ಮನೆಯ ಮಾಡಿನ ಮೇಲೇರಿ ಆನ್‍ಲೈನ್ ಕ್ಲಾಸಿಗೆ ಹಾಜರಾದ ಕೇರಳದ ಪದವಿ ವಿದ್ಯಾರ್ಥಿನಿ - Karavali Times ಮನೆಯ ಮಾಡಿನ ಮೇಲೇರಿ ಆನ್‍ಲೈನ್ ಕ್ಲಾಸಿಗೆ ಹಾಜರಾದ ಕೇರಳದ ಪದವಿ ವಿದ್ಯಾರ್ಥಿನಿ - Karavali Times

728x90

4 June 2020

ಮನೆಯ ಮಾಡಿನ ಮೇಲೇರಿ ಆನ್‍ಲೈನ್ ಕ್ಲಾಸಿಗೆ ಹಾಜರಾದ ಕೇರಳದ ಪದವಿ ವಿದ್ಯಾರ್ಥಿನಿ



ನೆಟ್‍ವರ್ಕ್ ಸಮಸ್ಯೆಗೆ ತನ್ನದೇ ಶೈಲಿಯಲ್ಲಿ ಪರಿಹಾರ ಕಂಡುಕೊಂಡ ನಮಿತಾ 


ತಿರುವನಂತಪುರಂ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಕಾರಣದಿಂದ ಕಾಲೇಜು ತರಗತಿಗಳು ಬಂದ್ ಆಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದೀಗ ತಗರತಿಗಳೆಲ್ಲವೂ ಆನ್‍ಲೈನ್‍ನಲ್ಲೇ ಸಾಗುತ್ತಿದೆ. ಆನ್‍ಲೈನ್ ತರಗತಿಗೆ  ಹಾಜರಾಗಲು ವಿದ್ಯಾರ್ಥಿಗಳಿಗೆ ನೆಟ್‍ವರ್ಕ್ ಸಮಸ್ಯೆ ತಲೆನೋವಾಗಿದೆ. ಕೇರಳದ ಪದವಿ ವಿದ್ಯಾರ್ಥಿನಿಯೊಬ್ಬಳು ನೆಟ್‍ವರ್ಕ್ ಸಮಸ್ಯೆಯಿಂದ ಆನ್‍ಲೈನ್ ತರಗತಿಗೆ ಹಾಜರಾಗಲು ತನ್ನ ಮನೆಯ ಮಾಡಿನ ಮೇಲೇರಿ ಆನ್‍ಲೈನ್ ತರಗತಿಗೆ ಹಾಜರಾಗುವ ಮೂಲಕ ಸುದ್ದಿಯಾಗಿದ್ದಾಳೆ.

ಕುಟ್ಟಿಪುರಂ ಕೆಎಂಸಿಟಿ ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜಿನ ಬಿಎ ಪದವಿ ವಿದ್ಯಾರ್ಥಿನಿ ನಮಿತಾ ಎಂಬಾಕೆಯೇ ನೆಟ್‍ವರ್ಕ್ ಸಮಸ್ಯೆ ಎದುರಿಸಲು ಮನೆಯ ಮಾಡು ಏರಿ ಆನ್‍ಲೈನ್ ತರಗತಿಗೆ ಹಾಜರಾದ ವಿದ್ಯಾರ್ಥಿನಿ. ಕೊಟ್ಟಕಲ್ ಸಮೀಪದ ಅರಿಕ್ಕಲ್ ನಿವಾಸಿ ನಮಿತಾ ಬಿ.ಎ. ಪದವಿ ತರಗತಿಯ ಐದನೇ ಸೆಮಿಸ್ಟರ್ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ಆನ್‍ಲೈನ್ ತರಗತಿಗೆ ಹಾಜರಾಗಲು ತನ್ನ ಮನೆಯ ಮಾಡಿನ ಮೇಲೆ ಮೊಬೈಲ್ ನೆಟ್‍ವರ್ಕ್ ಸಿಗುವುದನ್ನು ಕಂಡುಕೊಂಡಿದ್ದಾಳೆ. ಹೀಗಾಗಿ ಸುಮಾರು 4 ಗಂಟೆಗಳ ಕಾಲ ಮನೆಯ ಮಾಡಿನ ಮೇಲೆಯೇ ಕುಳಿತು ತರಗತಿಗೆ ಹಾಜರಾಗುತ್ತಿದ್ದಾಳೆ.

