ಅನ್‍ಲಾಕ್ 5.0 ಮಾರ್ಗಸೂಚಿ ಪ್ರಕಟಿಸಿ ಕೇಂದ್ರ ಸರಕಾರ : ಸಿನಿಮಾ ಥಿಯೇಟರ್, ಸ್ವಿಮ್ಮಿಂಗ್ ಫೂಲ್ ಆರಂಭಕ್ಕೆ ಅಸ್ತು - Karavali Times ಅನ್‍ಲಾಕ್ 5.0 ಮಾರ್ಗಸೂಚಿ ಪ್ರಕಟಿಸಿ ಕೇಂದ್ರ ಸರಕಾರ : ಸಿನಿಮಾ ಥಿಯೇಟರ್, ಸ್ವಿಮ್ಮಿಂಗ್ ಫೂಲ್ ಆರಂಭಕ್ಕೆ ಅಸ್ತು - Karavali Times

728x90

30 September 2020

ಅನ್‍ಲಾಕ್ 5.0 ಮಾರ್ಗಸೂಚಿ ಪ್ರಕಟಿಸಿ ಕೇಂದ್ರ ಸರಕಾರ : ಸಿನಿಮಾ ಥಿಯೇಟರ್, ಸ್ವಿಮ್ಮಿಂಗ್ ಫೂಲ್ ಆರಂಭಕ್ಕೆ ಅಸ್ತು



ಅಕ್ಟೋಬರ್ 15 ರಿಂದ ಶಾಲಾ-ಕಾಲೇಜು ಆರಂಭಕ್ಕೂ ಅವಕಾಶ


ನವದೆಹಲಿ, ಅಕ್ಟೋಬರ್ 01, 2020 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರ ಅನ್‍ಲಾಕ್-0.5 ಮಾರ್ಗಸೂಚಿಗಳನ್ನು ಬುಧವಾರ ಪ್ರಕಟಿಸಿದ್ದು, ಅಕ್ಟೋಬರ್ 15 ರಿಂದ ಚಿತ್ರ ಮಂದಿರಗಳು, ಮಲ್ಟಿಪ್ಲೆಕ್ಸ್‍ಗಳು, ಎಕ್ಸಿಬಿಷನ್ ಹಾಲ್‍ಗಳು ಮತ್ತು ಮನರಂಜನಾ ಪಾರ್ಕ್‍ಗಳು ಆಸನ ಸಾಮರ್ಥ್ಯದ ಶೇಕಡಾ 50 ರಷ್ಟನ್ನು ಮಾತ್ರ ಭರ್ತಿ ಮಾಡಿಕೊಂಡು ಪುನರ್ ಕಾರ್ಯಾರಂಭ ಮಾಡಲು ಗ್ರೀನ್ ಸಿಗ್ನಲ್ ನೀಡಲಾಗಿದೆ. 


    ಅನ್‍ಲಾಕ್  5 ರ ಮಾರ್ಗಸೂಚಿಗಳ ಅನುಸಾರ ಅಕ್ಟೋಬರ್ 15 ರಿಂದ ಶಾಲೆ, ಕಾಲೇಜುಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಹೇಳಿದೆ. ಆದರೆ ಅಂತಿಮ ನಿರ್ಧಾರವನ್ನು ಆಯಾ ರಾಜ್ಯಗಳು ಮತ್ತು ಆಯಾ ಸಂಸ್ಥೆಗಳಿಗೆ ನೀಡಲಾಗಿದೆ. ಮಾರ್ಗಸೂಚಿಗಳ ಪ್ರಕಾರ, ಕ್ರೀಡಾಪಟುಗಳ ತರಬೇತಿಗಾಗಿ ಬಳಸಲಾಗುವ ಈಜು ಕೊಳಗಳನ್ನು ತೆರೆಯಲು ಅನುಮತಿ ನೀಡಲಾಗುವುದು, ಇದಕ್ಕಾಗಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಹೊರಡಿಸುತ್ತದೆ ಎಂದು ಹೇಳಲಾಗಿದೆ.









  • Blogger Comments
  • Facebook Comments

0 comments:

Post a Comment

Item Reviewed: ಅನ್‍ಲಾಕ್ 5.0 ಮಾರ್ಗಸೂಚಿ ಪ್ರಕಟಿಸಿ ಕೇಂದ್ರ ಸರಕಾರ : ಸಿನಿಮಾ ಥಿಯೇಟರ್, ಸ್ವಿಮ್ಮಿಂಗ್ ಫೂಲ್ ಆರಂಭಕ್ಕೆ ಅಸ್ತು Rating: 5 Reviewed By: karavali Times
Scroll to Top