ವಿಮಾನ ಪ್ರಯಾಣ ದರ ನಿಗದಿ : ಗೊಂದಲಕ್ಕೆ ತೆರೆ ಎಳೆದ ವಿಮಾನಯಾನ ನಿರ್ದೇಶನಾಲಯ - Karavali Times ವಿಮಾನ ಪ್ರಯಾಣ ದರ ನಿಗದಿ : ಗೊಂದಲಕ್ಕೆ ತೆರೆ ಎಳೆದ ವಿಮಾನಯಾನ ನಿರ್ದೇಶನಾಲಯ - Karavali Times

728x90

21 May 2020

ವಿಮಾನ ಪ್ರಯಾಣ ದರ ನಿಗದಿ : ಗೊಂದಲಕ್ಕೆ ತೆರೆ ಎಳೆದ ವಿಮಾನಯಾನ ನಿರ್ದೇಶನಾಲಯ



ನವದೆಹಲಿ (ಕರಾವಳಿ ಟೈಮ್ಸ್) : ಕೋವಿಡ್-19 ಲಾಕ್‍ಡೌನ್ ಹಿನ್ನಲೆಯಲ್ಲಿ ಆಗಿರುವ ನಷ್ಟವನ್ನು ತುಂಬಲು ವಿಮಾನಯಾನ ಕಂಪನಿಗಳು ದುಬಾರಿ ಟಿಕೆಟ್ ದರ ವಿಧಿಸುತ್ತಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇದೀಗ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪ್ರಯಾಣ ದರ ನಿಗದಿಪಡಿಸಿದೆ.

    ಲಾಕ್‍ಡೌನ್ ಘೋಷಣೆಯಾದ ಬಳಿಕ ಸ್ಥಗಿತಗೊಂಡಿರುವ ದೇಶಿಯ ವಿಮಾನ ಸಂಚಾರ ಮೇ 25 ರಿಂದ ಆರಂಭವಾಗಲಿದೆ. ವಿಮಾನ ಸೇವೆಗೆ ವಿಮಾನಯಾನ ಸಚಿವಾಲಯ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಕಂಪೆನಿಗಳು ವಿಮಾನದ ಒಳಗಡೆ ಸಾಮಾಜಿಕ ಆಂತರ ಕಾಪಾಡುವ ನಿಟ್ಟಿನಲ್ಲಿ ದುಬಾರಿ ಟಿಕೆಟ್ ದರ ವಿಧಿಸುತ್ತಿವೆ ಎಂದು ಗ್ರಾಹಕರು ದೂರಿದ್ದರು.

    ನಾಗರಿಕ ವಿಮಾನಯಾನ ನಿರ್ದೇಶನಾಲಯ ವಿಮಾನ ಹಾರಾಟದ ಮಾರ್ಗವನ್ನು ಎ,ಬಿ,ಸಿ,ಡಿ,ಇ,ಎಫ್,ಜಿ ಎಂದು ವಿಂಗಡಿಸಿ ಗರಿಷ್ಠ ಮತ್ತು ಕನಿಷ್ಠ ದರವನ್ನು ನಿಗದಿಪಡಿಸಿದೆ. 40 ನಿಮಿಷ ಪ್ರಯಾಣದ ಅವಧಿ ಹೊಂದಿರುವ ಮಾರ್ಗಗಳು ‘ಎ’ ವರ್ಗದಲ್ಲಿ ಬರುತ್ತವೆ. 180-210 ನಿಮಿಷ ಪ್ರಯಾಣ ಅವಧಿ ಹೊಂದಿರುವ ಮಾರ್ಗಗಳು ‘ಜಿ’ ವರ್ಗದಲ್ಲಿ ಬರುತ್ತದೆ.

    ಎ ವರ್ಗ : ಕನಿಷ್ಠ 2,000 ರೂಪಾಯಿ ಹಾಗೂ ಗರಿಷ್ಠ 6,000 ರೂಪಾಯಿ
ಮಾರ್ಗಗಳು : ಬೆಂಗಳೂರು-ಚೆನ್ನೈ, ಬೆಂಗಳೂರು-ಕೊಚ್ಚಿ, ಬೆಂಗಳೂರು-ಮಂಗಳೂರು.

