ದ್ವಿಚಕ್ರದಲ್ಲಿ ಸವಾರ ಮಾತ್ರ, 4 ವ್ಹೀಲರ್‍ನಲ್ಲಿ ಇಬ್ಬರಿಗೆ ಅವಕಾಶ : ಹೊಸ ಮಾರ್ಗಸೂಚಿಯಲ್ಲಿ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ ಕೇಂದ್ರ ಸರಕಾರ - Karavali Times ದ್ವಿಚಕ್ರದಲ್ಲಿ ಸವಾರ ಮಾತ್ರ, 4 ವ್ಹೀಲರ್‍ನಲ್ಲಿ ಇಬ್ಬರಿಗೆ ಅವಕಾಶ : ಹೊಸ ಮಾರ್ಗಸೂಚಿಯಲ್ಲಿ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ ಕೇಂದ್ರ ಸರಕಾರ - Karavali Times

728x90

15 April 2020

ದ್ವಿಚಕ್ರದಲ್ಲಿ ಸವಾರ ಮಾತ್ರ, 4 ವ್ಹೀಲರ್‍ನಲ್ಲಿ ಇಬ್ಬರಿಗೆ ಅವಕಾಶ : ಹೊಸ ಮಾರ್ಗಸೂಚಿಯಲ್ಲಿ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ ಕೇಂದ್ರ ಸರಕಾರ



ನವದೆಹಲಿ (ಕರಾವಳಿ ಟೈಮ್ಸ್) : ಮತ್ತೆ ವಿಸ್ತರಣೆಗೆ ಮಾಡಿರುವ 2ನೇ ಆವೃತ್ತಿಯ ಲಾಕ್‍ಡೌನ್‍ಗೆ ಸಂಬಂಧಿಸಿ ಕೇಂದ್ರ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದೆ. ಪಾಸ್ ಇದ್ದರೂ ವಾಹನ ಸವಾರರು ಇನ್ನು ಮುಂದೆ ಬೇಕಾಬಿಟ್ಟಿ ಸಂಚಾರ ಮಾಡುವಂತಿಲ್ಲ.

ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಇಂದಿನಿಂದ 19 ದಿನಗಳ ಕಾಲ ಅಂದರೆ ಮೇ 3ರವರೆಗೆ ಮತ್ತೊಂದು ಅವಧಿಯ ಲಾಕ್‍ಡೌನ್ ಘೋಷಿಸಿದೆ. ಈ ಅವಧಿಯಲ್ಲಿ ಸಾರ್ವಜನಿಕರು ನಡೆದುಕೊಳ್ಳಬೇಕಾದ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರಕಾರ ಇಂದು ಬಿಡುಗಡೆಗೊಳಿಸಿತ್ತು. ಈ ಸಂದರ್ಭ ಸರಕಾರೇತರ ಅಥವಾ  ಖಾಸಗಿ ವಾಹನಗಳ ಕುರಿತು ಕೆಲವು ಸೂಚನೆಗಳನ್ನು ನೀಡಲಾಗಿದೆ. ಅದರಂತೆ ದ್ವಿಚಕ್ರ ವಾಹನದಲ್ಲಿ ಸವಾರರು ಮಾತ್ರ ಹಾಗೂ ನಾಲ್ಕು ಚಕ್ರದ ವಾಹನಗಳಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬಹುದು ಎಂದು ಹೇಳಲಾಗಿದೆ.

ಲಾಕ್‍ಡೌನ್ ವಿಧಿಸಿದ್ದರೂ ಸಾರ್ವಜನಿಕರು ವಾಹನಗಳನ್ನು ರಸ್ತೆಗೆ ಇಳಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ನಾಲ್ಕು ಚಕ್ರದ ವಾಹನದಲ್ಲಿ ತೆರಳುವವರು ಡ್ರೈವರ್ ಸೀಟ್ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವಂತಿಲ್ಲ. ಹಿಂಬದಿಯ ಸೀಟ್‍ನಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ.

ಹಾಟ್ ಸ್ಪಾಟ್‍ಗಳಲ್ಲಿ ಕಠಿಣ ನಿಯಮ


ಇನ್ನು ಕೊರೋನಾ ವೈರಸ್ ಹಾಟ್ ಸ್ಪಾಟ್‍ಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ. ಕೆಲಸದ ಸ್ಥಳದಲ್ಲಿ 6 ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ವಿಧಿಸಲಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗದರ್ಶಿ ಸೂತ್ರದ ಪ್ರಕಾರ ಸಾರ್ವಜನಿಕ ಸ್ಥಳ, ಉದ್ಯೋಗ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಮದ್ಯ, ಗುಟ್ಕಾ, ತಂಬಾಕು ಮಾರಾಟಕ್ಕೆ ನಿಷೇಧ. ಮೊದಲ ಬಾರಿಗೆ ಲಾಕ್‍ಡೌನ್ ಘೋಷಣೆಯಾದ ಬಳಿಕ ಯಾವುದಕ್ಕೆ ವಿನಾಯಿತಿಗಳನ್ನು ನೀಡಲಾಗಿತ್ತೋ ಅವುಗಳಿಗೆ ವಿನಾಯಿತಿ ಮುಂದುವರಿಸಲಾಗಿದೆ.

ಈ ಮಾರ್ಗಸೂಚಿಯಲ್ಲಿ ವಿನಾಯಿತಿ ಪಡೆದ ಕ್ಷೇತ್ರಗಳಲ್ಲಿ ಅನುಮತಿ ನೀಡಬೇಕೋ ಬೇಡವೋ ಎಂಬ ನಿರ್ಧಾರವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದ್ದು, ರಾಜ್ಯ ಸರ್ಕಾರ ಅನುಮತಿ ನೀಡಿದರೆ ಎ.20ರ ನಂತರ ಕೆಲ ಕ್ಷೇತ್ರಗಳು ತೆರೆಯಲಿದೆ. ರಸ್ತೆ ಬದಿಯ ಡಾಬಾ ಮತ್ತು ಟ್ರಕ್ ರಿಪೇರಿ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ದ್ವಿಚಕ್ರದಲ್ಲಿ ಸವಾರ ಮಾತ್ರ, 4 ವ್ಹೀಲರ್‍ನಲ್ಲಿ ಇಬ್ಬರಿಗೆ ಅವಕಾಶ : ಹೊಸ ಮಾರ್ಗಸೂಚಿಯಲ್ಲಿ ವಾಹನ ಸವಾರರಿಗೆ ಬಿಗ್ ಶಾಕ್ ನೀಡಿದ ಕೇಂದ್ರ ಸರಕಾರ Rating: 5 Reviewed By: karavali Times
Scroll to Top