ಪ್ರಧಾನಿ ನೀತಿಗಳು ದೇಶದ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ : ಮೋದಿ ವಿರುದ್ದ ಗುಡುಗಿದ ರಾಹುಲ್ - Karavali Times ಪ್ರಧಾನಿ ನೀತಿಗಳು ದೇಶದ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ : ಮೋದಿ ವಿರುದ್ದ ಗುಡುಗಿದ ರಾಹುಲ್ - Karavali Times

728x90

9 August 2020

ಪ್ರಧಾನಿ ನೀತಿಗಳು ದೇಶದ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ : ಮೋದಿ ವಿರುದ್ದ ಗುಡುಗಿದ ರಾಹುಲ್

 

ದೇಶದ 14 ಕೋಟಿ ಜನರಿಗೆ ನಿರುದ್ಯೋಗ ನೀಡಿದ್ದೇ ಸರಕಾರದ ಸಾಧನೆ


ಕೆಲಸ ಕೊಡಿ (ರೋಜಗಾರ್ ದೋ) ಅಭಿಯಾನದಲ್ಲಿ ಸಾಥ್ ನೀಡಿ : ಜನರಿಗೆ ರಾಹುಲ್ ಕರೆ 


ನವದೆಹಲಿ (ಕರಾವಳಿ ಟೈಮ್ಸ್) : ಪ್ರಧಾನಿ ನರೇಂದ್ರ ಮೋದಿ ಅವರ ತಪ್ಪು ನೀತಿಗಳು ದೇಶದ 14 ಕೋಟಿ ಜನರಿಗೆ ನಿರುದ್ಯೋಗ ನೀಡಿವೆ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ಗುಡುಗಿದ್ದಾರೆ.

ದೇಶದ ಯುವಕರಿಗೆ ಮೋದಿಯವರು ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೇರಿದ್ದರು. ಪ್ರತಿ ವರ್ಷ ಉದ್ಯೋಗ ಸೃಷ್ಟಿಯ ದೊಡ್ಡ ಕನಸನ್ನು ದೇಶದ ಜನತೆಯ ಮುಂದಿಟ್ಟಿದ್ದರು. ಆದ್ರೆ ಅವರ ಯೋಜನೆ, ನೀತಿಗಳು ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿವೆ ಎಂದಿದ್ದಾರೆ.

ವಿಡಿಯೋ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನೋಟ್ ಬ್ಯಾನ್, ತಪ್ಪು ಜಿಎಸ್‍ಟಿ ಮತ್ತು ಪೂರ್ವ ತಯಾರಿಗಳಿಲ್ಲದ ಲಾಕ್‍ಡೌನ್ ಈ ಎಲ್ಲ ನಿರ್ಧಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಬಿಜೆಪಿ ಸರಕಾರ ಯುವಕರಿಗೆ ಉದ್ಯೋಗ ನೀಡಲು ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ಯುವ ಕಾಂಗ್ರೆಸ್ ಇದರ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸಲಿದೆ ಎಂದಿದ್ದಾರೆ. 

ಕೆಲಸ ಕೊಡಿ (ರೋಜಗಾರ್ ದೋ) ಅಭಿಯಾನದಲ್ಲಿ ನಮಗೆ ಸಾಥ್ ನೀಡಿ. ನಿದ್ದೆಯಲ್ಲಿರುವ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ. ಇದು ದೇಶದ ಭವಿಷ್ಯದ ಪ್ರಶ್ನೆಯಾಗಿದೆ ಎಂದು ಟ್ವೀಟ್ ಮೂಲಕ ಜನರಿಗೆ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. 


  • Blogger Comments
  • Facebook Comments

0 comments:

Post a Comment

Item Reviewed: ಪ್ರಧಾನಿ ನೀತಿಗಳು ದೇಶದ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ : ಮೋದಿ ವಿರುದ್ದ ಗುಡುಗಿದ ರಾಹುಲ್ Rating: 5 Reviewed By: karavali Times
Scroll to Top