿ - Karavali Times

728x90

27 April 2020

ನರಿಕೊಂಬು ಕಂಟೈನ್‍ಮೆಂಟ್ ಪ್ರದೇಶಕ್ಕೆ ಇನ್ಸಿಡೆಂಟ್ ಕಮಾಂಡರ್ ರಾಜಣ್ಣ ಭೇಟಿ
ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಇನ್ಸಿಡೆಂಟ್ ಕಮಾಂಡರ್ ರಾಜಣ್ಣ ಅವರು ನರಿಕೊಂಬು ಗ್ರಾಮದ ಕಂಟೈನ್‍ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಕಂಟೈನ್‍ಮೆಂಟ್ ಪ್ರದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾರು 75 ವರ್ಷ ವಯಸ್ಸಿನ ಹಿರಿಯ ಹಾಗೂ 4 ವರ್ಷದ ಮಗುವನ್ನು ಇಒ ರಾಜಣ್ಣ ಅವರು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಿ ತಕ್ಷಣ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

ಈ ಸಂಧರ್ಭ ನರಿಕೊಂಬು ಗ್ರಾ.ಪಂ. ಪಿಡಿಒ, ಪೆÇಲೀಸ್ ಅಧಿಕಾರಿಗಳು, ಕೊರೋನಾ ವಾರಿಯರ್ಸ್, ಆಶಾ ಕಾರ್ಯಕರ್ತೆಯರು ಮೊದಲಾದವರು ಉಪಸ್ಥಿತರಿದ್ದರು. 
  • Blogger Comments
  • Facebook Comments

0 comments:

Post a Comment

Item Reviewed: ನರಿಕೊಂಬು ಕಂಟೈನ್‍ಮೆಂಟ್ ಪ್ರದೇಶಕ್ಕೆ ಇನ್ಸಿಡೆಂಟ್ ಕಮಾಂಡರ್ ರಾಜಣ್ಣ ಭೇಟಿ Rating: 5 Reviewed By: karavali Times
Scroll to Top