ಲಾಕ್‍ಡೌನ್ ಸಂಕಷ್ಟ : ನೀಟ್, ಕೆ-ಸೆಟ್ ವಿದ್ಯಾರ್ಥಿಗಳ ನೆರವಿಗೆ ಸರಕಾರದಿಂದ ಆಪ್, ವೆಬ್‍ಸೈಟ್ ಮೂಲಕ ತರಬೇತಿ - Karavali Times ಲಾಕ್‍ಡೌನ್ ಸಂಕಷ್ಟ : ನೀಟ್, ಕೆ-ಸೆಟ್ ವಿದ್ಯಾರ್ಥಿಗಳ ನೆರವಿಗೆ ಸರಕಾರದಿಂದ ಆಪ್, ವೆಬ್‍ಸೈಟ್ ಮೂಲಕ ತರಬೇತಿ - Karavali Times

728x90

20 April 2020

ಲಾಕ್‍ಡೌನ್ ಸಂಕಷ್ಟ : ನೀಟ್, ಕೆ-ಸೆಟ್ ವಿದ್ಯಾರ್ಥಿಗಳ ನೆರವಿಗೆ ಸರಕಾರದಿಂದ ಆಪ್, ವೆಬ್‍ಸೈಟ್ ಮೂಲಕ ತರಬೇತಿ



ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಲಾಕ್‍ಡೌನ್ ಪರಿಣಾಮದಿಂದಾಗಿ ವಿದ್ಯಾರ್ಥಿ ಸಮುದಾಯ ಬಹಳಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅದರಲ್ಲೂ ಪ್ರಮುಖವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಿಗೆ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಇದೀಗ ಸರಕಾರ ನೀಟ್ ಹಾಗೂ ಕೆ-ಸೆಟ್ ಪರೀಕ್ಷಾ ಆಕಾಂಕ್ಷಿಗಳ ನೆರವಿಗೆ ಯೋಜನೆ ರೂಪಿಸಿದ್ದು, ಆಪ್ ಹಾಗೂ ವೆಬ್‍ಸೈಟ್‍ಗಳ ಮೂಲಕ ತರಬೇತಿ ನೀಡಲಿದೆ.

ಆಪ್ ಹಾಗೂ ಗೆಟ್‍ಸೆಟ್‍ಗೋ ಎಂಬ ವೆಬ್‍ಸೈಟ್ ಮೂಲಕ ಕೆ-ಸೆಟ್ ಹಾಗೂ ನೀಟ್ ಪರೀಕ್ಷಾಕಾಂಕ್ಷಿಗಳಿಗೆ ಸರ್ಕಾರ ತರಬೇತಿ ನೀಡಲಿದೆ. ಈ ಕುರಿತ ಆಪ್ ಹಾಗೂ ವೆಬ್‍ಸೈಟ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರು ಇಂದು ಬಿಡುಗಡೆಗೊಳಿಸಲಿದ್ದಾರೆ.

https://getcetgo.in/ ವೆಬ್‍ಸೈಟ್ ಮೂಲಕ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಸಿಇಟಿ ಬರೆಯಲು ನೋಂದಾವಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಧ್ಯಯನಕ್ಕೆ ಅಗತ್ಯವಿರುವ ಪಠ್ಯಗಳನ್ನು ಒದಗಿಸಲಿದೆ. ತರಬೇತಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಸಿಇಟಿ ರೋಲ್ ನಂಬರ್ ಮೂಲಕ ಲಾಗ್-ಇನ್ ಆಗಬಹುದು. ಹಾಗೂ ಪಾಸ್ವರ್ಡ್‍ಗಳನ್ನು ಸಿಇಟಿಗೆ ನೋಂದಾವಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಈ ಪಾಸ್ವರ್ಡ್‍ಗಳನ್ನು ಹಾಕುವ ಮೂಲಕ ವಿದ್ಯಾರ್ಥಿಗಳು ಲಾಗ್-ಇನ್ ಆಗಿ ತರಬೇತಿ ಪಡೆಬಹುದಾಗಿದೆ.

