ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೊರೊನಾ ವೈರಸ್ ಉಲ್ಬಣಾವಸ್ಥೆಗೆ ಬಂದಿರುವುದರಿಂದ ಸರಕಾರ ಕೆಲವೊಂದು ನಿಯಂತ್ರಣಾ ಕ್ರಮಗಳಿಗೆ ಮುಂದಾಗುತ್ತಿದೆ.
ಸರಕಾರದ ನಿಯಂತ್ರಣಾ ಕ್ರಮವಾಗಿ ಇದೀಗ ಭಾನುವಾರ ಲಾಕ್‍ಡೌನ್ ವೇಳೆ ರಾಜ್ಯದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಸ್ಥಗಿತಗೊಳಿಸಿದೆ.
ರಾಜ್ಯಾದ್ಯಂತ ಕೊರೊನಾ ಹೆಚ್ಚಳ ಕಾರಣದಿಂದ ಸರಕಾರ ಜುಲೈ 5 ರಿಂದ ಆಗಸ್ಟ್ 2 ರವರೆಗೆ ಭಾನುವಾರ ಲಾಕ್‍ಡೌನ್ ಮಾಡುವ ಘೋಷಣೆ ಮಾಡಿದೆ. ಅಲ್ಲದೆ ನೈಟ್ ಕರ್ಫ್ಯೂ ಅವಧಿಯನ್ನು ಕೂಡಾ ಹೆಚ್ಚಿಸಿದೆ. ಇದೀಗ ಭಾನುವಾರದ ಲಾಕ್‍ಡೌನ್ ದಿನ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಕೂಡಾ ಸರಕಾರ ನಿಷೇಧಿಸಿದೆ.
ಲಾಕ್‍ಡೌನ್ ದಿನದಂದು ವಾಹನ ದಟ್ಟಣೆ, ಜನರ ಒಡಾಟ ಕಡಿಮೆ ಮಾಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರದ ನೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಹೀಗಾಗಿ ಸಂಡೇ ಲಾಕ್‍ಡೌನ್ ದಿನ ಬಸ್ ಸಂಚಾರವಿರುವುದಿಲ್ಲ. ಜುಲೈ 5 ರಿಂದ ಆಗಸ್ಟ್ 2ರ ವರೆಗೆ ಭಾನುವಾರದಂದು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ರದ್ದು ಮಾಡಲಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಚಾರ ಬಂದ್ ಮಾಡಲಾಗಿದ್ದು, ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ರಾತ್ರಿ ಕರ್ಫ್ಯೂ ಅವಧಿ ಅಂದರೆ, ರಾತ್ರಿ 8 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಅವಶ್ಯಕತೆಗೆ ತಕ್ಕಂತೆ ಬಸ್‍ಗಳ ಸಂಚಾರವೂ ಕಡಿತಗೊಳ್ಳಲಿದೆ.
0 comments:
Post a Comment