ತವರಿಗೆ ತೆರಳುವ ವಲಸೆ ಕಾರ್ಮಿಕರಿಂದ ಟಿಕೆಟ್ ದರ ಪಡೆಯುತ್ತಿರುವುದು ಸರಿಯಲ್ಲ : ಹಾಶೀರ್ ಪೇರಿಮಾರ್ - Karavali Times ತವರಿಗೆ ತೆರಳುವ ವಲಸೆ ಕಾರ್ಮಿಕರಿಂದ ಟಿಕೆಟ್ ದರ ಪಡೆಯುತ್ತಿರುವುದು ಸರಿಯಲ್ಲ : ಹಾಶೀರ್ ಪೇರಿಮಾರ್ - Karavali Times

728x90

1 May 2020

ತವರಿಗೆ ತೆರಳುವ ವಲಸೆ ಕಾರ್ಮಿಕರಿಂದ ಟಿಕೆಟ್ ದರ ಪಡೆಯುತ್ತಿರುವುದು ಸರಿಯಲ್ಲ : ಹಾಶೀರ್ ಪೇರಿಮಾರ್ಮಂಗಳೂರು (ಕರಾವಳಿ ಟೈಮ್ಸ್) :  ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಸ್‌ಗಳನ್ನು ವ್ಯವಸ್ಥೆ ಮಾಡಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಇಂತಹ ಸಂದರ್ಭದಲ್ಲಿ ಪ್ರಯಾಣ ವೆಚ್ಚವನ್ನು ಸ್ವತಃ ಕಾರ್ಮಿಕರೇ ಭರಿಸಬೇಕೆಂದು ತೀರ್ಮಾನಿಸಿರುವುದು ಸರಿಯಲ್ಲ. ಈ ನಿರ್ಧಾರಕ್ಕೆ ಖಂಡನೀಯ ಎಂದು ಪುದು ಗ್ರಾ.ಪಂ. ಸದಸ್ಯ, ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಭೀತಿಯಿಂದ ರಾಜ್ಯ ಮತ್ತು ವಿವಿಧ ಜಿಲ್ಲೆಗಳಲ್ಲಿ ಕಳೆದ 40 ದಿನಗಳಿಂದ ಕೆಲಸವಿಲ್ಲದೆ ಸಾವಿರಾರು ವಲಸೆ ಕಾರ್ಮಿಕರು ಸಂಕಷ್ಟದಲ್ಲಿ ದಿನ ಕಳೆದಿದ್ದಾರೆ. ಇಂತಹ ಸನ್ನಿವೇಶದಲ್ಲಿ ಬಸ್ ಟಿಕೆಟ್‌ಗೆ ಹಣ ಇಲ್ಲದವರ ಜೊತೆ ಅಮಾನವೀಯವಾಗಿ ವರ್ತಿಸದೆ, ಊರಿಗೆ ತೆರಳಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ.

ತವರಿಗೆ ಕಳುಹಿಸಿಕೊಡುವ ಪ್ರತಿಯೊಬ್ಬ ಕಾರ್ಮಿಕನನ್ನು ಸೂಕ್ತ ತಪಾಸಣೆಗೊಳಪಡಿಸುವ ಮೂಲಕ ಕಾರ್ಮಿಕರ ಆರೋಗ್ಯದ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದವರು   ರಾಜ್ಯದ ಮುಖ್ಯಮಂತ್ರಿ ಹಾಗೂ  ಸಾರಿಗೆ ಸಚಿವರಿಗೆ ಆಗ್ರಹಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ತವರಿಗೆ ತೆರಳುವ ವಲಸೆ ಕಾರ್ಮಿಕರಿಂದ ಟಿಕೆಟ್ ದರ ಪಡೆಯುತ್ತಿರುವುದು ಸರಿಯಲ್ಲ : ಹಾಶೀರ್ ಪೇರಿಮಾರ್ Rating: 5 Reviewed By: karavali Times
Scroll to Top