ರಾಜ್ಯ ಸರಕಾರದಿಂದಲೂ ಅನ್ ಲಾಕ್ ಗೈಡ್ ಲೈನ್ಸ್ ಬಿಡುಗಡೆ : ಭಾನುವಾರದ ಲಾಕ್ ಡೌನ್ ಹಾಗೂ ರಾತ್ರಿ ಕರ್ಫ್ಯೂ ತೆರವು - Karavali Times ರಾಜ್ಯ ಸರಕಾರದಿಂದಲೂ ಅನ್ ಲಾಕ್ ಗೈಡ್ ಲೈನ್ಸ್ ಬಿಡುಗಡೆ : ಭಾನುವಾರದ ಲಾಕ್ ಡೌನ್ ಹಾಗೂ ರಾತ್ರಿ ಕರ್ಫ್ಯೂ ತೆರವು - Karavali Times

728x90

30 July 2020

ರಾಜ್ಯ ಸರಕಾರದಿಂದಲೂ ಅನ್ ಲಾಕ್ ಗೈಡ್ ಲೈನ್ಸ್ ಬಿಡುಗಡೆ : ಭಾನುವಾರದ ಲಾಕ್ ಡೌನ್ ಹಾಗೂ ರಾತ್ರಿ ಕರ್ಫ್ಯೂ ತೆರವುಬೆಂಗಳೂರು (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ನಂತರ ಇದೀಗ ರಾಜ್ಯ ಸರಕಾರ ಕೂಡಾ  ಅನ್ ಲಾಕ್-3 ಮಾರ್ಗಸೂಚಿ ಬಿಡುಗಡೆ ಮಾಡಿದೆ.

 ಆಗಸ್ಟ್ 2 ರಿಂದಲೇ ಜಾರಿಗೆ ಬರುವಂತೆ ಭಾನುವಾರದ ಲಾಕ್ ಡೌನ್ ಅನ್ನು ರದ್ದುಗೊಳಿಸಲಾಗಿದ್ದು, ರಾತ್ರಿ ಕರ್ಫ್ಯೂ ಕೂಡಾ ತೆರವುಗೊಳಿಸಲಾಗಿದೆ.

ರಾಜ್ಯ ಸರ್ಕಾರ, ಕೇಂದ್ರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿದ್ದು, ಆಗಸ್ಟ್ 5 ರಿಂದ ಜಾರಿಗೆ ಬರುವಂತೆ ರಾಜ್ಯದಲ್ಲಿ ಜಿಮ್ ಮತ್ತು ಯೋಗ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ. 

ಕೋವಿಡ್‌ ಸೋಂಕು ಹೆಚ್ಚುತ್ತಲೇ ಇರುವುದರಿಂದ ಆಗಸ್ಟ್‌ 31 ರವರೆಗೂ ಶಾಲಾ-ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಅನುಮತಿ ನೀಡಿಲ್ಲ. ಸದ್ಯಕ್ಕೆ ಮೆಟ್ರೋ ಸಂಚಾರ, ಚಿತ್ರಮಂದಿರ, ಸ್ವಿಮ್ಮಿಂಗ್ ಪೂಲ್, ಮನರಂಜನಾ ಉದ್ಯಾನವನ, ತೆರೆಯುವುದಕ್ಕೆ ಅನುಮತಿ ನೀಡಲಾಗಿಲ್ಲ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪು ಸೇರುವುದರ ಮೇಲಿದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯ ಸರಕಾರದಿಂದಲೂ ಅನ್ ಲಾಕ್ ಗೈಡ್ ಲೈನ್ಸ್ ಬಿಡುಗಡೆ : ಭಾನುವಾರದ ಲಾಕ್ ಡೌನ್ ಹಾಗೂ ರಾತ್ರಿ ಕರ್ಫ್ಯೂ ತೆರವು Rating: 5 Reviewed By: karavali Times
Scroll to Top