ಗೆಟ್‍ಸೆಟ್‍ಗೋ ಎಂಬ ಆಪ್‍ನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಈ ಆಪ್ ಮೂಲಕವೂ ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಪಡೆಯಬಹುದಾಗಿದೆ. ಆದರೆ, ಈ ಆಪ್ ಬುಧವಾರದ ಬಳಿಕವಷ್ಟೇ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ವೆಬ್‍ಸೈಟ್‍ಗಳಲ್ಲಿ ನೀಡಲಾಗಿರುವ ಲಿಂಕ್ ಮೂಲಕ ವಿದ್ಯಾರ್ಥಿಗಳು GetCETGo v1.0 ಆಪ್ ಪಡೆಯಬಹುದಾಗಿದೆ. ಆಪ್‍ನಲ್ಲಿ ಸಿನಾಪ್ಸಿಸ್, ಕ್ಲಾಸ್ ವರ್ಕ್ ಕ್ವೆಷನ್ಸ್, ಹೋಂವರ್ಕ್ ಪ್ರಾಕ್ಟಿಸ್ ಕ್ವೆಷನ್ಸ್ ಮತ್ತು ಮಾರ್ಕ್ ಟೆಸ್ಟ್‍ಗಳು ಇರಲಿವೆ. ಇಂಟರ್ನೆಟ್ ಸೇವೆ ಇಲ್ಲದಿದ್ದರೂ ವಿದ್ಯಾರ್ಥಿಗಳು ಆಫ್‍ಲೈನ್ ಮೂಲಕ ಅಗತ್ಯವಿರುವ ಅಧ್ಯಯನಕ್ಕೆ ಸಂಬಂಧಪಟ್ಟಂತಹ ವಿಷಯಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.

ಶಿಕ್ಷಣ ಇಲಾಖೆ ಈಗಾಗಲೇ ಗೆಟ್‍ಸೆಟ್‍ಗೋ ಎಂಬ ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದು, ಈ ಮೂಲಕ ಅಧ್ಯಯನಕ್ಕೆ ಸಂಬಂಧಪಟ್ಟಂತಹ ವಿಡಿಯೋಗಳನ್ನು ಪೆÇೀಸ್ಟ್ ಮಾಡಲಿದೆ.  shorturl.at/zG259 ಇದು ಯೂಟ್ಯೂಬ್ ಚಾನೆಲ್ ಲಿಂಕ್ ಆಗಿದ್ದು, ಇಲಾಖೆಯು ಹಂತ ಹಂತವಾಗಿ ವಿಡಿಯೋಗಳನ್ನು ಬಿಡುಗಡೆ ಮಾಡಲಿದೆ. ಸಿಇಟಿಗೆ ಸಂಬಂಧ ವಿಚಾರಗಳಷ್ಟೇ ಅಲ್ಲದೆ, ರಿವಿಷನ್ ಕುರಿತ ವಿಡಿಯೋಗಳು ಇಲ್ಲಿ ಲಭ್ಯವಾಗಲಿದೆ. ನೀಟ್ ಹಾಗೂ ಸಿಇಟಿಗಳ ವಿಷಯಕ್ಕೆ ತಕ್ಕಂತೆ ಚಾನೆಲ್ ವಿಡಿಯೋಗಳನ್ನು ಪ್ರಕಟಿಸಲಿದೆ.
  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್ ಸಂಕಷ್ಟ : ನೀಟ್, ಕೆ-ಸೆಟ್ ವಿದ್ಯಾರ್ಥಿಗಳ ನೆರವಿಗೆ ಸರಕಾರದಿಂದ ಆಪ್, ವೆಬ್‍ಸೈಟ್ ಮೂಲಕ ತರಬೇತಿ Rating: 5 Reviewed By: karavali Times
Scroll to Top