ಸರಕಾರ ಹಾಗೂ ಖಾಝಿಗಳ ಆದೇಶದಂತೆ ಮದ್ದಡ್ಕ ಮಸೀದಿ ತೆರೆಯಲು ಶರತ್ತುಗಳೊಂದಿಗೆ ನಿರ್ಣಯ - Karavali Times ಸರಕಾರ ಹಾಗೂ ಖಾಝಿಗಳ ಆದೇಶದಂತೆ ಮದ್ದಡ್ಕ ಮಸೀದಿ ತೆರೆಯಲು ಶರತ್ತುಗಳೊಂದಿಗೆ ನಿರ್ಣಯ - Karavali Times

728x90

11 June 2020

ಸರಕಾರ ಹಾಗೂ ಖಾಝಿಗಳ ಆದೇಶದಂತೆ ಮದ್ದಡ್ಕ ಮಸೀದಿ ತೆರೆಯಲು ಶರತ್ತುಗಳೊಂದಿಗೆ ನಿರ್ಣಯ
ಬೆಳ್ತಂಗಡಿ (ಕರಾವಳಿ ಟೈಮ್ಸ್) : ತಾಲೂಕಿನ ಮದ್ದಡ್ಕ-ಕುವೆಟ್ಟು ನೂರೂಲ್ ಹುದಾ ಜುಮುಅ ಮಸೀದಿಯಲ್ಲಿ ದೈನಂದಿನ 5 ಬಾರಿಯ ನಮಾಝ್ ಹಾಗೂ ಶುಕ್ರವಾರದ ಜುಮಾ ನಮಾಝಿಗೆ ಮಸೀದಿ ತೆರೆಯುವ ಬಗ್ಗೆ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಎಂ. ಅಬ್ಬೋನು ಮದ್ದಡ್ಕ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಈ ಕೆಳಕಂಡಂತೆ ನಿರ್ಣಯಗಳನ್ನು ಕೈಗೊಂಡು ಮಸೀದಿ ತೆರೆಯುವ ಬಗ್ಗೆ ತೀರ್ಮಾನಿಸಲಾಯಿತು.  ಕೇಂದ್ರ ಹಾಗೂ ರಾಜ್ಯ ಸರಕಾರದ ಆದೇಶ ಮತ್ತು ದ.ಕ. ಜಿಲ್ಲಾ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್  ಕೂರತ್ ಇವರ ನಿರ್ದೇಶನದಂತೆ 12 ವರ್ಷಕ್ಕಿಂತ ಕೆಳಗಿನವರನ್ನು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರನ್ನು ಹೊರತುಪಡಿಸಿ ಉಳಿದವರಿಗೆ ದೈನಂದಿನ 5 ಹೊತ್ತಿನ ಮತ್ತು ಜುಮುಅ ನಮಾಝಿಗೆ ಮಸೀದಿಗೆ ಬರಲು ಅವಕಾಶ ನೀಡದಿರುವುದು., ನಮಾಝಿಗೆ ಬರುವವರ ಆಧಾರ್ ಕಾರ್ಡಿನ ಪ್ರತಿಯನ್ನು ಕಾರ್ಯದರ್ಶಿಗೆ ನೀಡತಕ್ಕದ್ದು., ನಮಾಝಿಗೆ ಬರುವವರು ದೈನಂದಿನ 5 ಹೊತ್ತಿನಲ್ಲಿ ಮತ್ತು ಶುಕ್ರವಾರದಂದು ಮನೆಯಲ್ಲಿ ವಝೂ ಮಾಡಿ, ಮಾಸ್ಕ್ ಧರಿಸಿ ಮುಸಲ್ಲ ಸಮೇತ ಬರತಕ್ಕದ್ದು., ದೈನಂದಿನ ನಮಾಝ್ ಅಝಾನ್ ಆದ ತಕ್ಷಣ ನಿರ್ವಹಿಸಲಾಗುವುದು. ಶುಕ್ರವಾರವಾರದ ಜುಮುಅ ಖುತುಬ ಹಾಗೂ ನಮಾಝನ್ನು ಅಝಾನ್ ಆದ 5 ನಿಮಿಷಗಳ ನಂತರ ಪ್ರಾರಂಭಿಸಲಾಗುವುದು., ಮೊಹಲ್ಲಾ ವ್ಯಾಪ್ತಿಗೆ ಒಳಪಟ್ಟವರಿಗೆ ಹೊರತು ಹೊರಗಿನವರಿಗೆ ಮಸೀದಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ., ಮಸೀದಿಯಲ್ಲಿ ಹಸ್ತಲಾಘವ ಮತ್ತು ಆಲಿಂಗನಕ್ಕೆ ಅವಕಾಶವಿಲ್ಲ, ಮಸೀದಿಯಲ್ಲಿರುವ ಕುರ್‍ಆನ್ ಪಾರಾಯಣ ಮಾಡಲು ಅವಕಾಶವಿರುವುದಿಲ್ಲ, ಮಸೀದಿಗೆ ಬರುವವರನ್ನು ಎಂಟ್ರಿ ಮಾಡಲು ಆಡಳಿತ ಕಮಿಟಿಯ ಐವರನ್ನು ಆಯಾ ಸಂದರ್ಭಗಳಲ್ಲಿ ಅಧ್ಯಕ್ಷರು ನೇಮಕ ಮಾಡಿಕೊಳ್ಳುವುದು., ಸರಕಾರ ಶಾಲೆ ಪ್ರಾರಂಬಿಸಲು ಅನುಮತಿ ನೀಡಿದ ತಕ್ಷಣ ಮದ್ರಸವನ್ನು ಪ್ರಾರಂಭಿಸುವುದು., 1 ರಿಂದ 9 ನೇ ತರಗತಿವರೆಗಿನ ಮಕ್ಕಳನ್ನು ಮುಂದಿನ ಕ್ಲಾಸಿಗೆ ಉತ್ತೀರ್ಣಗೂಳಿಸುವುದು., ಖತೀಬರ ಸಮೇತ 7 ಮುಅಲ್ಲಿಮರಿಗೆ ಬಕ್ರೀದ್ ವರೆಗಿನ ಪೂರ್ಣ ವೇತನ ನೀಡುವುದು., ಖತೀಬರು ಸಮೇತ ಎಲ್ಲಾ ಮುಅಲ್ಲಿಮರಿಗೆ ಕೇಂದ್ರ ಮಸೀದಿಯಲ್ಲಿ ಹಂಚಿಕೆ ಮಾಡಿ ಕಾರ್ಯ ನಿರ್ವಹಿಸಲು ಕೇಳಿಕೊಳ್ಳುವುದು., ಶೌಚಾಲಯದ ಮತ್ತು ನೀರಿನ ವ್ಯವಸ್ಥೆಯಿರುವುದಿಲ್ಲ., ಮಸೀದಿಗೆ ಪ್ರವೇಶಿಸುವಾಗ ಹಾಗೂ ನಿರ್ಗಮಿಸುವಾಗ ಕಡ್ಡಾಯವಾಗಿ ಸ್ಯಾನಿಟೈಝರನ್ನು ಬಳಸುವುದು, ಕೆಮ್ಮು, ಜ್ವರ, ಶೀತ, ನೆಗಡಿ, ಶ್ವಾಸದ ತೊಂದರೆ ಇರುವವರು ಹಾಗೂ ಇನ್ನಿತರ ಗಂಭೀರ ಖಾಯಿಲೆಯಿಂದ ಬಳಲುವವರು ಮಸೀದಿಗೆ ಬಾರದೇ ಇರುವುದು., ಮಸೀದಿ ಹಾಗೂ ಮಸೀದಿ ಆವರಣದಲ್ಲಿ ಯಾವುದೇ ಚರ್ಚೆಗಳಿಗೆ ಕಡ್ಡಾಯವಾಗಿ ಅವಕಾಶವಿರುವುದಿಲ್ಲ., ಜಮಾಅತಿಗೆ ಒಳಪಟ್ಟವರು ಹೊರ ಜಿಲ್ಲೆಯಿಂದ ಬಂದರೆ 15 ದಿನ ನಮ್ಮ ಮಸೀದಿಗೆ ಪ್ರವೇಶಿಸುವಂತಿಲ್ಲ., ಸುನ್ನತ್ ಹಾಗೂ ನಫೀಲ್ ನಮಾಝ್‍ಗಳನ್ನು ಮನೆಯಲ್ಲಿಯೇ ನಿರ್ವಹಿಸುವುದು., ಪ್ರತಿಯೊಬ್ಬರು ಕಡ್ಡಾಯವಾಗಿ ಮೂರು ಅಡಿ ಅಂತರದಲ್ಲಿ ನಿಂತು ನಮಾಝ್ ನಿರ್ವಹಿಸುವುದು., ಮಸೀದಿಗೆ ಪ್ರವೇಶಿಸುವಾಗ ಹೆಸರು ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ ಪ್ರವೇಶಿಸತಕ್ಕದ್ದು ಎಂಬ ತೀರ್ಮಾನಗಳನ್ನು ಸಭೆಯಲ್ಲಿ ಮಸೀದಿ ಆಡಳಿತ ಸಮಿತಿ ಕೈಗೊಂಡಿದೆ.

ಸಭೆಯಲ್ಲಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಎ. ಅಶ್ರಫ್ ಹಾಗೂ ಪದಾಧಿಕಾರಿಗಳು ಮತ್ತು. ಸರ್ವಸದಸ್ಯರು ಭಾಗವಹಿಸಿದ್ದರು. 
  • Blogger Comments
  • Facebook Comments

0 comments:

Post a Comment

Item Reviewed: ಸರಕಾರ ಹಾಗೂ ಖಾಝಿಗಳ ಆದೇಶದಂತೆ ಮದ್ದಡ್ಕ ಮಸೀದಿ ತೆರೆಯಲು ಶರತ್ತುಗಳೊಂದಿಗೆ ನಿರ್ಣಯ Rating: 5 Reviewed By: karavali Times
Scroll to Top