ಬೆಂಗಳೂರು ಗಲಭೆಗೆ ಸಂಬಂಧಿಸಿದ ಕಾಪೆರ್Çರೇಟರ್ ಪತಿ ಸೇರಿ 60 ಮಂದಿ ಬಂಧನ : ಸಂದೀಪ್ ಪಾಟೀಲ್ - Karavali Times ಬೆಂಗಳೂರು ಗಲಭೆಗೆ ಸಂಬಂಧಿಸಿದ ಕಾಪೆರ್Çರೇಟರ್ ಪತಿ ಸೇರಿ 60 ಮಂದಿ ಬಂಧನ : ಸಂದೀಪ್ ಪಾಟೀಲ್ - Karavali Times

728x90

14 August 2020

ಬೆಂಗಳೂರು ಗಲಭೆಗೆ ಸಂಬಂಧಿಸಿದ ಕಾಪೆರ್Çರೇಟರ್ ಪತಿ ಸೇರಿ 60 ಮಂದಿ ಬಂಧನ : ಸಂದೀಪ್ ಪಾಟೀಲ್ ಬೆಂಗಳೂರು (ಕರಾವಳಿ ಟೈಮ್ಸ್) : ನಗರದ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕಾಪೆರ್Çರೇಟರ್ ಪತಿ ಸೇರಿದಂತೆ 60 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎನ್ನಲಾಗಿದೆ ಎಂದು ನಗರ ಜಂಟಿ ಪೆÇಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ. 

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಗವಾರ ವಾರ್ಡ್ ಬಿಬಿಎಂಪಿ ಕಾಪೆರ್Çರೇಟರ್ ಇರ್ಶಾದ್ ಬೇಗಂ ಅವರ ಪತಿ ಕಲೀಂ ಪಾಷಾ ಸೇರಿದಂತೆ 60 ಮಂದಿಯನ್ನು ಗುರುವಾರ ಬಂಧನಕ್ಕೊಳಪಡಿಸಲಾಗಿದ್ದು, ಇದರೊಂದಿಗೆ ಪ್ರಕರಣ ಸಂಬಂಧ ಈವರೆಗೂ ಒಟ್ಟಾರೆ 206 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ವಶಕ್ಕೆ ಪಡೆದಿರುವ ಪ್ರತೀ ಆರೋಪಿಯನ್ನೂ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ, ಗಲಭೆಯಲ್ಲಿ ಪಾತ್ರದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇಸ್ಲಾಮಿನ ಪ್ರವಾದಿಗಳ ವಿರುದ್ಧ ಪುಲಕೇಶ್ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಅವರ ಅಳಿಯ ನವೀನ್ ಎಂಬ ಕಿಡಿಗೇಡಿ ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳಕಾರಿ ಪೆÇೀಸ್ಟ್ ಮಾಡಲಾಗಿದೆ ಎಂದು ಮಂಗಳವಾರ ರಾತ್ರಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸ, ಸುತ್ತಮುತ್ತಲಿನ ಮನೆಗಳು ಹಾಗೂ ಡಿ.ಜೆ. ಹಳ್ಳಿ ಪೆÇಲೀಸ್ ಠಾಣೆಯಲ್ಲಿ ನಿರ್ದಿಷ್ಟ ಗುಂಪು ದಾಂಧಲೆ ನಡೆಸಿ ಮನೆ, ವಾಹನಗಳು, ಮಳಿಗೆಗಳಿಗೂ ಬೆಂಕಿ ಹಚ್ಚಿತ್ತು. ಘಟನೆಯಿಂದ ಶಾಸಕರ ನಿವಾಸ ಹಾಗೂ ಪಕ್ಕದ ಮನೆ ಸುಟ್ಟು ಭಸ್ಮವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೆÇಲೀಸರು ಫೈರಿಂಗ್ ನಡೆಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದರು. 


  • Blogger Comments
  • Facebook Comments

0 comments:

Post a Comment

Item Reviewed: ಬೆಂಗಳೂರು ಗಲಭೆಗೆ ಸಂಬಂಧಿಸಿದ ಕಾಪೆರ್Çರೇಟರ್ ಪತಿ ಸೇರಿ 60 ಮಂದಿ ಬಂಧನ : ಸಂದೀಪ್ ಪಾಟೀಲ್ Rating: 5 Reviewed By: karavali Times
Scroll to Top