ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ: ಸೇವಾಸಿಂಧು ಪೆÇೀರ್ಟಲ್ ಗಳ ಮೂಲಕ ಅರ್ಜಿ ಸ್ವೀಕಾರ - Karavali Times ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ: ಸೇವಾಸಿಂಧು ಪೆÇೀರ್ಟಲ್ ಗಳ ಮೂಲಕ ಅರ್ಜಿ ಸ್ವೀಕಾರ - Karavali Times

728x90

8 May 2020

ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ: ಸೇವಾಸಿಂಧು ಪೆÇೀರ್ಟಲ್ ಗಳ ಮೂಲಕ ಅರ್ಜಿ ಸ್ವೀಕಾರಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಲಾಕ್‍ಡೌನ್ ಹಿನ್ನಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿರುವ ಆಟೋ, ಟ್ಯಾಕ್ಸಿ ಚಾಲಕರು ಮುಖ್ಯಮಂತ್ರಿಗಳು ಘೋಷಿಸಿರುವ ಪರಿಹಾರ ಹಣ ಸ್ವೀಕರಿಸಲು ಸೇವಾಸಿಂಧು ಪೆÇೀರ್ಟಲ್‍ಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಘೋಷಿಸಿರುವ 5000 ರೂಪಾಯಿ ಪರಿಹಾರಕ್ಕಾಗಿ ಯಾರೂ ಅಂಚೆ ಕಚೇರಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಪರಿಹಾರ ಧನ ನೀಡಲು ಅರ್ಜಿಗಳನ್ನು ಆನ್‍ಲೈನ್‍ಗಳಲ್ಲಿ  ಸೇವಾಸಿಂಧು ಪೆÇೀರ್ಟಲ್‍ಗಳ ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ತಿಳಿಸಿದ್ದಾರೆ.

ಕೋವಿಡ್-19 ಸಂಬಂಧ ಮುಖ್ಯಮಂತ್ರಿಗಳು ಮೇ 6ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ 5000 ರೂಪಾಯಿಗಳನ್ನು ನೀಡಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ. ಈ ಪರಿಹಾರ ಧನವನ್ನು ಪಡೆಯಲು ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರು ಅಂಚೆ ಕಚೇರಿಗಳ ಎದುರಿಗೆ ಸರತಿ ಸಾಲಿನಲ್ಲಿ ನಿಂತು ಅರ್ಜಿಗಳನ್ನು ಕಳುಹಿಸಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ.

ಪರಿಹಾರ ಧನ ನೀಡಲು ಅರ್ಜಿಗಳನ್ನು ಆನ್‍ಲೈನ್‍ಗಳಲ್ಲಿ ಸೇವಾಸಿಂಧು ಪೆÇೀರ್ಟಲ್‍ಗಳ ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆದ್ದರಿಂದ ಆಟೋ ರಿಕ್ಷಾ ಚಾಲಕರು ಅರ್ಜಿಗಳನ್ನು ಸಲ್ಲಿಸಲು ಅನಾವಶ್ಯಕವಾಗಿ ಪರಿಶ್ರಮ ಪಡುವ ಅಗತ್ಯವಿಲ್ಲ. ಆನ್‍ಲೈನ್ ಮೂಲಕ ಅರ್ಜಿ  ಸಲ್ಲಿಸುವ ಎಲ್ಲಾ ಅರ್ಹ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು. ಆದ್ದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  • Blogger Comments
  • Facebook Comments

1 comments:

Item Reviewed: ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ: ಸೇವಾಸಿಂಧು ಪೆÇೀರ್ಟಲ್ ಗಳ ಮೂಲಕ ಅರ್ಜಿ ಸ್ವೀಕಾರ Rating: 5 Reviewed By: karavali Times
Scroll to Top