ಸಾಹಸಿ ಯುವಕರಿಗೆ ಜೀವ ರಕ್ಷಕ ಸಾಮಾಗ್ರಿ ಒದಗಿಸಲು ತಹಶೀಲ್ದಾರ್ ಗೆ ಎಸ್.ಡಿ.ಪಿ.ಐ ಮನವಿ - Karavali Times ಸಾಹಸಿ ಯುವಕರಿಗೆ ಜೀವ ರಕ್ಷಕ ಸಾಮಾಗ್ರಿ ಒದಗಿಸಲು ತಹಶೀಲ್ದಾರ್ ಗೆ ಎಸ್.ಡಿ.ಪಿ.ಐ ಮನವಿ - Karavali Times

728x90

1 June 2020

ಸಾಹಸಿ ಯುವಕರಿಗೆ ಜೀವ ರಕ್ಷಕ ಸಾಮಾಗ್ರಿ ಒದಗಿಸಲು ತಹಶೀಲ್ದಾರ್ ಗೆ ಎಸ್.ಡಿ.ಪಿ.ಐ ಮನವಿ



ಬಂಟ್ವಾಳ (ಕರಾವಳಿ ಟೈಮ್ಸ್) : ಗೂಡಿನಬಳಿಯ ನೇತ್ರಾವತಿ ಸೇತುವೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅನಾಹುತಗಳ ಸಂದÀರ್ಭ ಜೀವದ ಹಂಗು ತೊರೆದು ಪ್ರಾಣ ರಕ್ಷಣೆ ಮಾಡುತ್ತಿರುವ ಯುವಕರಿಗೆ ಜೀವ ರಕ್ಷಕ ಸಾಮಾಗ್ರಿ ಮತ್ತು ಇನ್ನಿತರ ಸವಲತ್ತುಗಳನ್ನು ಸರಕಾರದ ವತಿಯಿಂದ ನೀಡುವಂತೆ ಆಗ್ರಹಿಸಿ ಎಸ್.ಡಿ.ಪಿ.ಐ ವತಿಯಿಂದ ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್ ಅರಿಗೆ ಮನವಿ ನೀಡಲಾಯಿತು.

ಬಂಟ್ವಾಳ ತಾಲೂಕಿನ ಗೂಡಿನಬಳಿ ಎಂಬಲ್ಲಿಯ ನೇತ್ರಾವತಿ ಹಳೆ ಸೇತುವೆಯಲ್ಲಿ ನಿರಂತರವಾಗಿ ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಲೇ ಇದೆ. ಈ ಎಲ್ಲಾ ಸಂಧರ್ಭಗಳಲ್ಲಿಯೂ ಅಲ್ಲಿನ ಸ್ಥಳೀಯ ಯುವಕರೇ ತಮ್ಮ ಪ್ರಾಣದ ಹಂಗನ್ನು ತೊರೆದು ಜೀವ ರಕ್ಷಣೆಯ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಅನೇಕ ಪ್ರಾಣಗಳನ್ನು ರಕ್ಷಿಸಿದ್ದರೆ ಮತ್ತೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇದುವರೆಗೆ ಈ ಪ್ರದೇಶವನ್ನು ಜಿಲ್ಲಾಡಳಿತವಾಗಲೀ ಅಥವಾ ಸ್ಥಳೀಯ ಶಾಸಕರಾಗಲೀ ಅಪಾಯ ಸಂಭವನೀಯ ಸ್ಥಳವೆಂದು ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಇರುವುದು ವಿಷಾದನೀಯ.