ಬಿ ವರ್ಗ : ಕನಿಷ್ಠ 2,500 ರೂಪಾಯಿ ಹಾಗೂ ಗರಿಷ್ಠ 7,500 ರೂಪಾಯಿ.
ಮಾರ್ಗಗಳು: ಬೆಂಗಳೂರು-ಕ್ಯಾಲಿಕಟ್, ಬೆಂಗಳೂರು-ಕೊಯಮತ್ತೂರ್, ಬೆಂಗಳೂರು-ಹೈದರಾಬಾದ್, ಬೆಂಗಳೂರು-ತಿರುವನಂತಪುರಂ.

ಸಿ ವರ್ಗ : ಕನಿಷ್ಠ 3,000 ರೂಪಾಯಿ, ಗರಿಷ್ಠ 9,000 ರೂಪಾಯಿ
ಮಾರ್ಗಗಳು : ಬೆಂಗಳೂರು-ಮುಂಬೈ, ಬೆಂಗಳೂರು-ನಾಗ್ಪುರ, ಬೆಂಗಳೂರು-ಪೆÇೀರ್ಟ್‍ಬ್ಲೇರ್, ಬೆಂಗಳೂರು-ಪುಣೆ, ಬೆಂಗಳೂರು-ವಿಶಾಖಪಟ್ಟಣ.

ಡಿ ವರ್ಗ : ಕನಿಷ್ಠ 3,500 ರೂಪಾಯಿ, ಗರಿಷ್ಠ 10,000 ರೂಪಾಯಿ
ಮಾರ್ಗಗಳು : ಬೆಂಗಳೂರು-ಅಹಮದಾಬಾದ್, ಬೆಂಗಳೂರು-ಭೋಪಾಲ್, ಬೆಂಗಳೂರು-ಭುವನೇಶ್ವರ, ಬೆಂಗಳೂರು-ಇಂದೋರ್, ಬೆಂಗಳೂರು-ರಾಯ್‍ಪುರ.

ಇ ವರ್ಗ : ಕನಿಷ್ಠ 4,500 ರೂಪಾಯಿ, ಗರಿಷ್ಠ 13,000 ರೂಪಾಯಿ
ಮಾರ್ಗಗಳು : ಬೆಂಗಳೂರು-ದೆಹಲಿ, ಬೆಂಗಳೂರು-ಜೈಪುರ, ಬೆಂಗಳೂರು-ಲಕ್ನೋ, ಬೆಂಗಳೂರು-ಪಾಟ್ನಾ, ಬೆಂಗಳೂರು-ರಾಂಚಿ.

ಎಫ್ ವರ್ಗ : ಕನಿಷ್ಠ 5,500 ರೂಪಾಯಿ, ಗರಿಷ್ಠ 15,700 ರೂಪಾಯಿ
ಮಾರ್ಗಗಳು : ಬೆಂಗಳೂರು-ಚಂಡೀಗಢ, ಬೆಂಗಳೂರು ಗುವಹಾಟಿ, ಬೆಂಗಳೂರು-ಇಂಫಾಲ್, ಬೆಂಗಳೂರು- ವಾರಣಾಸಿ.

ಜಿ ವರ್ಗ : ಕನಿಷ್ಠ 6,500 ರೂಪಾಯಿ, ಗರಿಷ್ಠ 18,500 ರೂಪಾಯಿ
ಮಾರ್ಗಗಳು : ದೆಹಲಿ-ಕೊಯಮತ್ತೂರು, ದೆಹಲಿ-ತಿರುವನಂತಪುರಂ, ದೆಹಲಿ-ಪೆÇೀರ್ಟ್ ಬ್ಲೇರ್.
  • Blogger Comments
  • Facebook Comments

0 comments:

Post a Comment

Item Reviewed: ವಿಮಾನ ಪ್ರಯಾಣ ದರ ನಿಗದಿ : ಗೊಂದಲಕ್ಕೆ ತೆರೆ ಎಳೆದ ವಿಮಾನಯಾನ ನಿರ್ದೇಶನಾಲಯ Rating: 5 Reviewed By: karavali Times
Scroll to Top