ಕೊನೆಗೂ ಕುಡುಕರಿಗೆ ಮಣೆ ಹಾಕಿದ ಕೇಂದ್ರ ಸರಕಾರ : ಹಸಿರು ವಲಯಗಳಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ - Karavali Times ಕೊನೆಗೂ ಕುಡುಕರಿಗೆ ಮಣೆ ಹಾಕಿದ ಕೇಂದ್ರ ಸರಕಾರ : ಹಸಿರು ವಲಯಗಳಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ - Karavali Times

728x90

1 May 2020

ಕೊನೆಗೂ ಕುಡುಕರಿಗೆ ಮಣೆ ಹಾಕಿದ ಕೇಂದ್ರ ಸರಕಾರ : ಹಸಿರು ವಲಯಗಳಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ



ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಲಾಕ್‍ಡೌನ್ ಹೇರಿದಾಗಿನಿಂದಲೂ ಬಂದ್ ಆಗಿದ್ದ ಮದ್ಯದಂಗಡಿಗಳ ಬಾಗಿಲು ತೆರೆಯಲು ಕೊನೆಗೂ ಕೇಂದ್ರ ಸರಕಾರ ಅನುಮತಿ ನೀಡಿದೆ.

    ದೇಶದ ಹಸಿರು ವಲಯಗಳಲ್ಲಿ ಮೇ 4ರಿಂದ ಮದ್ಯ ಮಾರಾಟಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ. ಲಾಕ್‍ಡೌನ್ ವಿಸ್ತರಣೆಗೆ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಹಸಿರು ವಲಯಗಳಲ್ಲಿ ಮದ್ಯದಂಗಡಿಗಳು ಮತ್ತು ಪಾನ್ ಅಂಗಡಿಗಳನ್ನು  ತೆರೆಯಬಹುದು ಎಂದು ಸೂಚಿಸಿದೆ. ಆದರೆ ಮದ್ಯದಂಗಡಿಯಿಂದ ಪಾರ್ಸಲ್ ಕೊಂಡೊಯ್ಯಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪರಸ್ಪರ ಕನಿಷ್ಠ ಆರು ಅಡಿ ದೂರವನ್ನು ಕಾಪಾಡಬೇಕು. ಅಂಗಡಿಯಲ್ಲಿ ಒಂದೇ ಸಮಯದಲ್ಲಿ ಐದಕ್ಕಿಂತ ಹೆಚ್ಚು ಜನರು ಇರುವಂತಿಲ್ಲ. ಕೇವಲ 5 ಜನ ಮಾತ್ರ  ಒಂದೇ ಬಾರಿಗೆ ಇರಬೇಕು ಎಂಬ ನಿಯಮಗಳನ್ನು ವಿಧಿಸಲಾಗಿದೆ.

ಪಾನ್ ಅಂಗಡಿಗಳಿಗೂ ಅವಕಾಶ


    ಮದ್ಯದಂಗಡಿಗಳು ಮಾತ್ರವಲ್ಲದೇ ಪಾನ್ ಶಾಪ್ ತೆರೆಯುವುದಕ್ಕೂ ಕೇಂದ್ರ ಸರಕಾರ ಅನುಮತಿ ನೀಡಿದ್ದು, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಉಳಿದಂತೆ ದೇಶವ್ಯಾಪಿ ವಿಮಾನ, ರೈಲು, ಮೆಟ್ರೋ, ಅಂತಾರಾಜ್ಯ ರಸ್ತೆ ಇತ್ಯಾದಿ ಸಂಚಾರ ಸ್ಥಗಿತ ನಿರ್ಧಾರ ಮುಂದುವರಿಯಲಿದೆ. ಶಾಲಾ-ಕಾಲೇಜು ಇತ್ಯಾದಿ ಶಿಕ್ಷಣ ಸಂಸ್ಥೆಗಳು ಇರುವುದಿಲ್ಲ. ಸಿನಿಮಾ ಹಾಲ್, ಮಾಲ್‍ಗಳು, ಹೊಟೆಲ್, ರೆಸ್ಟೋರೆಂಟ್‍ಗಳ ಬಂದ್ ಮುಂದುವರಿಯುತ್ತದೆ. ಜನಜಾತ್ರೆ ಸೇರುವ ಕಾರ್ಯಕ್ರಗಳು ನಿಷಿದ್ಧ. ಪೂಜಾ ಮಂದಿರಗಳಿಗೂ ಅವಕಾಶ ಇರುವುದಿಲ್ಲ. ಮೊದಲಿದ್ದ ಇವೆಲ್ಲ ನಿರ್ಬಂಧಗಳು ಮೇ 17ರವರೆಗೂ ಮುಂದುವರಿಯಲಿವೆ.
  • Blogger Comments
  • Facebook Comments

0 comments:

Post a Comment

Item Reviewed: ಕೊನೆಗೂ ಕುಡುಕರಿಗೆ ಮಣೆ ಹಾಕಿದ ಕೇಂದ್ರ ಸರಕಾರ : ಹಸಿರು ವಲಯಗಳಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ Rating: 5 Reviewed By: karavali Times
Scroll to Top