ಡ್ರಗ್ಸ್ ವಿರುದ್ದ ಸಮರ ಮುಂದುವರಿಸಿದ ಬೆಂಗಳೂರು ಪೊಲೀಸರು : ಸುರಂಗದೊಳಗಿದ್ದ ಒಂದೂವರೆ ಟನ್ ಗಾಂಜಾ ಸಂಗ್ರಹ ಬೇಧಿಸಿ, ನಾಲ್ವರ ದಸ್ತಗಿರಿ - Karavali Times ಡ್ರಗ್ಸ್ ವಿರುದ್ದ ಸಮರ ಮುಂದುವರಿಸಿದ ಬೆಂಗಳೂರು ಪೊಲೀಸರು : ಸುರಂಗದೊಳಗಿದ್ದ ಒಂದೂವರೆ ಟನ್ ಗಾಂಜಾ ಸಂಗ್ರಹ ಬೇಧಿಸಿ, ನಾಲ್ವರ ದಸ್ತಗಿರಿ - Karavali Times

728x90

11 September 2020

ಡ್ರಗ್ಸ್ ವಿರುದ್ದ ಸಮರ ಮುಂದುವರಿಸಿದ ಬೆಂಗಳೂರು ಪೊಲೀಸರು : ಸುರಂಗದೊಳಗಿದ್ದ ಒಂದೂವರೆ ಟನ್ ಗಾಂಜಾ ಸಂಗ್ರಹ ಬೇಧಿಸಿ, ನಾಲ್ವರ ದಸ್ತಗಿರಿಬೆಂಗಳೂರು, ಸೆ. 11, 2020 (ಕರಾವಳಿ ಟೈಮ್ಸ್) : ಡ್ರಗ್ ವಿರುದ್ಧ ಸಮರ ಸಾರಿರುವ ಬೆಂಗಳೂರು ನಗರ ಪೆÇಲೀಸರು ಬೃಹತ್ ಕಾರ್ಯಾಚರಣೆಯೊಂದರಲ್ಲಿ ಸುರಂಗದೊಳಗೆ ಅಡಗಿಸಿಟ್ಟಿದ್ದ 1 ಟನ್ 350 ಕೆ.ಜಿ. 300 ಗ್ರಾಂ ತೂಕದ ಗಾಂಜಾ ಸಂಹಗ್ರಹ ಜಪ್ತಿ ಮಾಡಿ, ನಾಲ್ಕು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ. 

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಕಮಲ್ ಪಂತ್, ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಗಾಯತ್ರಿನಗರ ನಿವಾಸಿ ಜ್ಞಾನಶೇಖರ್ (37), ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ನಿವಾಸಿ ಸಿದ್ದುನಾಥ ಲಾವಟೆ (22), ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಿವಾಸಿ ನಾಗನಾಥ (39), ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ನಿವಾಸಿ ಚಂದ್ರಕಾಂತ್ (34) ಎಂಬವರನ್ನು ಬಂಧಿಸಲಾಗಿದೆ ಎಂದಿದ್ದಾರೆ. 

ಆರೋಪಿಗಳ ಪೈಕಿ ಜ್ಞಾನಶೇಖರ್ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ. ಸಿದ್ದುನಾಥ ಲಾವಟೆ ಎಸ್ಸೆಸ್ಸೆಲ್ಸಿ ಕಲಿತಿದ್ದು, 30 ಎಕರೆಗೂ ಅಧಿಕ ಜಮೀನು ಹೊಂದಿದ್ದಾನೆ. ಈತ ಆಂಧ್ರ ಪ್ರದೇಶದಿಂದ ಗಾಂಜಾ ತರಿಸಿಕೊಂಡು ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ಕಡೆಯ ಗ್ರಾಹಕರಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ. ನಾಗನಾಥ್ ಎಸ್ಸೆಸ್ಸೆಲ್ಸಿ ಓದಿದ್ದು, ಬಟ್ಟೆ ಅಂಗಡಿ ಮತ್ತು ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ. ಲಾಕ್‍ಡೌನ್ ವೇಳೆ ನಷ್ಟ ಉಂಟಾಗಿದ್ದರಿಂದ ಡ್ರಗ್ಸ್ ಜಾಲದತ್ತ ಮುಖ ಮಾಡಿದ್ದ.  ಆಂಧ್ರಪ್ರದೇಶ, ತೆಲಂಗಾಣದಿಂದ ಗಾಂಜಾ ತರಿಸಿಕೊಂಡು ಮಾರಾಟ ಮಾಡುತ್ತಿದ್ದ. ಆರೋಪಿ ಚಂದ್ರಕಾಂತ್ 7ನೇ ತರಗತಿವರೆಗೆ ಕಲಿತಿದ್ದು, ಊರಲ್ಲಿ ವ್ಯವಸಾಯದ ಜೊತೆಗೆ ಕುರಿ ಸಾಕಾಣಿಕೆ ಕೂಡಾ ಮಾಡಿಕೊಂಡಿದ್ದ. ಈತ ಕಳೆದ ನಾಲ್ಕೈದು ವರ್ಷಗಳಿಂದ ಗಾಂಜಾ ವ್ಯವಹಾರ ಮಾಡುತ್ತಿದ್ದು, ಒಡಿಸ್ಸಾ ಮತ್ತು ಆಂಧ್ರ ಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ತರಿಸುತ್ತಿದ್ದ ಎಂದು ಪೆÇಲೀಸ್ ಆಯುಕ್ತರು ತಿಳಿಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಡ್ರಗ್ಸ್ ವಿರುದ್ದ ಸಮರ ಮುಂದುವರಿಸಿದ ಬೆಂಗಳೂರು ಪೊಲೀಸರು : ಸುರಂಗದೊಳಗಿದ್ದ ಒಂದೂವರೆ ಟನ್ ಗಾಂಜಾ ಸಂಗ್ರಹ ಬೇಧಿಸಿ, ನಾಲ್ವರ ದಸ್ತಗಿರಿ Rating: 5 Reviewed By: karavali Times
Scroll to Top