ನನ್ನ ಮನೆಯ ಸುತ್ತಮುತ್ತ ಎಲ್ಲಾ ಕಡೆ ಮೊಬೈಲ್ ನೆಟ್‍ವರ್ಕ್‍ಗಾಗಿ ಅಲೆದಾಡಿದ್ದೇನೆ. ಆದರೆ ಎಲ್ಲಿಯೂ ನೆಟ್‍ವರ್ಕ್ ಸಿಗುತ್ತಿರಲಿಲ್ಲ. ಕೊನೆಗೆ ಮನೆಯ ಹಂಚಿನ ಮೇಲೆ ಹೋದಾಗ ಅಲ್ಲಿ ನೆಟ್‍ವರ್ಕ್ ಸಿಕ್ಕಿತ್ತು ಎಂದು ನಮಿತಾ ಹೇಳಿದ್ದಾಳೆ. ಮೊಬೈಲ್ ನೆಟ್‍ವರ್ಕ್ ಹುಡುಕಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಮನೆಯ ಸುತ್ತಮುತ್ತ ಎಲ್ಲಿಯೂ ನೆಟ್‍ವರ್ಕ್ ಸಿಗದೆ ಪರದಾಡುತ್ತಿದ್ದೆ. ಕೊನೆಗೂ ಮನೆಯ ಮಹಡಿ ಹತ್ತಿ ಕುಳಿತು ಆನ್‍ಲೈನ್ ತರಗತಿಗೆ ಹಾಜರಾದೆ. ಸೋಮವಾರ ಹಾಗೂ ಮಂಗಳವಾರ ಛತ್ರಿ ಹಿಡಿದುಕೊಂಡೇ ಪಾಠ ಕೇಳಿದೆ. ಆದರೆ ಬುಧವಾರ ಬಿಸಿಲಿದ್ದರಿಂದ ಆರಮಾಗಿ ತರಗತಿಗೆ ಹಾಜರಾಗಿದ್ದೇನೆ. ಬರೀ ಮಳೆಯಾದರೆ ತೊಂದರೆ ಇಲ್ಲ. ಆದರೆ ಮಿಂಚು ಹಾಗೂ ಗುಡುಗಿನಿಂದಾಗಿ ಸ್ವಲ್ಪ ಭಯವಾಯಿತು ಎಂದಿದ್ದಾಳೆ.

ವಿದ್ಯಾರ್ಥಿನಿ ನಮಿತಾ ಅವರ ತಂದೆ ಕೆ ಸಿ ನಾರಾಯಣ್ ಅವರು ಕೋಟಕಲ್ ಆರ್ಯ ವೈದ್ಯ ಶಾಲೆಯ ಉದ್ಯೋಗಿಯಾಗಿದ್ದು, ತಾಯಿ ಎಂ ಜೀಜಾ ಮಲ್ಲಪುರಂ ಶಾಲೆಯೊಂದರ ಶಿಕ್ಷಕಿಯಾಗಿದ್ದಾರೆ. ತಂದೆ-ತಾಯಿ ಸಹಾಯದಿಂದಾಗಿ ನಮಿತಾ ಮನೆಯ ಮಹಡಿಯಲ್ಲಿ ಕುಳಿತು ತರಗತಿಗೆ ಹಾಜರಾಗಿದ್ದಾಳೆ. ಈಕೆಯ ಸಹೋದರಿ ನಯನಾ ಬಿಎಎಂಎಸ್ 4ನೇ ವರ್ಷದಲ್ಲಿ ಕಲಿಯುತ್ತಿದ್ದು, ಆಕೆಯೂ ತಂಗಿಗೆ ಸಂಪೂರ್ಣ ಸಹಕಾರ ನೀಡಿದ್ದಾಳೆ. ನಾನು ಕೆಲವು ಡಾಟಾ ಆಪರೇಟರ್‍ಗಳ ಮೊರೆ ಹೋದೆ. ಆದರೆ ಏನು ಮಾಡಿದರೂ ನೆಟ್‍ವರ್ಕ್ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ನಮಿತಾ ತಂದೆ ಪ್ರತಿಕ್ರಿಯಿಸಿದ್ದಾರೆ.


  • Blogger Comments
  • Facebook Comments

0 comments:

Post a Comment

Item Reviewed: ಮನೆಯ ಮಾಡಿನ ಮೇಲೇರಿ ಆನ್‍ಲೈನ್ ಕ್ಲಾಸಿಗೆ ಹಾಜರಾದ ಕೇರಳದ ಪದವಿ ವಿದ್ಯಾರ್ಥಿನಿ Rating: 5 Reviewed By: karavali Times
Scroll to Top