ಆಸ್ಟ್ರೇಲಿಯಾ ಹಿರಿಯ ಕ್ರಿಕೆಟಿಗ ಡೀನ್ ಜೋನ್ಸ್ ಮುಂಬೈಯಲ್ಲಿ ಹೃದಯಾಘಾತದಿಂದ ನಿಧನ - Karavali Times ಆಸ್ಟ್ರೇಲಿಯಾ ಹಿರಿಯ ಕ್ರಿಕೆಟಿಗ ಡೀನ್ ಜೋನ್ಸ್ ಮುಂಬೈಯಲ್ಲಿ ಹೃದಯಾಘಾತದಿಂದ ನಿಧನ - Karavali Times

728x90

24 September 2020

ಆಸ್ಟ್ರೇಲಿಯಾ ಹಿರಿಯ ಕ್ರಿಕೆಟಿಗ ಡೀನ್ ಜೋನ್ಸ್ ಮುಂಬೈಯಲ್ಲಿ ಹೃದಯಾಘಾತದಿಂದ ನಿಧನಮುಂಬೈ, ಸೆ. 24, 2020 (ಕರಾವಳಿ ಟೈಮ್ಸ್) : ಆಸ್ಟ್ರೇಲಿಯಾ ದೇಶದ ಹಿರಿಯ ಕ್ರಿಕೆಟ್ ಆಟಗಾರ ಡೀನ್ ಜೋನ್ಸ್ (59) ಅವರು ಗುರುವಾರ ಮುಂಬೈಯಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಕ್ರಿಕೆಟ್ ವಿಶ್ಲೇಷಕರಾಗಿ ಸ್ಟಾರ್ ಸ್ಫೋರ್ಟ್ ಕಾಮೆಂಟೇಟರಿ ತಂಡದಲ್ಲಿದ್ದ ಆಸೀಸ್ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಅವರು ಗುರುವಾರ ಮುಂಬೈಯ ಖಾಸಗಿ ಹೋಟೆಲ್‍ನಲ್ಲಿದ್ದಾಗಲೇ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕರಿಯಾಗದೆ ಮೃತಪಟ್ಟಿದ್ದಾರೆ. 

ಕ್ರಿಕೆಟ್ ವೀಕ್ಷಕ ವಿವರಣೆಕಾರರಾಗಿ ಕೆಲಸ ಮಾಡುತ್ತಿದ್ದ ಇವರು ಭಾರತದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪರ 52 ಟೆಸ್ಟ್, 164 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ 245 ಪ್ರಥಮ ದರ್ಜೆ ಪಂದ್ಯ, 285 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ.


  • Blogger Comments
  • Facebook Comments

0 comments:

Post a Comment

Item Reviewed: ಆಸ್ಟ್ರೇಲಿಯಾ ಹಿರಿಯ ಕ್ರಿಕೆಟಿಗ ಡೀನ್ ಜೋನ್ಸ್ ಮುಂಬೈಯಲ್ಲಿ ಹೃದಯಾಘಾತದಿಂದ ನಿಧನ Rating: 5 Reviewed By: karavali Times
Scroll to Top