ಇಂದು (ಜೂನ್ 30) ಸಂಜೆ 4 ಗಂಟೆಗೆ ಪ್ರಧಾನಿ ಭಾಷಣ - Karavali Times ಇಂದು (ಜೂನ್ 30) ಸಂಜೆ 4 ಗಂಟೆಗೆ ಪ್ರಧಾನಿ ಭಾಷಣ - Karavali Times

728x90

29 June 2020

ಇಂದು (ಜೂನ್ 30) ಸಂಜೆ 4 ಗಂಟೆಗೆ ಪ್ರಧಾನಿ ಭಾಷಣನವದೆಹಲಿ (ಕರಾವಳಿ ಟೈಮ್ಸ್) : ಜೂನ್ 30 ರ ಮಂಗಳವಾರ ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಮಂಗಳವಾರ ಅನ್‍ಲಾಕ್-1 ಅಂತ್ಯವಾಗಲಿದ್ದು, ಬುಧವಾರ ಅನ್‍ಲಾಕ್-2 ಆರಂಭವಾಗಲಿದೆ. ಈಗಾಗಲೇ ಆನ್‍ಲಾಕ್-2 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಪ್ರಧಾನಿಗಳು ನಾಳೆಯೇ ಭಾಷಣದಲ್ಲಿ ಅನ್‍ಲಾಕ್-2 ಮತ್ತು ಕೊರೊನಾ ಪರಿಸ್ಥಿತಿಯ ಬಗ್ಗೆ ಮಾತನಾಡುವ ಸಾಧ್ಯತೆಗಳಿವೆ.

ಈಗಾಗಲೇ ದೇಶದ ಎಲ್ಲ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿರುವ ಪ್ರಧಾನಿಗಳು ರಾಜ್ಯಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಮಧ್ಯೆ  ಭಾರತದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 5,48,318 ಕ್ಕೆ ತಲುಪಿದ್ದು, ಅದರಲ್ಲಿ 2,10,120 ಸಕ್ರಿಯವಾಗಿದ್ದರೆ, 3,21,723 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ 16,475 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ನಿಟ್ಟಿನಲ್ಲಿ ಇಂದಿನ ಪ್ರಧಾನಿಗಳ‌ ಭಾಷಣ ಮಹತ್ವ ಪಡೆದಿದೆ.


  • Blogger Comments
  • Facebook Comments

0 comments:

Post a comment

Item Reviewed: ಇಂದು (ಜೂನ್ 30) ಸಂಜೆ 4 ಗಂಟೆಗೆ ಪ್ರಧಾನಿ ಭಾಷಣ Rating: 5 Reviewed By: karavali Times
Scroll to Top