ಸಾನಿಯಾ ಮಿರ್ಜಾ ಅಪರೂಪದ ಗೌರವಕ್ಕೆ ಭಾಜನ : ‘ಮೊದಲ ಭಾರತೀಯ’ ಎಂಬ ದಾಖಲೆ - Karavali Times ಸಾನಿಯಾ ಮಿರ್ಜಾ ಅಪರೂಪದ ಗೌರವಕ್ಕೆ ಭಾಜನ : ‘ಮೊದಲ ಭಾರತೀಯ’ ಎಂಬ ದಾಖಲೆ - Karavali Times

728x90

30 April 2020

ಸಾನಿಯಾ ಮಿರ್ಜಾ ಅಪರೂಪದ ಗೌರವಕ್ಕೆ ಭಾಜನ : ‘ಮೊದಲ ಭಾರತೀಯ’ ಎಂಬ ದಾಖಲೆ



ನವದೆಹಲಿ (ಕರಾವಳಿ ಟೈಮ್ಸ್) : ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗುರುವಾರ ಅಪರೂಪದ ಗೌರವಕ್ಕೆ ಭಾಜನರಾಗಿದ್ದು, ಏಷ್ಯಾ/ ಓಷಿಯಾನಿಯಾ ವಲಯದಿಂದ ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಾನಿಯಾ ಅವರೊಂದಿಗೆ ಇಂಡೋನೇಷ್ಯಾದ ಟೆನಿಸ್ ಆಟಗಾರ್ತಿ ಪ್ರಿಸ್ಕಾ ಮೆಡೆಲ್ ಎನ್ ನುಗ್ರೋರೊ ಕೂಡ ನಾಮ ನಿರ್ದೇಶನಗೊಂಡಿದ್ದಾರೆ. ಸಾನಿಯಾ ಇತ್ತೀಚೆಗೆ ನಾಲ್ಕು ವರ್ಷಗಳ ನಂತರ ಫೆಡ್ ಕಪ್‍ಗೆ ಮರಳಿದ್ದರು. ತಮ್ಮ 18 ತಿಂಗಳ ಪುತ್ರ ಇಜಾನ್‍ನನ್ನು ಸ್ಟ್ಯಾಂಡ್‍ನಲ್ಲಿ ಕೂರಿಸಿ ಆಟವಾಡಿ ಮೊದಲ ಬಾರಿಗೆ ಭಾರತ ಪ್ಲೇ-ಆಫ್ ಅರ್ಹತೆ ಪಡೆಯಲು ನೆರವಾಗಿದ್ದರು.

2003ರಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿ ಟೆನಿಸ್ ಅಂಗಳಕ್ಕೆ ಕಾಲಿಟ್ಟಿದ್ದ ನನಗೆ ಹೆಮ್ಮೆ ಎನಿಸುತ್ತಿದೆ. ಇದು 18 ವರ್ಷಗಳ ಸುದೀರ್ಘ ಪ್ರಯಾಣ. ಭಾರತೀಯ ಟೆನಿಸ್‍ನ ಯಶಸ್ಸಿಗೆ ಸಹಕರಿಸಿದ ಬಗ್ಗೆ ಹೆಮ್ಮೆ ಇದೆ ಎಂದು ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳ ನಡೆದ ಏಷ್ಯಾ/ ಓಷಿಯಾನಿಯಾ ಪಂದ್ಯಾವಳಿಯಲ್ಲಿ ಫೆಡ್ ಕಪ್ ಫಲಿತಾಂಶ ನನ್ನ ವೃತ್ತಿ ಜೀವನದ ಅತ್ಯುತ್ತಮ ಸಾಧನೆಗಳಲ್ಲಿ ಒಂದಾಗಿದೆ. ಫೆಡ್‍ಕಪ್ ಹಾರ್ಟ್ ಅವಾರ್ಡ್ಸ್ ಆಯ್ಕೆ ಸಮಿತಿ ನನ್ನನ್ನು ಗುರುತಿಸಲ್ಪಟ್ಟಿದ್ದಕ್ಕೆ ಆಭಾರಿಯಾಗಿದ್ದೇನೆ ಎಂದು 33 ವರ್ಷದ  ಸಾನಿಯಾ ಹೇಳಿದ್ದಾರೆ.

ಹಾರ್ಟ್ ಪ್ರಶಸ್ತಿಗಳ ವಿಜೇತರನ್ನು ಅಭಿಮಾ£ನಿಗಳು ಆನ್‍ಲೈನ್ ಮತದಾನದ ಮೂಲಕ ಆಯ್ಕೆ ಮಾಡಲಿದ್ದಾರೆ. ಮೇ 1 ರಿಂದ 8 ರವರೆಗೆ ಮತದಾನ ಮುಂದುವರಿಯಲಿದೆ. ಈ ವರ್ಷ ಫೆಡ್ ಕಪ್ ಹಾರ್ಟ್ ಪ್ರಶಸ್ತಿಗಳ 11 ನೇ ಆವೃತ್ತಿಗೆ ಯುರೋಪ್/ ಆಫ್ರಿಕಾ ವಲಯದಿಂದ ಆನೆಟ್ ಕೊಂಟಾವಿಟ್ (ಎಸ್ಟೋನಿಯಾ) ಮತ್ತು ಎಲಿಯೊನೊರಾ ಮೊಲಿನಾರೊ (ಲಕ್ಸೆಂಬರ್ಗ್), ಯುರೋಪ್/ ಅಫ್ರಿಕಾ ಜೋನ್‍ನಿಂದ ನಾಮಕರಣಗೊಂಡಿದ್ದಾರೆ. ಮೆಕ್ಸಿಕೊದ ಫೆರ್ನಾಂಡಾ ಕಾಂಟ್ರೆರಾಸ್ ಗೊಮೆಜ್ ಮತ್ತು ಪರಾಗ್ವೆಯ ವೆರೋ£ಕಾ ಸೆಪೆಡ್ ಅಮೆರಿಕಾದಿಂದ  ನಾಮಕರಣಗೊಂಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸಾನಿಯಾ ಮಿರ್ಜಾ ಅಪರೂಪದ ಗೌರವಕ್ಕೆ ಭಾಜನ : ‘ಮೊದಲ ಭಾರತೀಯ’ ಎಂಬ ದಾಖಲೆ Rating: 5 Reviewed By: karavali Times
Scroll to Top