ಕಾವಳಕಟ್ಟೆ ಮನೆಗೆ ಪ್ರವೇಶಿಸಿದ ಅಪರೂಪದ ಬಿಳಿ ಹೆಬ್ಬಾವು : ಸುರಕ್ಷಿತವಾಗಿ ಪಿಲಿಕುಳ ನಿಸರ್ಗಧಾಮಕ್ಕೆ ತಲುಪಿಸಿದ ಸ್ನೇಕ್ ಕಿರಣ್ - Karavali Times ಕಾವಳಕಟ್ಟೆ ಮನೆಗೆ ಪ್ರವೇಶಿಸಿದ ಅಪರೂಪದ ಬಿಳಿ ಹೆಬ್ಬಾವು : ಸುರಕ್ಷಿತವಾಗಿ ಪಿಲಿಕುಳ ನಿಸರ್ಗಧಾಮಕ್ಕೆ ತಲುಪಿಸಿದ ಸ್ನೇಕ್ ಕಿರಣ್ - Karavali Times

728x90

4 June 2020

ಕಾವಳಕಟ್ಟೆ ಮನೆಗೆ ಪ್ರವೇಶಿಸಿದ ಅಪರೂಪದ ಬಿಳಿ ಹೆಬ್ಬಾವು : ಸುರಕ್ಷಿತವಾಗಿ ಪಿಲಿಕುಳ ನಿಸರ್ಗಧಾಮಕ್ಕೆ ತಲುಪಿಸಿದ ಸ್ನೇಕ್ ಕಿರಣ್ಬಂಟ್ವಾಳ (ಕರಾವಳಿ ಟೈಮ್ಸ್) : ಬಿಳಿ ಬಣ್ಣದ ಅಪರೂಪದ “ಆಲ್ಟಿನೊ” ಹೆಬ್ಬಾವು ತಾಲೂಕಿನ ಕಾವಳಕಟ್ಟೆ ನಿವಾಸಿ ನೌಶಾದ್ ಎಂಬವರ ಮನೆಯಲ್ಲಿ ಕಾಣಿಸಿಕೊಂಡಿದ್ದು, ಅದನ್ನು ಸುರಕ್ಷಿತವಾಗಿ ಹಿಡಿದು ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಗಿದೆ.

ನೌಶಾದ್ ಅವರ ಮನೆಯಲ್ಲಿ ಬಿಳಿ ಹೆಬ್ಬಾವು ಕಾಣಿಸಿಕೊಂಡಿದ್ದು, ಸ್ಥಳೀಯ ಉರಗತಜ್ಞ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ತಿಳಿಸಿದ ಹಿನ್ನಲೆಯಲ್ಲಿ ಅವರು ಸ್ಥಳಕ್ಕೆ ಬಂದು ಸುರಕ್ಷಿತವಾಗಿ ಹಾವನ್ನು ಹಿಡಿದು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಬಳಿಕ ಅರಣ್ಯ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಹಾವನ್ನು ಪಿಲಿಕುಳ  ನಿಸರ್ಗಧಾಮಕ್ಕೆ ಬಿಡಲಾಗಿದೆ.

ಇಂತಹ ಬಿಳಿ ಬಣ್ಣದ ಉರಗಗಳು ಬಲು ಅಪರೂಪವಾಗಿ ಕಾಣಸಿಗುತ್ತವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಾವು ಕಂಡು ಬಂದ ಎರಡನೇ ಉದಾಹರಣೆ ಇದಾಗಿದೆ. ಹೆಚ್ಚು ಕಡಿಮೆ 20 ಸಾವಿರ ಉರಗಗಳ ಜನನದಲ್ಲಿ ಒಂದು ಮಾತ್ರ ಇಂತಹ ಬಿಳಿ ಬಣ್ಣದ ಹಾವು ಜನನವಾಗುತ್ತದೆ. ಈ ಹೆಬ್ಬಾವುಗಳು ಹುಟ್ಟುವಾಗ ಚರ್ಮದ ವರ್ಣದ್ರವ್ಯದ (pigment) ಕೊರತೆಯಿಂದ ಹುಟ್ಟುತ್ತವೆ. ಆದ್ದರಿಂದ ಇಂತಹ ಜೀವಿಗಳಿಗೆ “ಆಲ್ಟಿನೊ” (albino) ಎನ್ನುತ್ತಾರೆ.

ಇಂತಹ ಬಿಳಿ ಬಣ್ಣದ ಹಾವು ಹೆಚ್ಚು ಸಮಯ ಬದುಕುವುದಿಲ್ಲ. ಯಾಕೆಂದರೆ ಉಳಿದ ಹಾವುಗಳು ಇದರ ಬಣ್ಣದ ಮೇಲೆ ಆಕರ್ಷಣೆಗೊಳಗಾಗಿ ಇದನ್ನು ತಿಂದು ಬಿಡುತ್ತವೆ. ಆದರೆ ಈ ಹಾವು ಮಾತ್ರ ಇಷ್ಟು ದೊಡ್ಡದಾಗಿ ಬೆಳೆದಿರುವುದು ವಿಶೇಷ ಎಂದು ಉರಗ ತಜ್ಞ ಸ್ನೇಕ್ ಕಿರಣ್ ಹೇಳುತ್ತಾರೆ.
  • Blogger Comments
  • Facebook Comments

0 comments:

Post a Comment

Item Reviewed: ಕಾವಳಕಟ್ಟೆ ಮನೆಗೆ ಪ್ರವೇಶಿಸಿದ ಅಪರೂಪದ ಬಿಳಿ ಹೆಬ್ಬಾವು : ಸುರಕ್ಷಿತವಾಗಿ ಪಿಲಿಕುಳ ನಿಸರ್ಗಧಾಮಕ್ಕೆ ತಲುಪಿಸಿದ ಸ್ನೇಕ್ ಕಿರಣ್ Rating: 5 Reviewed By: karavali Times
Scroll to Top