ಕಾಪು ಶಾಸಕ ಲಾಲಾಜಿ ಆರ್. ಮೆಂಡನ್‍ಗೆ ಕೊರೋನಾ ಪಾಸಿಟಿವ್ - Karavali Times ಕಾಪು ಶಾಸಕ ಲಾಲಾಜಿ ಆರ್. ಮೆಂಡನ್‍ಗೆ ಕೊರೋನಾ ಪಾಸಿಟಿವ್ - Karavali Times

728x90

14 August 2020

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್‍ಗೆ ಕೊರೋನಾ ಪಾಸಿಟಿವ್

 

ಉಡುಪಿ (ಕರಾವಳಿ ಟೈಮ್ಸ್) : ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಲಾಲಾಜಿ ಅರ್. ಮೆಂಡನ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಬಗ್ಗೆ ಅವರು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿದ್ದು, ತಮ್ಮ ಆಪ್ತ ಕಾರ್ಯದರ್ಶಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಕಳೆದ 7 ದಿನಗಳಿಂದ ಹೋಂ ಕಾರಂಟೈನ್ ನಲ್ಲಿದ್ದು, ಮುಂಜಾಗೃತಾ ಕ್ರಮವಾಗಿ ನಾನು ಪರೀಕ್ಷೆ ಮಾಡಿಸಿದಾಗ ಕೋವಿಡ್ 19 ಸೋಂಕು ದೃಢಪಟ್ಟಿದೆ. ಯಾವುದೇ ಸೋಂಕಿನ ಲಕ್ಷಣಗಳು ಇಲ್ಲದಿರುವುದರಿಂದ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ.  ಕ್ಷೇತ್ರದ ಜನ ಅಗತ್ಯ ಕಾರ್ಯಗಳಿಗೆ ಕಚೇರಿಯನ್ನು ಸಂಪರ್ಕಿಸಿ. ನಾನು ಆದಷ್ಟು ಬೇಗ ಕಾಪು ಜನತೆಯ ಸೇವೆಗೆ ಮರಳುತ್ತೇನೆ, ತಮ್ಮ ಸಹಕಾರವಿರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಶಾಸಕರ ಆಪ್ತ ಕಾರ್ಯದರ್ಶಿಗೆ ಕಳೆದ ವಾರ ಸೋಂಕು ಧೃಡಪಟ್ಟಿದ್ದು, ಆ ಬಳಿಕ ಶಾಸಕರು ಸ್ವಯಂ ಕ್ವಾರಂಟೈನ್ ಆಗಿದ್ದರು. ವಾರದ ಬಳಿಕ ಪರೀಕ್ಷೆಗೊಳಗಾದ ಲಾಲಾಜಿ ಆರ್ ಮೆಂಡನ್ ವರದಿಯಲ್ಲಿ ಸೋಂಕು ಧೃಡಪಟ್ಟಿದೆ.


  • Blogger Comments
  • Facebook Comments

0 comments:

Post a Comment

Item Reviewed: ಕಾಪು ಶಾಸಕ ಲಾಲಾಜಿ ಆರ್. ಮೆಂಡನ್‍ಗೆ ಕೊರೋನಾ ಪಾಸಿಟಿವ್ Rating: 5 Reviewed By: karavali Times
Scroll to Top