ಅ. 10 ರಂದು ಬಂಟ್ವಾಳ ಲಯನ್ಸ್ ಸೇವ ಮಂದಿರದಲ್ಲಿ ಯೇನಪೋಯ ಆಯುರ್ವೇದಿಕ್ ತಜ್ಞರಿಂದ ಆರೋಗ್ಯ ತಪಾಸಣಾ ಶಿಬಿರ - Karavali Times ಅ. 10 ರಂದು ಬಂಟ್ವಾಳ ಲಯನ್ಸ್ ಸೇವ ಮಂದಿರದಲ್ಲಿ ಯೇನಪೋಯ ಆಯುರ್ವೇದಿಕ್ ತಜ್ಞರಿಂದ ಆರೋಗ್ಯ ತಪಾಸಣಾ ಶಿಬಿರ - Karavali Times

728x90

6 October 2020

ಅ. 10 ರಂದು ಬಂಟ್ವಾಳ ಲಯನ್ಸ್ ಸೇವ ಮಂದಿರದಲ್ಲಿ ಯೇನಪೋಯ ಆಯುರ್ವೇದಿಕ್ ತಜ್ಞರಿಂದ ಆರೋಗ್ಯ ತಪಾಸಣಾ ಶಿಬಿರ
ಬಂಟ್ವಾಳ, ಅ. 07, 2020 (ಕರಾವಳಿ ಟೈಮ್ಸ್) : ಲಯನ್ಸ್ ಕ್ಲಬ್ ಬಂಟ್ವಾಳ ಹಾಗೂ ದೇರಳಕಟ್ಟೆ ಯೇನಪೆÇೀಯ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ಇವುಗಳ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 10ರಂದು ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರತನಕ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಉಚಿತ ಆಯುರ್ವೇದಿಕ್ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಕೃಷ್ಣಶ್ಯಾಂ ತಿಳಿಸಿದರು.


    ಬಿ ಸಿ ರೋಡಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಲಯನ್ಸ್ ಜಿಲ್ಲಾ ರಾಜ್ಯಪಾಲ ಲಯನ್ ಡಾ. ಗೀತ್‍ಪ್ರಕಾಶ್ ಶಿಬಿರ ಉದ್ಘಾಟಿಸುವರು. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಕೃಷ್ಣಶ್ಯಾಮ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಲಯನ್ಸ್ ಪ್ರಥಮ ಜಿಲ್ಲಾ ಉಪರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ, ಯೇನಪೆÇೀಯ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ್ ಎಚ್. ಭಾಗವಹಿಸಲಿದ್ದಾರೆ ಎಂದರು. 


    ಯೇನಪೆÇೀಯ ಆಸ್ಪತ್ರೆ ದೇರಳಕಟ್ಟೆ ಇದರ ಶಿಬಿರ ಸಂಚಾಲಕ ರಝಾಕ್ ಮಾತನಾಡಿ ಬಿ.ಸಿ.ರೋಡಿನಲ್ಲಿ ಪ್ರಪ್ರಥಮ ಬಾರಿಗೆ ಯೇನಪೆÇೀಯ ಆಯುರ್ವೇದಿಕ್ ಕಾಲೇಜಿನ ಆಯುರ್ವೇದಿಕ್ ನುರಿತ ತಜ್ಞರಿಂದ ಉಚಿತ ಶಿಬಿರ ನಡೆಯಲಿರುವುದರಿಂದ ತಪಾಸಣೆಯಾದ ಶಿಬಿರಾರ್ಥಿಗಳಿಗೆ ಉಚಿತ ಔಷಧಿ ವಿತರಿಸಲಾಗುವುದು. ಇದೇ ವೇಳೆ ನವದೆಹಲಿಯ ಆಯುಷ್ ಮಂತ್ರಾಲಯದಿಂದ ನಿರ್ದೇಶಿಸಲ್ಪಟ್ಟ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಆಯುಷ್ ಕ್ವಾಥ ಚೂರ್ಣವನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದರು. 


