ಫಗ್ರ್ಯೂಸನ್ ಅದ್ಭುತ ದಾಳಿಗೆ ಕಂಗೆಟ್ಟ ಹೈದರಾಬಾದ್ : ಟೈ ಪಂದ್ಯದ ಬಳಿಕ ಸೂಪರ್ ಓವರಿನಲ್ಲಿ ಗೆದ್ದು ಬೀಗಿದ ಕೆಕೆಆರ್ - Karavali Times ಫಗ್ರ್ಯೂಸನ್ ಅದ್ಭುತ ದಾಳಿಗೆ ಕಂಗೆಟ್ಟ ಹೈದರಾಬಾದ್ : ಟೈ ಪಂದ್ಯದ ಬಳಿಕ ಸೂಪರ್ ಓವರಿನಲ್ಲಿ ಗೆದ್ದು ಬೀಗಿದ ಕೆಕೆಆರ್ - Karavali Times

728x90

18 October 2020

ಫಗ್ರ್ಯೂಸನ್ ಅದ್ಭುತ ದಾಳಿಗೆ ಕಂಗೆಟ್ಟ ಹೈದರಾಬಾದ್ : ಟೈ ಪಂದ್ಯದ ಬಳಿಕ ಸೂಪರ್ ಓವರಿನಲ್ಲಿ ಗೆದ್ದು ಬೀಗಿದ ಕೆಕೆಆರ್

 



ಸೂಪರ್ ಓವರ್ ಸಹಿತ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ ಲಾಕಿ  ಫಗ್ರ್ಯೂಸನ್


ಅಬುಧಾಬಿ, ಅ. 19, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯ ಟೈ ಆಗಿದ್ದು, ಸೂಪರ್ ಓವರ್‍ನಲ್ಲಿ ಕೋಲ್ಕತ್ತಾ ತಂಡ ಜಯಭೇರಿ ಭಾರಿಸಿತು. 


    ಕೊನೆಯ ಓವರಿನಲ್ಲಿ ಹೈದರಾಬಾದ್ ಗೆಲ್ಲಲ್ಲು 17 ರನ್‍ಗಳ ಅವಶ್ಯಕತೆಯಿತ್ತು. ಆಂಡ್ರೆ ರಸ್ಸೆಲ್ ಅವರು ಮೊದಲ ಎಸೆತವನ್ನು ನೋಬಾಲ್ ಎಸೆದರು. ನಂತರ ಫ್ರೀ ಹಿಟ್ ಎದುರಿಸಿದ ರಶೀದ್ ಖಾನ್ ಅವರು ಒಂಟಿ ರನ್ ಓಡಿದರು. ನಂತರ ಸ್ಟ್ರೈಕರ್ ಕಡೆ ಬಂದ ವಾರ್ನರ್ ಅವರು, 2, 3 ಹಾಗೂ 4ನೇ ಎಸೆತಗಳನ್ನು ಬೌಂಡರಿಗಟ್ಟಿದರು. ಈ ಸಂದರ್ಭ 2 ಎಸತೆಗಳಲ್ಲಿ 4 ರನ್‍ಗಳ ಅವಶ್ಯಕತೆ ಇತ್ತು. 5ನೇ ಎಸೆತದಲ್ಲಿ ಎರಡು ರನ್ ಬಂತು. 6ನೇ ಎಸೆತದಲ್ಲಿ ಕೇವಲ ಒಂದು ರನ್ ಬಂದು ಪಂದ್ಯ ಸಮಬಲದಲ್ಲಿ ಮುಕ್ತಾಯ ಕಂಡಿತು. 


