ಮಂಗಳೂರು (ಕರಾವಳಿ ಟೈಮ್ಸ್): ದ.ಕ. ಜಿಲ್ಲೆಯ ಮತ್ತೋರ್ವ ವೃದ್ದ ಮಹಿಳೆ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮಾರಕ ಕಾಯಿಲೆಗೆ ಜೀವ ತೆತ್ತವರ ಸಂಖ್ಯೆ ಐದಕ್ಕೇರಿದೆ.
ಕೊರೊನಾ ಸೋಂಕಿನಿಂದ ಕೋವಿಡ್ ಆಸ್ಪತ್ರೆಯಲ್ಲಿದ್ದ ಕುಲಶೇಖರದ 80ರ ವೃದ್ಧೆ ಗುರುವಾರ ಮೃತಪಟ್ಟಿದ್ದಾರೆ. ನಿನ್ನೆಯಷ್ಟೆ ಸೋಂಕಿನಿಂದ ಬಳಲುತ್ತಿದ್ದ ಬೋಳೂರಿನ 58ರ ಮಹಿಳೆ ಸಾವಿಗೀಡಾಗಿದ್ದರು.
ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಪ್ರಾಣ ತೆತ್ತವರೆಲ್ಲರೂ ಮಹಿಳೆಯರೇ ಆಗಿದ್ದು, ಎಲ್ಲರೂ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆ ಮೂಲಕ ಸೋಂಕಿಗೆ ಗುರಿಯಾಗಿದ್ದರು. ಈ ಮೂಲಕ ಜಿಲ್ಲೆಯ ಪಾಲಿಗೆ ಫಸ್ಟ್ ನ್ಯೂರೋ ಕರಾಳವಾಗಿ ಪರಿಣಮಿಸಿದೆ.
0 comments:
Post a Comment