ಬಸವ ಕಲ್ಯಾಣ ಕ್ಷೇತ್ರ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಕೋವಿಡ್‍ಗೆ ಬಲಿ - Karavali Times ಬಸವ ಕಲ್ಯಾಣ ಕ್ಷೇತ್ರ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಕೋವಿಡ್‍ಗೆ ಬಲಿ - Karavali Times

728x90

24 September 2020

ಬಸವ ಕಲ್ಯಾಣ ಕ್ಷೇತ್ರ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಕೋವಿಡ್‍ಗೆ ಬಲಿಬೆಂಗಳೂರು, ಸೆ. 24, 2020 (ಕರಾವಳಿ ಟೈಮ್ಸ್) : ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ (67) ಕೋವಿಡ್ ವೈರಸ್ ಕಾರಣದಿಂದ ಗುರುವಾರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ಕೋವಿಡ್-19 ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಾರಾಯಣರಾವ್ ಅವರಿಗೆ ಆಗಸ್ಟ್ 31 ರಂದು ಸೋಂಕು ದೃಢಪಟ್ಟಿತ್ತು. ಆಪ್ತರ ಸಲಹೆಯ ಮೇರೆಗೆ ಸೆಪ್ಟೆಂಬರ್ 1 ರಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರು ಚೇರಿಸಿಕೊಂಡಿದ್ದರೂ ಕೆಲ ದಿನಗಳ ಹಿಂದೆ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನಲೆಯಲ್ಲಿ ಪುನಃ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಗುರುವಾರ ಅಪರಾಹ್ನ 3.55ಕ್ಕೆ ನಿಧನರಾದರು ಎಂದು ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಡಾ ಮನಿಷ್ ರೈ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ತೊಂದರೆ ಅನುಭವಿಸಿದ್ದರು. ಕಾಮಾಲೆ, ಅಧಿಕ ರಕ್ತದೊತ್ತಡದಿಂದ ಇನ್ನಷ್ಟು ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ನಾರಾಯಣರಾವ್ ಅವರು, ಮೈತ್ರಿ ಸರ್ಕಾರದ ವೇಳೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು.


  • Blogger Comments
  • Facebook Comments

0 comments:

Post a Comment

Item Reviewed: ಬಸವ ಕಲ್ಯಾಣ ಕ್ಷೇತ್ರ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಕೋವಿಡ್‍ಗೆ ಬಲಿ Rating: 5 Reviewed By: karavali Times
Scroll to Top