ಸೋಮೇಶ್ವರದಲ್ಲಿ ಅಧಿಕಾರಿಗಳಿಂದ ಶಿಸ್ತಿನ ಗಡಿ ನಿಯಂತ್ರಣ - Karavali Times ಸೋಮೇಶ್ವರದಲ್ಲಿ ಅಧಿಕಾರಿಗಳಿಂದ ಶಿಸ್ತಿನ ಗಡಿ ನಿಯಂತ್ರಣ - Karavali Times

728x90

21 April 2020

ಸೋಮೇಶ್ವರದಲ್ಲಿ ಅಧಿಕಾರಿಗಳಿಂದ ಶಿಸ್ತಿನ ಗಡಿ ನಿಯಂತ್ರಣಸೋಮೇಶ್ವರ (ಕರಾವಳಿ ಟೈಮ್ಸ್) : ಕೋವಿಡ್-19 ವೈರಸ್ ನಿಯಂತ್ರಣಕ್ಕಾಗಿ ಜಿಲ್ಲಾ ಗಡಿ ಪ್ರದೇಶಗಳಲ್ಲಿ ಪೊಲೀಸರು ಅತ್ಯಂತ ಬಿಗುವಿನ ಕ್ರಮ ಕೈಗೊಂಡಿದ್ದು, ಉಡುಪಿ ಜಿಲ್ಲೆಯ ಸೋಮೇಶ್ವರದಲ್ಲಿ ಪೊಲೀಸರು ಅತ್ಯಂತ ಶಿಸ್ತಿನಿಂದ ಗಡಿ ದಾಟುವ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಗಡಿ ದಾಟಿ ಬರುವ ಎಲ್ಲಾ ವಾಹನಗಳನ್ನು ಪೊಲೀಸರು ಸಂಪೂರ್ಣ ತಪಾಸಣೆಗೊಳಪಡಿಸಿ ತುರ್ತು ಹಾಗೂ ಅನಿವಾರ್ಯ ಪರಿಸ್ಥಿತಿ ಇದ್ದವರಿಗೆ ಮಾತ್ರ ಗಡಿ ದಾಟಿ ಸಂಚರಿಸಲು ಅವಕಾಶ ನೀಡುತ್ತಿದ್ದಾರೆ. ಅಲ್ಲದೆ ವಾಹನಗಳ ಹಾಗೂ ಪ್ರಯಾಣಿಕರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಸ್ಜ್ರೀನಿಂಗ್ ನಡೆಸಿ ಮುಂದಕ್ಕೆ ಕಳುಹಿಸಲಾಗುತ್ತಿದೆ.

ಸೋಮೇಶ್ವರದ ಬಳಿಕ ಆಗುಂಬೆ ಘಾಟಿಯಲ್ಲೂ ಕಠಿಣ ತಪಾಸಣೆ ನಡೆಸಿ ವಾಹನ ಸಂಚಾರಕ್ಕೆ ಅನುಮತಿ ನೀಡುವ ಮೂಲಕ ಪೊಲೀಸರು ಗಡಿ ದಾಟುವ ಮೂಲಕ ಕೋವಿಡ್ ವೈರಸ್ ಹರಡುವ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸುತ್ತಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸೋಮೇಶ್ವರದಲ್ಲಿ ಅಧಿಕಾರಿಗಳಿಂದ ಶಿಸ್ತಿನ ಗಡಿ ನಿಯಂತ್ರಣ Rating: 5 Reviewed By: karavali Times
Scroll to Top