ಗೋಳ್ತಮಜಲು : ಉದ್ಯಮಿ ಯೂಸುಫ್ ಹಾಜಿ ನಿಧನ - Karavali Times ಗೋಳ್ತಮಜಲು : ಉದ್ಯಮಿ ಯೂಸುಫ್ ಹಾಜಿ ನಿಧನ - Karavali Times

728x90

22 April 2020

ಗೋಳ್ತಮಜಲು : ಉದ್ಯಮಿ ಯೂಸುಫ್ ಹಾಜಿ ನಿಧನ




ಬಂಟ್ವಾಳ (ಕರಾವಳಿ ಟೈಮ್ಸ್)  : ತಾಲೂಕಿನ ಉದ್ಯಮಿ, ಹಜಾಜ್ ಸಮೂಹ ಸಂಸ್ಥೆಗಳ ಪಾಲುದಾರ ಹಾಜಿ ಜಿ ಯೂಸುಫ್ (ಮೋನಾಜಿ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಬುಧವಾರ ಬೆಳಿಗ್ಗೆ ಗೋಳ್ತಮಜಲಿನ ಸ್ವಗೃಹದಲ್ಲಿ ನಿಧನರಾದರು.

ಹಜಾಜ್ ಸಮೂಹ ಸಂಸ್ಥೆಗಳ ಮಾಲಕ, ಸಾಹಿತಿ ದಿವಂಗತ ಹಾಜಿ ಜಿ ಅಬ್ದುಲ್ ಖಾದರ್ ಗೋಳ್ತಮಜಲು ಅವರ ಹಿರಿ ಪುತ್ರರಾದ ಯೂಸುಫ್ ಹಾಜಿ ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯರೂ,
ಗೋಳ್ತಮಜಲು  ಗೋಲ್ತಮಜಲು ಜುಮಾ ಮಸೀದಿ ಆಡಳಿತ ಸಮಿತಿಯ ಉಪಾಧ್ಯಕ್ಷರೂ, ಗೋಳ್ತಮಜಲು  ಶಂಸುಲ್ ಉಲಮಾ ಕ್ರಿಯಾ ಸಮಿತಿಯ ಗೌರವಾಧ್ಯಕ್ಷರೂ ಆಗಿದ್ದ ಇವರು ಹಲವು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಕ್ರಿಯ ಸೇವೆ ಸಲ್ಲಿಸಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಗೋಳ್ತಮಜಲು : ಉದ್ಯಮಿ ಯೂಸುಫ್ ಹಾಜಿ ನಿಧನ Rating: 5 Reviewed By: karavali Times
Scroll to Top