ಆನ್‍ಲೈನ್ ವ್ಯವಹಾರ ಉತ್ತೇಜಿಸಲು ಅಂಚೆ ಇಲಾಖೆಯಿಂದ ಜೂನ್ 5 ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ - Karavali Times ಆನ್‍ಲೈನ್ ವ್ಯವಹಾರ ಉತ್ತೇಜಿಸಲು ಅಂಚೆ ಇಲಾಖೆಯಿಂದ ಜೂನ್ 5 ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ - Karavali Times

728x90

4 June 2020

ಆನ್‍ಲೈನ್ ವ್ಯವಹಾರ ಉತ್ತೇಜಿಸಲು ಅಂಚೆ ಇಲಾಖೆಯಿಂದ ಜೂನ್ 5 ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ತೆರೆಯುವ ಅಭಿಯಾನಮಂಗಳೂರು (ಕರಾವಳಿ ಟೈಮ್ಸ್) : ಆನ್‍ಲೈನ್ ವ್ಯವಹಾರ ಉತ್ತೇಜಿಸಲು ಹಾಗೂ ಬ್ಯಾಂಕಿಂಗ್ ವ್ಯವಹಾರಗಳನ್ನು ಜನರ ಬಳಿ ತಲುಪಿಸಲು ಜೂನ್ 5 ರಿಂದ ಮಂಗಳೂರು ವಿಭಾಗದಿಂದ ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್ ವಿಶೇಷ ಖಾತೆ ತೆರೆಯುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್ ಕೋರೊನದಿಂದ ಎಚ್ಚರವಿರಬೇಕಾದ ಈ ಸಂದರ್ಭದಲ್ಲಿ ಡಿಜಿಟಲ್ ಹಾಗೂ ಆನ್‍ಲೈನ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ಇತರ ಬ್ಯಾಂಕ್ ಖಾತೆಗಳಿಗೆ ಹಾಗೂ ಖಾತೆಗಳಿಂದ ತಕ್ಷಣ ಹಣ ವರ್ಗಾವಣೆ, ನೆಫ್ಟ್, ಮೊಬೈಲ್ ರಿಚಾರ್ಜ್, ಡಿ.ಟಿ.ಎಚ್ ರಿಚಾರ್ಜ್, ಆನ್‍ಲೈನ್ ಮೂಲಕ ಅಂಚೆ ಕಛೇರಿಯ ಆರ್.ಡಿ, ಪಿ.ಪಿ.ಎಫ್, ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಹಣ ಜಮಾ ಮಾಡುವುದು. ಹೀಗೆ ಹತ್ತು ಹಲವು ವಿಶೇಷತೆಗಳು ಐ.ಪಿ.ಪಿ.ಬಿ.ಯಲ್ಲಿವೆ.

ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಕಲ ಚೇತನ ವೇತನ, ವಿದ್ಯಾರ್ಥಿಗಳಿಗೆ ಸರಕಾರದ ಸ್ಕಾಲರ್‍ಶಿಪ್, ಕಿಸಾನ್ ಸಮ್ಮಾನ್, ಗ್ಯಾಸ್ ಸಬ್ಸಿಡಿ ಹೀಗೆ ಸರಕಾರದ ಹಲವಾರು ಯೋಜನೆಗಳ ಪ್ರಯೋಜನ ಪಡೆಯಲು ಐ.ಪಿ.ಪಿ.ಬಿ ಖಾತೆ ಒಂದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಇನ್ನೊಂದು ವಿಶಿಷ್ಟ ಸೇವೆಯೆಂದರೆ ಎ.ಇ.ಪಿ.ಎಸ್. ಇದರ ಮೂಲಕ ಆಧಾರ್ ಜೋಡಣೆಗೊಂಡ ಯಾವುದೇ ಬ್ಯಾಂಕ್ ಖಾತೆಯಿಂದ ಅಂಚೆ ಕಛೇರಿಯಲ್ಲಿ ಅಥವಾ ಅಂಚೆಯಣ್ಣನ ಮೂಲಕ ಮನೆ ಬಾಗಿಲಿನಲ್ಲಿ ಹಣವನ್ನು ಪಡೆಯಬಹುದು. ಚೆಕ್, ಎ.ಟಿ.ಎಂ. ಯಾವುದೂ ಬೇಡ. ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಮಾತ್ರ ಸಾಕು. ಐ.ಪಿ.ಪಿ.ಬಿ ಖಾತೆಗಳಲ್ಲಿ ಕನಿಷ್ಠ ಶುಲ್ಕ ವೆಚ್ಚವನ್ನು ಕೂಡ ವಿಧಿಸುವುದಿಲ್ಲ.

ಖಾತೆ ಆರಂಭಿಸಲು ಸುಲಭ


ಇಷ್ಟೆಲ್ಲಾ ಅನುಕೂಲತೆಗಳಿರುವ ಐ.ಪಿ.ಪಿ.ಬಿ ಖಾತೆಯನ್ನು ಮಾಡಿಸಲು ಸಾರ್ವಜನಿಕರು ತಮ್ಮ ಆಧಾರ್ ಸಂಖ್ಯೆ, ಮೊಬೈಲ್ ಹಾಗೂ 100 ರೂಪಾಯಿ ನಗದಿನೊಂದಿಗೆ ಸಮೀಪದ ಯಾವುದೇ ಅಂಚೆ ಕಛೇರಿಗೆ ತೆರಳಿದರೆ ಅಥವಾ ಅಂಚೆಯಣ್ಣನನ್ನು ಭೇಟಿಯಾದರೆ ಆ ಕ್ಷಣದಲ್ಲೇ, ಖಾತೆ ತೆರೆದು ಬ್ಯಾಂಕಿಂಗ್ ಸೇವೆಯ ಅನುಕೂಲತೆಗಳನ್ನು ಪಡೆದುಕೊಳ್ಳಬಹುದು. ಮಂಗಳೂರು ವಿಭಾಗದ ಎಲ್ಲಾ ಗ್ರಾಮಾಂತರ ಹಾಗೂ ನಗರ ಪ್ರದೇಶದ ಸಾರ್ವಜನಿಕರು ಜೂನ್ 5 ರಂದು ಅಂಚೆ ಕಛೇರಿಗೆ  ಭೇಟಿ ನೀಡಿ ಅಥವಾ ಅಂಚೆಯಣ್ಣನನ್ನು ಭೇಟಿಯಾಗಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ಅಂಚೆ ಕಛೇರಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರದ ಮೂಲಕ ಕೋವಿಡ್-19 ಸುರಕ್ಷಾ ನಿಯಮಗಳ ಪಾಲನೆಯೊಂದಿಗೆ ಅಂಚೆ ಕಛೇರಿಯಲ್ಲಿ ಐ.ಪಿ.ಪಿ.ಬಿ ಖಾತೆ ತೆರೆಯಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಹರ್ಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಆನ್‍ಲೈನ್ ವ್ಯವಹಾರ ಉತ್ತೇಜಿಸಲು ಅಂಚೆ ಇಲಾಖೆಯಿಂದ ಜೂನ್ 5 ರಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ Rating: 5 Reviewed By: karavali Times
Scroll to Top