ಸರಕಾರದ ಪರಿಹಾರ ಸಾಮಾಗ್ರಿಗಳ ಮೇಲೆ ನಾಯಕರ ಪೆÇೀಟೋ : ಪುಕ್ಕಟೆ ಪ್ರಚಾರ ಪಡೆಯುತ್ತಿರುವ ಬಿಜೆಪಿ ವಿರುದ್ದ ಕುಮಾರಸ್ವಾಮಿ ಕೆಂಡಾಮಂಡಲ - Karavali Times ಸರಕಾರದ ಪರಿಹಾರ ಸಾಮಾಗ್ರಿಗಳ ಮೇಲೆ ನಾಯಕರ ಪೆÇೀಟೋ : ಪುಕ್ಕಟೆ ಪ್ರಚಾರ ಪಡೆಯುತ್ತಿರುವ ಬಿಜೆಪಿ ವಿರುದ್ದ ಕುಮಾರಸ್ವಾಮಿ ಕೆಂಡಾಮಂಡಲ - Karavali Times

728x90

9 April 2020

ಸರಕಾರದ ಪರಿಹಾರ ಸಾಮಾಗ್ರಿಗಳ ಮೇಲೆ ನಾಯಕರ ಪೆÇೀಟೋ : ಪುಕ್ಕಟೆ ಪ್ರಚಾರ ಪಡೆಯುತ್ತಿರುವ ಬಿಜೆಪಿ ವಿರುದ್ದ ಕುಮಾರಸ್ವಾಮಿ ಕೆಂಡಾಮಂಡಲ



ಬೆಂಗಳೂರು (ಕರಾವಳಿ ಟೈಮ್ಸ್) : ಕೋರೋನಾ ಹಾವಳಿಯಿಂದ ಜನ ಪಾರಾಗುವುದು ಹೇಗೆ ಎಂದು ಇಡೀ ಜಗತ್ತು ಚಿಂತಿಸುತ್ತಿದ್ದರೆ, ಇತ್ತ ಬಿಜೆಪಿಯ ಕೆಲ ನಾಯಕರುಗಳು ಸರಕಾರದ ಪರಿಹಾರ ಸಾಮಗ್ರಿ ಮೇಲೆ ತಮ್ಮ ಫೆÇೀಟೋ ಹಾಕಿಕೊಂಡು ಪ್ರಚಾರ  ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದೇನು ಜನಸಾಮಾನ್ಯರಿಗೆ ಸರಕಾರ ನೀಡುವ ಪರಿಹಾರ ಸಾಮಗ್ರಿಯೋ? ಬಿಜೆಪಿ ಪಕ್ಷದ ಕೊಡುಗೆಯೋ? ಅಥವಾ ಲಿಂಬಾವಳಿಯವರ  ವೈಯಕ್ತಿಕ ದಾನವೋ? ಅಥವಾ ಲಜ್ಜೆಗೇಡಿ ರಾಜಕಾರಣವೋ? ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರ ಹೇಳುವರೇ? ಎಂದು ಕುಟುಕಿದ್ದಾರೆ.

ಒಂದು ಸಮುದಾಯವನ್ನು ಕೊರೋನ ಮಹಾಮಾರಿಗೆ ಸಮೀಕರಿಸುವವರ ಬಗ್ಗೆ ದಿವ್ಯ ಮೌನ ತಳೆದ  ಪ್ರಧಾನಿಗಳು ಬಡ ಕಾರ್ಮಿಕರ ಪರಿಹಾರ ಸಾಮಗ್ರಿಯನ್ನು ಕೆಲ ಪ್ರಚಾರಪ್ರಿಯರು ತಮ್ಮ ಫೆÇೀಟೋ ಸ್ಟಿಕರ್ ಅಂಟಿಸಿ ನೀಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸರಕಾರದ ಪರಿಹಾರ ಸಾಮಾಗ್ರಿಗಳ ಮೇಲೆ ನಾಯಕರ ಪೆÇೀಟೋ : ಪುಕ್ಕಟೆ ಪ್ರಚಾರ ಪಡೆಯುತ್ತಿರುವ ಬಿಜೆಪಿ ವಿರುದ್ದ ಕುಮಾರಸ್ವಾಮಿ ಕೆಂಡಾಮಂಡಲ Rating: 5 Reviewed By: karavali Times
Scroll to Top