ಆಶಾ ಕಾರ್ಯಕರ್ತರು, ನರ್ಸ್, ಅಂಗನವಾಡಿ ಕಾರ್ಯಕರ್ತರು ನೈಜ ದೇಶ ಭಕ್ತರು : ರಾಹುಲ್ ಗಾಂಧಿ ಶ್ಲಾಘನೆ - Karavali Times ಆಶಾ ಕಾರ್ಯಕರ್ತರು, ನರ್ಸ್, ಅಂಗನವಾಡಿ ಕಾರ್ಯಕರ್ತರು ನೈಜ ದೇಶ ಭಕ್ತರು : ರಾಹುಲ್ ಗಾಂಧಿ ಶ್ಲಾಘನೆ - Karavali Times

728x90

10 April 2020

ಆಶಾ ಕಾರ್ಯಕರ್ತರು, ನರ್ಸ್, ಅಂಗನವಾಡಿ ಕಾರ್ಯಕರ್ತರು ನೈಜ ದೇಶ ಭಕ್ತರು : ರಾಹುಲ್ ಗಾಂಧಿ ಶ್ಲಾಘನೆನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಆಶಾ ಕಾರ್ಯಕರ್ತರು, ನರ್ಸ್‍ಗಳು, ಅಂಗನವಾಡಿ ಕಾರ್ಯಕರ್ತರ ತ್ಯಾಗವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಅಗತ್ಯದ ಸಂದರ್ಭದಲ್ಲಿ ದೇಶಕ್ಕಾಗಿ ದುಡಿಯುವುದೇ ನಿಜವಾದ ದೇಶಭಕ್ತಿ. ಆಶಾ ಕಾರ್ಯಕರ್ತರು, ನರ್ಸ್‍ಗಳು, ಅಂಗನವಾಡಿ ಕಾರ್ಯಕರ್ತರು ನಿಜವಾದ ದೇಶಭಕ್ತರು ಎಂದ ರಾಹುಲ್ ಮುಖ್ಯವಾಹಿನಿಯಿಂದ ದೂರವುಳಿದು ಜನರ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿದ್ದಾರೆ.

ಭಯ ಹಾಗೂ ತಪ್ಪು ಮಾಹಿತಿಗಳು ವೈರಸ್‍ಗಿಂತ ಅಪಾಯಕಾರಿಯಾಗಿರುವ ಪರಿಸ್ಥಿತಿಯಲ್ಲಿ ಸಮುದಾಯ ಕಾರ್ಯಕರ್ತರು ಜನರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದಿರುವ ರಾಹುಲ್ ಗಾಂಧಿ ಒಂದು ದೇಶವಾಗಿ ನಾವು ಅವರಿಗೆ ಆಭಾರಿಯಾಗಿದ್ದೇವೆ. ಈ ಬಿಕ್ಕಟ್ಟು ಶಮನವಾದ ನಂತರ ಅವರ ಅಪೂರ್ವ ಕೊಡುಗೆಯನ್ನು ಗುರುತಿಸಿ ಅವರ ಕೆಲಸದ ಪರಿಸ್ಥಿತಿಗಳು ಸುಧಾರಣೆಯಾಗಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಆಶಾ ಕಾರ್ಯಕರ್ತರು, ನರ್ಸ್, ಅಂಗನವಾಡಿ ಕಾರ್ಯಕರ್ತರು ನೈಜ ದೇಶ ಭಕ್ತರು : ರಾಹುಲ್ ಗಾಂಧಿ ಶ್ಲಾಘನೆ Rating: 5 Reviewed By: karavali Times
Scroll to Top