ಜಾರದಗುಡ್ಡೆ ಶಾಲಾ ಪೋಷಕರ ಸಭೆ - Karavali Times ಜಾರದಗುಡ್ಡೆ ಶಾಲಾ ಪೋಷಕರ ಸಭೆ - Karavali Times

728x90

11 June 2020

ಜಾರದಗುಡ್ಡೆ ಶಾಲಾ ಪೋಷಕರ ಸಭೆ

ಮಂಗಳೂರು (ಕರಾವಳಿ ಟೈಮ್ಸ್) : ಬೋಳಿಯಾರು ಗ್ರಾಮದ ಅಮ್ಮೆಂಬಳ-ಜಾರದಗುಡ್ಡೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ಪೋಷಕರ ಸಭೆ ಗುರುವಾರ ನಡೆಯಿತು.

ಶಾಲೆ ಆರಂಭ ಮಾಡುವ ಮಕ್ಕಳ ಸುರಕ್ಷತೆ ಕಾಪಾಡುವ ಬಗ್ಗೆ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸರ್ವ ಸದಸ್ಯರು, ಪೋಷಕರು ಶಿಕ್ಷಕರೊಂದಿಗೆ ಆರೋಗ್ಯಕರ ಚರ್ಚೆ ನಡೆಸಿದರು. ಕೋವಿಡ್-19 ನಿಯಂತ್ರಣಕ್ಕೆ  ಬಂದಲ್ಲಿ  ಸೆಪ್ಟೆಂಬರ್ ಮೊದಲ ವಾರದಲ್ಲಿ ಅಗತ್ಯ ಸುರಕ್ಷಿತ ಕ್ರಮಗಳೊಂದಗೆ ಶಾಲೆ ಆರಂಭ ಮಾಡಬಹುದೆಂದು ಎಲ್ಲಾ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿ. ರಿಯಾಝ್, ದೇರಳಕಟ್ಟೆ ಮುಖ್ಯ ಶಿಕ್ಷಕರ ಕ್ಲಸ್ಟರ್ ಸಿ.ಆರ್.ಪಿ. ರಾಜೇಶ್ವರಿ, ಶಾಲಾ ಮುಖ್ಯ ಶಿಕ್ಷಕಿ ಮೋನಿಕಾ ಡಿ ಮಸ್ಕರೇನಸ್, ಸಹ ಶಿಕ್ಷಕರಾದ ಜೋಸ್ಪಿನ್ ಪಾಯಸ್, ಗಾಯತ್ರಿ ಭಟ್, ಕಿರಣ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಶಾಲಾ ಮೂಲಭೂತ ಸೌಕರ್ಯಗಳನ್ನು ಪೂರೈಸಲು ದಾನಿಗಳನ್ನು ಸಂಪರ್ಕಿಸುವ ಕುರಿತು ಚರ್ಚಿಸಲಾಯಿತು. 
  • Blogger Comments
  • Facebook Comments

0 comments:

Post a Comment

Item Reviewed: ಜಾರದಗುಡ್ಡೆ ಶಾಲಾ ಪೋಷಕರ ಸಭೆ Rating: 5 Reviewed By: karavali Times
Scroll to Top