    ಇದೇ ವೇಳೆ ಮಾತನಾಡಿದ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಜಯಂತ್ ಶೆಟ್ಟಿ, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಂತ್ಯಾದ್ಯಕ್ಷ ಲಯನ್ ಸಂಜೀವ ಶೆಟ್ಟಿಯವರ ನೇತೃತ್ವದಲ್ಲಿ ಸಮಾಜಕ್ಕೆ ಅತೀ ಅವಶ್ಯಕವಾಗುವ ಶೈತ್ಯಾಗಾರವನ್ನು ಲಯನ್ಸ್ ಕ್ಲಬ್ ವತಿಯಿಂದ ನವೆಂಬರ್‍ನಲ್ಲಿ ಹಸ್ತಾಂತರಿಸಲಾಗುವುದು. ಬಂಟ್ವಾಳ ಲಯನ್ಸ್ ಕ್ಲಬ್ ವತಿಯಿಂದ ಪ್ರತೀ ಸೋಮವಾರ ಮತ್ತು ಬುಧವಾರ ಲಯನ್ಸ್ ನಿರ್ಮಲ ಹೃದಯ ಫಿಸಿಯೋಧೆರಿ ಕೇಂದ್ರ, ಪ್ರತೀ ಬುಧವಾರ ಲಯನ್ಸ್ ನಿರ್ಮಲ ಹೃದಯ ವಾಕ್ ಮತ್ತು ಶ್ರವಣ ಚಿಕಿತ್ಸಾ ಕೇಂದ್ರ, ಪ್ರತೀ ಸೋಮವಾರದಿಂದ ಶನಿವಾರ (ಎರಡನೇ ಶನಿವಾರ ಹೊರತು ಪಡಿಸಿ) ಲಯನ್ಸ್ ವಿಶೇಷ ಮಕ್ಕಳ ಶಾಲೆ, ತಿಂಗಳ ಪ್ರಥಮ ಆದಿತ್ಯವಾರ ಲಯನ್ಸ್ ಮಾನಸಿಕ ರೋಗಿಗಳ ತಪಾಸಣೆ, ತಿಂಗಳ ಎರಡನೇ ಮಂಗಳವಾರ ಲಯನ್ಸ್ ಮಹಿಳಾ ಸಬಲೀಕರಣ ಕಾರ್ಯಾಗಾರ, ಪ್ರತೀ ಸೋಮವಾರದಿಂದ ಶುಕ್ರವಾರ ಮಧ್ಯಾಹ್ನ ನಂತರ ಲಯನ್ಸ್ ಮಹಿಳಾ ಹೊಲಿಗೆ ಮತ್ತು ಫ್ಯಾಶನ್ ಡಿಸೈನ್ ತರಬೇತಿ ಕೇಂದ್ರ, ಪ್ರತೀ ಗುರುವಾರ ಬೆಳಿಗ್ಗೆ ಸ್ವಚ್ಛ ಭಾರತ-ಸ್ವಚ್ಛ ಬಂಟ್ವಾಳ, ಸಾರ್ವಜನಿಕ ಉಪಯೋಗಕ್ಕಾಗಿ ಲಯನ್ಸ್ ಪಾರ್ಕ್ ಮತ್ತು ಲಯನ್ಸ್ ಅವೆನ್ಯೂ, ವೈದ್ಯಕೀಯ ಶಿಬಿರಗಳು, ಕಣ್ಣು ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರಗಳು, ಮಧುಮೇಹ ಮತ್ತು ಹೃದಯ ತಪಾಸಣೆ ಶಿಬಿರ, ಕಾನೂನು ಮಾಹಿತಿ ಕಾರ್ಯಾಗಾರ, ಸ್ವ ಉದ್ಯೋಗ ತರಬೇತಿ, ಯುವ ಸಬಲೀಕರಣ, ಹಸಿವು ನಿರ್ಮೂಲನೆ ಶಾಶ್ವತ ಯೋಜನೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ವಿವರಿಸಿದರು. 


    ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಲಯನ್ಸ್ ಕ್ಲಬ್ ನಿರ್ದೇಶಕ ಲಕ್ಷ್ಮಣ ಕುಲಾಲ್, ಕಾರ್ಯದರ್ಶಿ ವೈಕುಂಠ ಕುಡ್ವಾ, ಕೋಶಾಧಿಕಾರಿ ದಿಶಾ ಆಶೀರ್ವಾದ್ ಉಪಸ್ಥಿತರಿದ್ದರು.  • Blogger Comments
  • Facebook Comments

0 comments:

Post a Comment

Item Reviewed: ಅ. 10 ರಂದು ಬಂಟ್ವಾಳ ಲಯನ್ಸ್ ಸೇವ ಮಂದಿರದಲ್ಲಿ ಯೇನಪೋಯ ಆಯುರ್ವೇದಿಕ್ ತಜ್ಞರಿಂದ ಆರೋಗ್ಯ ತಪಾಸಣಾ ಶಿಬಿರ Rating: 5 Reviewed By: karavali Times
Scroll to Top