ಶಾರ್ಜಾ ಬಹುಮಡಿ ಕಟ್ಟಡದಲ್ಲಿ ಭಾರೀ ಬೆಂಕಿಯ ಜ್ವಾಲೆ : ಆತಂಕ - Karavali Times ಶಾರ್ಜಾ ಬಹುಮಡಿ ಕಟ್ಟಡದಲ್ಲಿ ಭಾರೀ ಬೆಂಕಿಯ ಜ್ವಾಲೆ : ಆತಂಕ - Karavali Times

728x90

5 May 2020

ಶಾರ್ಜಾ ಬಹುಮಡಿ ಕಟ್ಟಡದಲ್ಲಿ ಭಾರೀ ಬೆಂಕಿಯ ಜ್ವಾಲೆ : ಆತಂಕ


ದುಬೈ (ಕರಾವಳಿ ಟೈಮ್ಸ್) : ಯುಎಇ ರಾóಷ್ಟ್ರದ ಶಾರ್ಜಾ ಲುಲು ಸೆಂಟರ್ ಎದುರು ಭಾಗದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಮಂಗಳವಾರ ಮಧ್ಯರಾತ್ರಿ ವೇಳೆಗೆ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲದಿದ್ದರೂ ಕಟ್ಟಡದ ಒಳಭಾಗದಲ್ಲಿರುವವರ ಸುರಕ್ಷತೆ ಬಗ್ಗೆ ಭೀತಿ ಪಡಲಾಗಿದೆ.

    ಇಲ್ಲಿನ ಅಲ್-ನಹ್ಬಾ ಎಂಬಲ್ಲಿನ ಸುಮಾರು 47 ಮಹಡಿಗಳಿರುವ ಅಬ್ಕೋ ಟವರ್‍ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. ಅಗ್ನಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಅಂಬ್ಯುಲೆನ್ಸ್ ವಾಹನಗಳು ಸೇರಿದಂತೆ ಸುರಕ್ಷತಾ ವ್ಯವಸ್ಥೆಗಳು ಆಗಮಿಸಿದ್ದು, ಕಟ್ಟಡದ ಒಳಭಾಗದಲ್ಲಿರುವ ಮಂದಿಯ ಸುರಕ್ಷತೆಗೆ ಕ್ರಮ ಕೈಗೊಂಡಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಶಾರ್ಜಾ ಬಹುಮಡಿ ಕಟ್ಟಡದಲ್ಲಿ ಭಾರೀ ಬೆಂಕಿಯ ಜ್ವಾಲೆ : ಆತಂಕ Rating: 5 Reviewed By: karavali Times
Scroll to Top