ಇತ್ತೀಚೆಗೆ ನಿಶಾಂತ್ ಕಲ್ಲಡ್ಕ ಎಂಬ ಯುವಕನು ಮಾನಸಿಕವಾಗಿ ನೊಂದು ಇದೇ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂದರ್ಭ ಆತನನ್ನು ಬದುಕುಳಿಸುವುದಕ್ಕೆ ಪ್ರಯತ್ನ ಪಟ್ಟಿರುವುದು ಸ್ಥಳೀಯ ಯುವಕರಾದ ಮಹಮ್ಮದ್, ತೌಸೀಫ್, ಸಮೀರ್, ಝಾಹಿದ್ ಮತ್ತು ಆರಿಫ್ ಪಿ.ಜೆ ಎಂಬವರಾಗಿರುತ್ತಾರೆ. ಇವರಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದ್ದು ವಿವಿಧ ಸಂಘ ಸಂಸ್ಥೆಗಳು ಇವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಮಾಡಿರುತ್ತಾರೆ. ಆದರೆ ಇದುವರೆಗೂ ಇವರನ್ನು ತಾಲೂಕಾಡಳಿತವಾಗಲೀ, ಜಿಲ್ಲಾಡಳಿತವಾಗಲೀ, ಸರಕಾರವಾಗಲೀ ಇದುವರೆಗೆ ಗುರುತಿಸಿರುವುದಿಲ್ಲ.

ಈ ಬಗ್ಗೆ ತಹಶೀಲ್ದಾರರು ಪರಿಶೀಲಿಸಿ ಗೂಡಿನಬಳಿಯ ಹಳೆ ಸೇತುವೆಯ ಬಳಿ ಮುಂಜಾಗೃತಾ ಕ್ರಮವಾಗಿ ತಡೆಗೋಡೆ ನಿರ್ಮಾಣ ಮತ್ತು ಪೆÇೀಲಿಸ್ ನಿಯೋಜನೆ ಮಾಡುವಂತೆ, ಇತ್ತೀಚೆಗೆ ಸಾಹಸ ಮೆರೆದ ಯುವಕರಿಗೆ ಸರಕಾರದ ವತಿಯಿಂದ ಪ್ರಶಸ್ತಿ ಮತ್ತು ಪೆÇ್ರೀತ್ಸಾಹ ಧನ ನೀಡಿ ಗೌರವಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದ್ದು, ಕೇವಲ ಆತ್ಮಹತ್ಯಾ ಪ್ರಕರಣಗಳಲ್ಲದೆ ಪ್ರಕೃತಿ ವಿಕೋಪದಂತಹಾ ಆಕಸ್ಮಿಕ ಘಟನೆಗಳು ನಡೆಯುವ ಸಂಭವ ಜಾಸ್ತಿ ಇರುವುದರಿಂದ ಸ್ಥಳೀಯ ಯುವಕರಿಗೆ ಜೀವ ರಕ್ಷಕ ತರಬೇತಿ ಸೇರಿದಂತೆ ಜೀವ ರಕ್ಷಕ ಸಲಕರಣೆಗಳನ್ನು ಸರಕಾರದ ವತಿಯಿಂದ ನೀಡುವಂತೆ ಜಿಲ್ಲಾಡಳಿತಕ್ಕೆ ಹಾಗೂ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಲಾಯಿತು.

ಈ ಸಂದರ್ಭ ಬಂಟ್ವಾಳ ಪುರಸಭಾ ಸದಸ್ಯರಾದ ಝೀನತ್ ಫೈರೋಝ್, ಸಂಶಾದ್ ಬಾನು, ಪ್ರಮುಖರಾದ ಶಫಿವುಲ್ಲಾ, ಫಿರೋಝ್, ಅಬ್ದುಲ್ ರಹಿಮಾನ್ ಗೂಡಿನಬಳಿ, ಅನ್ಸಾರ್, ಅನ್ವರ್ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಸಾಹಸಿ ಯುವಕರಿಗೆ ಜೀವ ರಕ್ಷಕ ಸಾಮಾಗ್ರಿ ಒದಗಿಸಲು ತಹಶೀಲ್ದಾರ್ ಗೆ ಎಸ್.ಡಿ.ಪಿ.ಐ ಮನವಿ Rating: 5 Reviewed By: karavali Times
Scroll to Top