ಪಾಕ್ ಹಿಂದೂ ದೇಗುಲಕ್ಕೆ ತೆರಳಿ ಬಡವರಿಗೆ ಸಾಮಾಗ್ರಿ ವಿತರಿಸಿದ ಶಾಹಿದ್ ಅಫ್ರಿದಿ! - Karavali Times ಪಾಕ್ ಹಿಂದೂ ದೇಗುಲಕ್ಕೆ ತೆರಳಿ ಬಡವರಿಗೆ ಸಾಮಾಗ್ರಿ ವಿತರಿಸಿದ ಶಾಹಿದ್ ಅಫ್ರಿದಿ! - Karavali Times

728x90

13 May 2020

ಪಾಕ್ ಹಿಂದೂ ದೇಗುಲಕ್ಕೆ ತೆರಳಿ ಬಡವರಿಗೆ ಸಾಮಾಗ್ರಿ ವಿತರಿಸಿದ ಶಾಹಿದ್ ಅಫ್ರಿದಿ!ಇಸ್ಲಾಮಾಬಾದ್ (ಕರಾವಳಿ ಟೈಮ್ಸ್) : ಕೊರೋನಾ ಸಾಂಕ್ರಾಮಿಕ ಕಾಯಿಲೆ ವ್ಯಾಪಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಸಂಕಷ್ಟದಲ್ಲಿರುವ ಬಡ ಜನರಿಗೆ ನೆರವಾಗುವ ಮೂಲಕ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ಪಾಕಿಸ್ತಾನದ ಪ್ರತಿ ಗ್ರಾಮೀಣ ಪ್ರದೇಶಗಳಿಗೂ ಶಾಹಿದ್ ಅಫ್ರಿದಿ ತೆರಳುತ್ತಿದ್ದು, ಅಲ್ಲಿ ಅಗತ್ಯವಿರುವ ಬಡವರಿಗೆ ಆಹಾರ ಧಾನ್ಯ ಮತ್ತಿತರ ಸಾಮಾಗ್ರಿಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ಶಾಹಿದ್ ಅಫ್ರಿದಿ ಪ್ರತಿಷ್ಠಾನದ ಮೂಲಕ ಜನರಿಂದ ದೇಣಿಗೆ ಸಂಗ್ರಹಿಸಿ ಕಷ್ಟದಲ್ಲಿರುವವರಿಗೆ ಅಫ್ರಿದಿ ನೆರವು ಒದಗಿಸುತ್ತಿದ್ದಾರೆ.

    ಈ ನಡುವೆ ಅಫ್ರಿದಿ ಇಲ್ಲಿನ ಹಿಂದೂ ದೇಗುಲವಾಗಿರುವ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ನಡೆದ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ದೇವಸ್ಥಾನಕ್ಕೆ ತೆರಳಿದ ಅಫ್ರಿದಿ ಅಲ್ಲಿ ಕಷ್ಟದಲ್ಲಿದ್ದವರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು. ಸಂಕಷ್ಟ ಸಮಯದಲ್ಲಿ ನಾವೆಲ್ಲ ಸೇರಿ ಒಗ್ಗಟ್ಟಾಗಿರಬೇಕು. ಐಕ್ಯತೆಯೇ ನಮ್ಮ ಶಕ್ತಿ ಎಂದು ಅಫ್ರಿದಿ ಇದೇ ವೇಳೆ ಹೇಳಿದ್ದಾರೆ.

    ಶ್ರೀ ಲಕ್ಷ್ಮಿನಾರಾಯಣ ಮಂದಿರಕ್ಕೆ ತೆರಳಿ ಅಲ್ಲಿ ಸಂಕಷ್ಟದಲ್ಲಿದದವರಿಗೆ ಅಗತ್ಯವಸ್ತುಗಳನ್ನು ವಿತರಿಸಿದೆ ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ. ಅಫ್ರಿದಿ ಮಾಡಿರುವ ಈ ಕಾರ್ಯದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಯ ಸುರಿಮಳೆಯೇ ಬರುತ್ತಿದೆ.
  • Blogger Comments
  • Facebook Comments

0 comments:

Post a Comment

Item Reviewed: ಪಾಕ್ ಹಿಂದೂ ದೇಗುಲಕ್ಕೆ ತೆರಳಿ ಬಡವರಿಗೆ ಸಾಮಾಗ್ರಿ ವಿತರಿಸಿದ ಶಾಹಿದ್ ಅಫ್ರಿದಿ! Rating: 5 Reviewed By: karavali Times
Scroll to Top