ಸ್ವಿಸ್ ಬ್ಯಾಂಕ್ ಹಣದ ಮೋದಿ ಭರವಸೆ ಈಡೇರಿಸಲು ಇದು ಸಕಾಲ : ಉಮರ್ ಫಾರೂಕ್ - Karavali Times ಸ್ವಿಸ್ ಬ್ಯಾಂಕ್ ಹಣದ ಮೋದಿ ಭರವಸೆ ಈಡೇರಿಸಲು ಇದು ಸಕಾಲ : ಉಮರ್ ಫಾರೂಕ್ - Karavali Times

728x90

3 June 2020

ಸ್ವಿಸ್ ಬ್ಯಾಂಕ್ ಹಣದ ಮೋದಿ ಭರವಸೆ ಈಡೇರಿಸಲು ಇದು ಸಕಾಲ : ಉಮರ್ ಫಾರೂಕ್

ಉಮರ್ ಫಾರೂಕ್ ಫರಂಗಿಪೇಟೆ


 ಮಂಗಳೂರು (ಕರಾವಳಿ ಟೈಮ್ಸ್) :  2014 ರ ಚುನಾವಣೆಗೆ ಮುಂಚೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು  ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕಲ್ಲಿರುವ ಕಪ್ಪು ಹಣ ಭಾರತಕ್ಕೆ ತಂದು ದೇಶದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯ ಖಾತೆಗೂ 15 ಲಕ್ಷ ರೂಪಾಯಿಯಂತೆ ಹಂಚುತ್ತೇವೆ ಎಂದು ಜನರಿಗೆ ನೀಡಿದ ಭರವಸೆಯನ್ನು ಆರು ವರ್ಷ ಕಳೆದರೂ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಇದೀಗ ಆ ಹಣ ತಂದು ಹಂಚಲು ಸಕಾಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಕೆಪಿಸಿಸಿ ಸಂಯೋಜಕ ಉಮರ್ ಫಾರೂಕ್ ಫರಂಗಿಪೇಟೆ ವ್ಯಂಗ್ಯವಾಡಿದ್ದಾರೆ.

ಮೋದಿ ಅಧಿಕಾರಕ್ಕೇರಿ ಆರು ವರ್ಷ ಕಳೆದರೂ ದೇಶದ ಜನತೆಗೆ ಕೊಟ್ಟ ಭರವಸೆ ಈಡೇರಿಸಲು ವಿಫಲರಾಗಿದ್ದಾರೆ. ಇದೀಗ ದೇಶದ ಅರ್ಥಿಕ ಪರಿಸ್ಥಿತಿ ಅತ್ಯಂತ ಸಂಕಷ್ಟದಲ್ಲಿದೆ ಮಾತ್ರವಲ್ಲ ದೇಶದ ಮಾನವ ಸಂಪತ್ತಾಗಿರುವ ಯುವ ಸಮುದಾಯ ದೇಶ ಮತ್ತು ವಿದೇಶಗಳಲ್ಲಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಸ್ವಿಸ್ ಬ್ಯಾಂಕ್ ಹಣವನ್ನು ಅಂದು ಮೋದಿಜಿಯವರು ಹೇಳಿದಂತೆ ಇಂದು ಪ್ರತಿಯೊಬ್ಬ ಭಾರತೀಯನ ಖಾತೆಗೂ ಹಂಚಲು ಅತ್ಯಂತ ಸೂಕ್ತ ಹಾಗೂ ಅನಿವಾರ್ಯ ಪರಿಸ್ಥಿತಿಯಾಗಿದ್ದು, ದೇಶದ ಜನರಿಗೆ ನೀಡಿದ ಭರವಸೆ ಈಡೇರಿಸುವಂತೆ ಉಮರ್ ಫಾರೂಕ್ ಆಗ್ರಹಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸ್ವಿಸ್ ಬ್ಯಾಂಕ್ ಹಣದ ಮೋದಿ ಭರವಸೆ ಈಡೇರಿಸಲು ಇದು ಸಕಾಲ : ಉಮರ್ ಫಾರೂಕ್ Rating: 5 Reviewed By: karavali Times
Scroll to Top