ಬಾಬರಿ ಮಸೀದಿ ಜಾದೂ ಮೂಲಕ ಧ್ವಂಸಗೊಳಿಸಲಾಗಿದೆಯೇ : ಸಂಸದ ಅಸಾದುದ್ದೀನ್ ಒವೈಸಿ ಅಸಮಾಧಾನ - Karavali Times ಬಾಬರಿ ಮಸೀದಿ ಜಾದೂ ಮೂಲಕ ಧ್ವಂಸಗೊಳಿಸಲಾಗಿದೆಯೇ : ಸಂಸದ ಅಸಾದುದ್ದೀನ್ ಒವೈಸಿ ಅಸಮಾಧಾನ - Karavali Times

728x90

30 September 2020

ಬಾಬರಿ ಮಸೀದಿ ಜಾದೂ ಮೂಲಕ ಧ್ವಂಸಗೊಳಿಸಲಾಗಿದೆಯೇ : ಸಂಸದ ಅಸಾದುದ್ದೀನ್ ಒವೈಸಿ ಅಸಮಾಧಾನ

 


ಸೆ. 30 ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರಾಳ ದಿನ


ಹೈದರಾಬಾದ್, ಅಕ್ಟೋಬರ್ 01, 2020 (ಕರಾವಳಿ ಟೈಮ್ಸ್) : ಬಾಬರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ 32 ಆರೋಪಿಗಳನ್ನು ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಂಸದ, ಎಐಎಂಐ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಸೀದಿಯನ್ನು ಜಾದೂ ಮೂಲಕ ನೆಲಸಮಗೊಳಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.


    ಸಿಬಿಐ ವಿಶೇಷ ನ್ಯಾಯಾಲಯ 28 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಇಂದು ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟಿಸಿದ್ದು, 32 ಆರೋಪಿಗಳನ್ನು ಖುಲಾಸೆಗೊಳಿಸಿದೆ.   ಕೋರ್ಟ್ ತೀರ್ಪಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಓವೈಸಿ, ಸೆ. 30 ಭಾರತ ನ್ಯಾಯಾಂಗ ವ್ಯವಸ್ಥೆಯಲ್ಲಿನ ಕರಾಳ ದಿನ ಬಣ್ಣಿಸಿದ್ದಾರೆ. 


    ಸುಪ್ರೀಂ ಕೋರ್ಟ್ ಬಾಬರಿ ಮಸೀದಿ ಧ್ವಂಸಗೊಳಿಸಿದ್ದು ತಪ್ಪು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ಬುಧವಾರದ ತೀರ್ಪು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಕರಾಳ ದಿನವಾಗಿ ದಾಖಲಾಗಿದೆ. ಹಾಗಾದರೆ ಮಸೀದಿ ಧ್ವಂಸಗೊಳಿಸಿದ್ದು ಯಾರು? ಜಾದೂ ಮೂಲಕ ಮಸೀದಿ ಧ್ವಂಸಗೊಳಿಸಲಾಗಿದೆಯೇ? ಎಂದವರು ಪ್ರಶ್ನಿಸಿದ್ದಾರೆ.


    ಮಸೀದಿಯಲ್ಲಿ ಮೂರ್ತಿ ತಂದಿಟ್ಟಿದ್ಯಾರು? ಬೀಗ ಮುರಿದಿದ್ದು ಹೇಗೆ? ಮಸೀದಿ ಕೆಡವಿದ್ದು ಹೇಗೆ ಎಂದು ಪ್ರಶ್ನೆ ಮಾಡಿರುವ ಓವೈಸಿ ಈ ಎಲ್ಲವನ್ನು ಜಾದೂವಿನ ಮೂಲಕ ಮಾಡಲಾಯಿತಾ? ದೇಶದ ಇತಿಹಾಸದಲ್ಲಿ ಸೆಪ್ಟೆಂಬರ್ 30 ಕರಾಳ ದಿನವಾಗಿ ಉಳಿಯಲಿದೆ. ಎಲ್.ಕೆ. ಅಡ್ವಾಣಿಯವರ ರಥಯಾತ್ರೆ ವೇಳೆ ರಕ್ತದ ಹೊಳೆಯೇ ಹರಿದಿತ್ತು. ಎಲ್ಲ ಘಟನೆಗಳು ಪೂರ್ವಯೋಜಿತವಾಗಿದ್ದರೂ ಬುಧವಾರ ಎಲ್ಲವೂ ದಿಢೀರ್ ಬದಲಾಗಿದೆ ಎಂದು ಓವೈಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಾಬರಿ ಮಸೀದಿ ಜಾದೂ ಮೂಲಕ ಧ್ವಂಸಗೊಳಿಸಲಾಗಿದೆಯೇ : ಸಂಸದ ಅಸಾದುದ್ದೀನ್ ಒವೈಸಿ ಅಸಮಾಧಾನ Rating: 5 Reviewed By: karavali Times
Scroll to Top