    ಕೋಲ್ಕತ್ತಾದ ಪರ ಸೂಪರ್ ಓವರ್ ಎಸೆದ ಫರ್ಗುಸನ್ ಅವರ ಮೊದಲÉಸೆತದಲ್ಲೇ ನಾಯಕ ಡೇವಿಡ್ ವಾರ್ನರ್ ಔಟ್ ಆದರು. ನಂತರದ ಎಸೆತದಲ್ಲಿ 2 ರನ್ ತೆಗೆದ ಸಮದ್ ಅವರು ಬಳಿಕದ ಎಸೆತದಲ್ಲಿ ಲಾಕಿ ಫರ್ಗುಸನ್ ಅವರಿಗೆ ಬೌಲ್ಡ್ ಆದರು. ಈ ಮೂಲಕ ಹೈದರಾಬಾದ್ ತಂಡ ಆಲೌಟ್ ಆಗಿ ಕೊಲ್ಕತಾಗೆ ಕೇವಲ 2 ರನ್‍ಗಳ ಟಾರ್ಗೆಟ್ ನಿಗದಿಪಡಿಸಿತು. ಸÀುಲಭ ಗುರಿ ಬೆನ್ನಟ್ಟಿದ ಕೆಕೆಆರ್ ದಾಂಡಿಗರಾದ ಇಯೊನ್ ಮೋರ್ಗಾನ್ ಮತ್ತು ದಿನೇಶ್ ಕಾರ್ತಿಕ್ ಅವರು ಎರಡು ಎಸೆತಗಳು ಉಳಿದಿರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.


    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ದಿನೇಶ್ ಕಾರ್ತಿಕ್ ಮತ್ತು ಇಯೋನ್ ಮೋರ್ಗನ್ ಅವರ ಉಪಯುಕ್ತ ಆಟದಿಂದ ನಿಗದಿತ 20 ಓವರಿನಲ್ಲಿ 163 ರನ್ ಪೇರಿಸಿತು. ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡರು ಕೊನೆಯಲ್ಲಿ ಡೇವಿಡ್ ವಾರ್ನರ್ ಅವರು ಅದ್ಭುತ ಆಟವಾಡಿದರು. ಹೀಗಾಗಿ ಪಂದ್ಯ ಟೈ ಆಯ್ತು. ಸೂಪರ್ ಓವರಿನಲ್ಲಿ ಜಯ ಕೋಲ್ಕತ್ತಾ ಪಾಲಾಯ್ತು.


    ಕೋಲ್ಕತ್ತಾ ಪರ ಸೂಪರ್ ಓವರ್ ದಾಳಿಗಾರಿಕೆ ನಡೆಸಿದ ಫರ್ಗುಸನ್ 3 ಎಸೆತದಲ್ಲಿ 2 ವಿಕೆಟ್ ಕಿತ್ತು ಕೇವಲ 2 ರನ್ ನೀಡಿದರು. ಜೊತೆಗೆ ಪಂದ್ಯದಲ್ಲಿ ತಮ್ಮ ಕೋಟದ 4 ಓವರ್ ದಾಳಿಗಾರಿಕೆ ನಡೆಸಿದ ಫರ್ಗುಸನ್ 15 ರನ್ ನೀಡಿ 3 ವಿಕೆಟ್ ಪಡೆದು ಉತ್ತಮ ಪ್ರದರ್ಶನ ತೋರಿದ್ದರು. ಈ ಮೂಲಕ ಫಗ್ರ್ಯುಸನ್ ಅವರು ಒಟ್ಟು 5 ವಿಕೆಟ್ ಪಡೆದು ಕೋಲ್ಕತ್ತಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.


