ಜೂನ್ 30ರವರೆಗೆ ರೈಲ್ವೇ ಟಿಕೆಟ್ ಬುಕ್ಕಿಂಗ್ ರದ್ದು : ವಿಶೇಷ ರೈಲುಗಳ ಓಡಾಟ ಅಬಾಧಿತ - Karavali Times ಜೂನ್ 30ರವರೆಗೆ ರೈಲ್ವೇ ಟಿಕೆಟ್ ಬುಕ್ಕಿಂಗ್ ರದ್ದು : ವಿಶೇಷ ರೈಲುಗಳ ಓಡಾಟ ಅಬಾಧಿತ - Karavali Times

728x90

14 May 2020

ಜೂನ್ 30ರವರೆಗೆ ರೈಲ್ವೇ ಟಿಕೆಟ್ ಬುಕ್ಕಿಂಗ್ ರದ್ದು : ವಿಶೇಷ ರೈಲುಗಳ ಓಡಾಟ ಅಬಾಧಿತ



ನವದೆಹಲಿ (ಕರಾವಳಿ ಟೈಮ್ಸ್) : ಜೂನ್ 30ರವರೆಗೆ ಕಾಯ್ದಿರಿಸಿದ ಎಲ್ಲಾ ಸಾಮಾನ್ಯ ರೈಲು ಟಿಕೆಟ್‍ಗಳನ್ನು ರದ್ದುಗೊಳಿಸಿ ಭಾರತೀಯ ರೈಲ್ವೇ ಆದೇಶ ಹೊರಡಿಸಿದೆ. ರೈಲುಗಳಲ್ಲಿ ಕಾಯ್ದಿರಿಸಿದ ಎಲ್ಲ ಪ್ರಯಾಣಿಕರ ಟಿಕೆಟ್‍ಗಳನ್ನು ರದ್ದುಪಡಿಸಲಾಗಿದೆ ಮತ್ತು ಬುಕ್ಕಿಂಗ್ ಮಾಡಿದ್ದ ಹಣವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುವುದು ಎಂದು ಭಾರತೀಯ ರೈಲ್ವೇ ಇಲಾಖೆ ಪ್ರಕಟಿಸಿದೆ.

ಮೇ 12 ರಿಂದ ಓಡಲು ಪ್ರಾರಂಭಿಸಿರುವ ಶ್ರಮಿಕ್ ವಿಶೇಷ ರೈಲುಗಳು ಮತ್ತು ವಿಶೇಷ ರೈಲುಗಳು ಎಂದಿನಂತೆ ತಮ್ಮ ಓಡಾಟ ನಡೆಸಲಿವೆ. ಶ್ರಮಿಕ್ ವಿಶೇಷ ರೈಲುಗಳು ಲಾಕ್‍ಡೌನ್‍ನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ರಾಜ್ಯಗಳಿಗೆ ಕರೆದುಕೊಂಡು ಹೋಗುತ್ತಿವೆ. 15 ವಿಶೇಷ ರೈಲುಗಳು ದೆಹಲಿಯಿಂದ ರಾಜ್ಯಗಳ ರಾಜಧಾನಿಗಳಿಗೆ ಸಂಪರ್ಕ ಕಲ್ಪಿಸುತ್ತವೆ.

ಜೂನ್ 30ರೊಳಗಿನ ಪ್ರಯಾಣಕ್ಕಾಗಿ ಮಾರ್ಚ್ 22ಕ್ಕೂ ಮುನ್ನ ಕಾಯ್ದಿರಿಸಲಾಗಿರುವ ರೈಲು ಟಿಕೆಟ್‍ಗಳನ್ನು ರದ್ದು ಪಡಿಸಲಾಗಿದೆ. ಐಆರ್‍ಸಿಟಿಸಿ ವೆಬ್‍ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿರುವವರು ಟಿಕೆಟ್ ರದ್ದು ಪಡಿಸಬೇಕಿಲ್ಲ. ಟಿಕೆಟ್ ಹಣ ಅದಾಗಿಯೇ ಬ್ಯಾಂಕ್ ಖಾತೆಗೆ ಮರುಪಾವತಿಯಾಗಲಿದೆ. ಆದರೆ ರಿಸರ್ವೇಷನ್ ಕೌಂಟರ್‍ಗಳಲ್ಲಿ ಟಿಕಿಟ್ ಬುಕ್ ಪಡೆದರಿಗೆ ಮೂರು ತಿಂಗಳ ಒಳಗಾಗಿ ಹಣ ಸಿಗುತ್ತದೆ. ಸದ್ಯಕ್ಕೆ ರೈಲ್ವೇ ಕೌಂಟರ್ ಮುಚ್ಚಿರುವುದರಿಂದ ಪ್ರಯಾಣಿಕರು ಹೋಗಿ ಹಣ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಮೇ 12 ರಂದು ಭಾರತೀಯ ರೈಲ್ವೇ 15 ವಿಶೇಷ ರೈಲುಗಳ ಓಡಾಟವನ್ನು ಲಾಕ್‍ಡೌನ್ ವೇಳೆ ಪ್ರಾರಂಭಿಸಿತ್ತು. ಕೊರೊನಾ ವೈರಸ್‍ನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿತ್ತು. ಹೀಗಾಗಿ ಮೇಲ್, ಎಕ್ಸ್‍ಪ್ರೆಸ್, ಪ್ರಯಾಣಿಕ ಮತ್ತು ಉಪನಗರ ರೈಲು ಸೇವೆಗಳನ್ನು ಮಾರ್ಚ್ 25 ರಿಂದ ಸ್ಥಗಿತಗೊಳಿಸಿತ್ತು.

ಇತ್ತೀಚೆಗೆ ಕೇಂದ್ರ ಸರಕಾರ ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿತ್ತು. ಜೊತೆಗೆ ಮುಂಗಡವಾಗಿ ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ಮಾಡಲು ಅನುಮತಿ ನೀಡಿತ್ತು. ಅದರಂತೆಯೇ ಐಆರ್‍ಸಿಟಿಸಿಯಲ್ಲಿ ಮೊದಲ ದಿನ 80,000 ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಿದ್ದರು. ಇದರಿಂದ ಭಾರತೀಯ ರೈಲ್ವೆಗೆ 16 ಕೋಟಿ ರೂಪಾಯಿ ಆದಾಯ ಬಂದಿತ್ತು.
  • Blogger Comments
  • Facebook Comments

0 comments:

Post a Comment

Item Reviewed: ಜೂನ್ 30ರವರೆಗೆ ರೈಲ್ವೇ ಟಿಕೆಟ್ ಬುಕ್ಕಿಂಗ್ ರದ್ದು : ವಿಶೇಷ ರೈಲುಗಳ ಓಡಾಟ ಅಬಾಧಿತ Rating: 5 Reviewed By: karavali Times
Scroll to Top