ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಬಿಲ್ ಸಂಗ್ರಹಕ್ಕೆ ಸರಕಾರದ ಆದೇಶ - Karavali Times ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಬಿಲ್ ಸಂಗ್ರಹಕ್ಕೆ ಸರಕಾರದ ಆದೇಶ - Karavali Times

728x90

30 April 2020

ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಬಿಲ್ ಸಂಗ್ರಹಕ್ಕೆ ಸರಕಾರದ ಆದೇಶಬೆಂಗಳೂರು (ಕರಾವಳಿ ಟೈಮ್ಸ್) : ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಬಿಲ್ ಸಂಗ್ರಹಕ್ಕೆ ಎಸ್ಕಾಂಗೆ ಸರಕಾರ ಆದೇಶ ನೀಡಿದೆ. ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗೆ ಸರಕಾರ ನಿರ್ದೇಶನ ನೀಡಿದ್ದು, ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡಿ ಬಿಲ್ ಸಂಗ್ರಹಿಸುವಂತೆ ಆದೇಶಿಸಿದೆ.

ಆನ್‍ಲೈನ್, ವಾಟ್ಸಪ್, ಇ-ಮೇಲ್‍ಗಳ ಮೂಲಕ ವಿದ್ಯುತ್ ಬಳಕೆಯ ಬಗ್ಗೆ ಬಿಲ್‍ಗಳನ್ನು ಸಾರ್ವಜನಿಕರಿಗೆ ನೀಡಲು ಸೂಚನೆ ನೀಡಲಾಗಿದೆ. ಗ್ರಾಹಕರು ಎಸ್ಕಾಂ ಮೊಬೈಲ್ ಆಪ್ ಮೂಲಕ ಬಿಲ್ ಪಡೆಯಬಹುದು ಅಥವಾ 1912 ಹೆಲ್ಪ್‍ಲೈನ್ ನಂಬರ್‍ಗೆ ಕರೆ ಮಾಡಿ ನಿಮ್ಮ ವಿದ್ಯುತ್ ಬಿಲ್ ಮಾಹಿತಿ ಪಡೆಯಬಹುದಾಗಿದೆ.

ಎಸ್ಕಾಂಗೆ ಸಾರ್ವಜನಿಕರು ನೀಡಿದ ಫೆÇೀನ್, ವಾಟ್ಸಪ್, ಇ-ಮೇಲ್‍ಗಳಿಗೆ, ಮೆಸೇಜ್‍ಗಳ ಮೂಲಕ ವಿದ್ಯುತ್ ಬಿಲ್, ಎಪ್ರಿಲ್ ತಿಂಗಳ ವಿದ್ಯುತ್ ಬಳಕೆ ವಿವರ ಕಳಿಸಲು ಸರಕಾರ ಸೂಚಿಸಿದೆ. ಗ್ರಾಹಕರು ಆನ್‍ಲೈನ್ ಮೂಲಕ, ವಿದ್ಯುತ್ ನಿಗಮದ ಕಛೇರಿ ಕ್ಯಾಶ್ ಕೌಂಟರ್, ಕರ್ನಾಟಕ ಒನ್ ವೆಬ್ ಸೈಟ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಇಂಟರ್‍ನೆಟ್ ಬ್ಯಾಂಕಿಂಗ್, ಸ್ಪಾಟ್ ಬಿಲ್ಲಿಂಗ್ ಮೆಷಿನ್ ಮೂಲಕ ಬಿಲ್ ಪಾವತಿಸಬಹುದು ಎಂದು ಸರಕಾರದ ಪ್ರಕಟಣೆ ತಿಳಿಸಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್‍ನಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಬಿಲ್ ಸಂಗ್ರಹಕ್ಕೆ ಸರಕಾರದ ಆದೇಶ Rating: 5 Reviewed By: karavali Times
Scroll to Top