ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್‍ಪದವು ಶಾಖಾಧ್ಯಕ್ಷರಾಗಿ ರಫೀಕ್ ಗೂಡಿನಬಳಿ ಆಯ್ಕೆ - Karavali Times ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್‍ಪದವು ಶಾಖಾಧ್ಯಕ್ಷರಾಗಿ ರಫೀಕ್ ಗೂಡಿನಬಳಿ ಆಯ್ಕೆ - Karavali Times

728x90

8 June 2020

ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್‍ಪದವು ಶಾಖಾಧ್ಯಕ್ಷರಾಗಿ ರಫೀಕ್ ಗೂಡಿನಬಳಿ ಆಯ್ಕೆ

ಶಾಖಾಧ್ಯಕ್ಷ ರಫೀಕ್




ಮಂಗಳೂರು (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್‍ಪದವು ಶಾಖಾಧ್ಯಕ್ಷರಾಗಿ ರಫೀಕ್ ಗೂಡಿನಬಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಿನಾನ್ ದಾರಿಮಿ ಆಯ್ಕೆಯಾಗಿದ್ದಾರೆ.

ಇಲ್ಲಿನ ಮಲಾರ್ ಬಾವಾಕ ಅವರ ಕಟ್ಟಡದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ಸಮಿತಿ ಅಧ್ಯಕ್ಷ ಎ ಕೆ ಅಬ್ದುಲ್ ಖಾದರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಳಚ್ಚಿಲ್ ಶಂಸುಲ್ ಉಲಮಾ ಕ್ರಿಯಾ ಸಮಿತಿ ಅಧ್ಯಕ್ಷ ಶಮೀರ್ ಶಾನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಲಿಕ್, ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್ ಯೂನಿಟ್ ಪ್ರದಾನ ಕಾರ್ಯದರ್ಶಿ ಹಾರಿಸ್ ಎನ್.ಎಂ., ಅಬೂಸ್ವಾಲಿಹ್ ಕಣ್ಣೂರ್, ನಸೀಬ್ ಸಿ.ಎಚ್., ಇಮ್ರಾನ್ ಅತಿಥಿಗಳಾಗಿ ಭಾಗವಹಿಸಿದ್ದರು.

ಸಿನಾನ್ ದಾರಿಮಿ ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್ ಅಧ್ಯಕ್ಷ ದಾವೂದ್ ಐಫಾ ಸ್ವಾಗತಿಸಿ, ಅಡ್ಯಾರ್ ಕಣ್ಣೂರ್ ಕ್ಲಸ್ಟರ್ ಅಧ್ಯಕ್ಷ ನಝೀರ್ ವಳಚ್ಚಿಲ್‍ಪದವು ಪ್ರಸ್ತಾವನೆಗೈದರು. ಮಂಗಳೂರು ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಸಂಸ್ಥೆಯ ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಉಪಾಧ್ಯಕ್ಷರಾಗಿ ಫಾರೂಕ್ ಡಿ, ಕೋಶಾಧಿಕಾರಿಯಾಗಿ ಸಾದಿಕ್ ಸಾಹೇಬ್, ವರ್ಕಿಂಗ್ ಕಾರ್ಯದರ್ಶಿಯಾಗಿ ಫರಾಝ್ ವಳಚ್ಚಿಲ್‍ಪದವು, ಉಪ ಸಮಿತಿಗಳಿಗೆ ಕಾರ್ಯದರ್ಶಿಗಳಾಗಿ ಸಲಾಂ, ಶುಹೈಬ್, ಮುಹಮ್ಮದ್, ಸಫ್ವಾನ್,    ರಮೀಝ್, ಆಶಿಕ್, ವರ್ಕಿಂಗ್ ಸದಸ್ಯರಾಗಿ ಶೇಖ್ ಅಹಮದ್, ಅತಾವುಲ್ಲಾ, ಅಶ್ರಫ್, ಅಕ್ಬರ್, ನೌಫಲ್, ಹಾರಿಸ್,  ಕ್ಲಸ್ಟರ್ ಕೌನ್ಸಿಲರ್‍ಗಳಾಗಿ ಸಾದಿಕ್ ಸಾಹೇಬ್ ಹಾಗೂ ಫಾರೂಕ್ ಅವರನ್ನು ಆಯ್ಕೆ ಮಾಡಲಾಯಿತು.
  • Blogger Comments
  • Facebook Comments

0 comments:

Post a Comment

Item Reviewed: ಎಸ್ಕೆಎಸ್ಸೆಸ್ಸೆಫ್ ವಳಚ್ಚಿಲ್‍ಪದವು ಶಾಖಾಧ್ಯಕ್ಷರಾಗಿ ರಫೀಕ್ ಗೂಡಿನಬಳಿ ಆಯ್ಕೆ Rating: 5 Reviewed By: karavali Times
Scroll to Top