ಲಾಕ್‍ಡೌನ್ ಸಡಿಲಗೊಂಡರೂ ಕೊರೋನಾ ಅಟ್ಟಹಾಸಕ್ಕೆ ಬಿದ್ದಿಲ್ಲ ಬ್ರೇಕ್ - Karavali Times ಲಾಕ್‍ಡೌನ್ ಸಡಿಲಗೊಂಡರೂ ಕೊರೋನಾ ಅಟ್ಟಹಾಸಕ್ಕೆ ಬಿದ್ದಿಲ್ಲ ಬ್ರೇಕ್ - Karavali Times

728x90

1 June 2020

ಲಾಕ್‍ಡೌನ್ ಸಡಿಲಗೊಂಡರೂ ಕೊರೋನಾ ಅಟ್ಟಹಾಸಕ್ಕೆ ಬಿದ್ದಿಲ್ಲ ಬ್ರೇಕ್ರಾಜ್ಯದಲ್ಲಿ ಇಂದು 187 ಪಾಸಿಟಿವ್ ಪ್ರಕರಣ ದಾಖಲು

ಒಟ್ಟು ಸೋಂಕಿತರ ಸಂಖ್ಯೆ 3408ಕ್ಕೇರಿಕೆ


ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್‍ಡೌನ್ ಇದೀಗ ಸರಕಾರ ಸ್ವಯಂ ಆಗಿ ವಾಪಾಸು ಪಡೆದುಕೊಂಡಿದೆ. ಆದರೂ ಕೊರೋನಾ ಸೋಂಕು ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ನಿನ್ನೆ ದಾಖಲೆ ಬರೆದಿದ್ದ ಕೊರೊನಾ ಪಾಸಿಟಿವ್ ಪ್ರಕರಣ ಇಂದು ಮತ್ತೆ ರೌದ್ರಾವತಾರ ಮೆರೆದಿದೆ. 187 ಪ್ರಕರಣ ಇಂದು ದಾಖಲಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 3408ಕ್ಕೇರಿಕೆಯಾಗಿದೆ. ಇಂದಿನ ಬಹುತೇಕ ಪ್ರಕರಣದ ಹಿನ್ನಲೆ ಅಂತಾರಾಜ್ಯ ಪ್ರಯಾಣ ಆಗಿದೆ.

ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಬೆಂಗಳೂರು 28, ಕಲಬುರಗಿ 24, ಮಂಡ್ಯ 15, ಉಡುಪಿ 73, ಹಾಸನ 16, ಬೀದರ್ 2, ಚಿಕ್ಕಬಳ್ಳಾಪುರ 5, ದಕ್ಷಿಣ ಕನ್ನಡ 4, ವಿಜಯಪುರ 1, ಬಾಗಲಕೋಟೆ 2, ಬಳ್ಳಾರಿ 3, ಶಿವಮೊಗ್ಗ 9, ಧಾರವಾಡ 2, ಕೋಲಾರ 1, ಹಾವೇರಿ 1 ಮತ್ತು ರಾಮನಗರದಲ್ಲಿ 1 ಪಾಸಿಟಿವ್ ಪ್ರಕರಣ ಕಂಡು ಬಂದಿದೆ.

ಇಂದು ಕೊರೊನಾದಿಂದ ಗುಣಮುಖರಾಗಿ 110 ಮಂದಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 3408 ಕೊರೊನಾ ಸೋಂಕಿತರ ಪೈಕಿ 2026 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ ಕೊರೊನಾದಿಂದ 52 ಮಂದಿ ಸಾವನ್ನಪ್ಪಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್ ಸಡಿಲಗೊಂಡರೂ ಕೊರೋನಾ ಅಟ್ಟಹಾಸಕ್ಕೆ ಬಿದ್ದಿಲ್ಲ ಬ್ರೇಕ್ Rating: 5 Reviewed By: karavali Times
Scroll to Top