    ಕೋಲ್ಕತ್ತಾ ನೀಡಿದ ಸಾಧಾರಣ ಮೊತ್ತ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಭರ್ಜರಿ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಜಾನಿ ಬೈರ್ಸ್ಟೋವ್ ಹಾಗೂ ಕೇನ್ ವಿಲಿಯಮ್ಸನ್ ಉತ್ತಮ ಬ್ಯಾಟಿಂಗ್ ನಡೆಸಿದ್ದು, ಕೇವಲ 32 ಎಸೆತದಲ್ಲೇ ಮೊದಲನೇ ವಿಕೆಟ್‍ಗೆ ಈ ಜೋಡಿ ಅರ್ಧಶತಕದ ಜೊತೆಯಾಟವಾಡಿತು. ಜೊತೆಗೆ ಪವರ್ ಪ್ಲೇ ಮುಕ್ತಾಯದ ವೇಳಗೆ ವಿಕೆಟ್ ನಷ್ಟವಿಲ್ಲದೆ 57 ರನ್ ಸಿಡಿಸಿತ್ತು. ಈ ವೇಳೆ ದಾಳಿಗಿಳಿದ ಲಾಕಿ ಫರ್ಗುಸನ್ ಅವರು ಕೇನ್ ವಿಲಿಯಮ್ಸನ್ (29 ರನ್, 19 ಎಸೆತ) ಅವರ ವಿಕೆಟ್ ಉರುಳಿಸಿದರು. ಬಳಿಕ ಬಂದ ಪ್ರಿಯಮ್ ಗಾರ್ಗ್ ಅವರು 4 ರನ್ ಗಳಿಸಿ ಫರ್ಗುಸನ್ ಅವರಿಗೆ ಮತ್ತೊಂದು ಬಲಿಯಾದರು. ಬಳಿಕ ಜಾನಿ ಬೈರ್ಸ್ಟೋವ್ (36 ರನ್, 28 ಎಸೆತ) ವರುಣ್ ಚಕ್ರವರ್ತಿ ಅವರ ಸ್ಪಿನ್ ಮೋಡಿಗೆ ಬಲಿಯಾದರು. ಬಳಿಕ ಬಂದ  ಮನೀಶ್ ಪಾಂಡೆ ಫರ್ಗುಸನ್‍ಗೆ ಕ್ಲೀನ್ ಬೌಲ್ಡ್ ಆದರು. ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ಉತ್ತಮ ಆರಂಭ ಕಂಡರು ದೊಡ್ಡ ಮೊತ್ತದ ಗುರಿ ನೀಡುವಲ್ಲಿ ವಿಫಲವಾಗಿತ್ತು. 164 ರನ್ ಮಾತ್ರ ಗಳಿಸುವಲ್ಲಿ ಸಫಲವಾಗಿತ್ತು. ಪಾತ್ರವಹಿಸಿದ್ದರು.


    ಇದೇ ವೇಳೆ ಇಂದಿನ ಪಂದ್ಯದಲ್ಲಿ ವಿದೇಶಿ ಆಟಗಾರನಾಗಿ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಅವರು ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಪಿಎಲ್‍ನಲ್ಲಿ ಐದು ಸಾವಿರ ರನ್ ಪೂರ್ಣಗೊಳಿಸಿದ ಮೊದಲ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. 135 ಪಂದ್ಯಗಳಲ್ಲಿ ವಾರ್ನರ್ ಅವರು ಈ ಸಾಧನೆ ಮಾಡಿದ್ದಾರೆ. ಬಳಿಕದ ಸ್ಥಾನದಲ್ಲಿ 4,680 ರನ್ ಗಳಿಸಿದ ಎಬಿ ವಿಲಿಯರ್ಸ್ ಇದ್ದಾರೆ.







  • Blogger Comments
  • Facebook Comments

0 comments:

Post a Comment

Item Reviewed: ಫಗ್ರ್ಯೂಸನ್ ಅದ್ಭುತ ದಾಳಿಗೆ ಕಂಗೆಟ್ಟ ಹೈದರಾಬಾದ್ : ಟೈ ಪಂದ್ಯದ ಬಳಿಕ ಸೂಪರ್ ಓವರಿನಲ್ಲಿ ಗೆದ್ದು ಬೀಗಿದ ಕೆಕೆಆರ್ Rating: 5 Reviewed By: karavali Times
Scroll to Top