ಬಂಟ್ವಾಳ ತಾಲೂಕಿನಾದ್ಯಂತ ಭಾರೀ ಮಳೆ : ಕಾರಿಂಜ ದೇವಸ್ಥಾನದ ತಡೆಗೋಡೆ ಕುಸಿತ - Karavali Times ಬಂಟ್ವಾಳ ತಾಲೂಕಿನಾದ್ಯಂತ ಭಾರೀ ಮಳೆ : ಕಾರಿಂಜ ದೇವಸ್ಥಾನದ ತಡೆಗೋಡೆ ಕುಸಿತ - Karavali Times

728x90

14 October 2020

ಬಂಟ್ವಾಳ ತಾಲೂಕಿನಾದ್ಯಂತ ಭಾರೀ ಮಳೆ : ಕಾರಿಂಜ ದೇವಸ್ಥಾನದ ತಡೆಗೋಡೆ ಕುಸಿತಬಂಟ್ವಾಳ, ಅಕ್ಟೋಬರ್ 14, 2020 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ಕಾರಣಿಕ ಕ್ಷೇತ್ರ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆ ಬುಧವಾರ ಬೆಳಿಗ್ಗೆ ಕುಸಿದಿದೆ. 

ದೇವಸ್ಥಾನದ ಎಡ ಪಾರ್ಶ್ವದ ಬದಿಗೆ ಕಟ್ಟಿದ್ದ ಕಲ್ಲಿನ ತಡೆಗೋಡೆ ಕುಸಿದು ಬಿದ್ದಿದ್ದು, ಬುಧವಾರ ಬೆಳಗ್ಗೆ ಸಿಬ್ಬಂದಿ ಗಮನಕ್ಕೆ ಬಂದಿದೆ. ತಡಗೋಡೆ ಕುಸಿತದಿಂದಾಗಿ ದೇವಸ್ಥಾನದ ಅಂಗಳದ ಇಂಟರ್‍ಲಾಕ್ ಕಿತ್ತು ಹೋಗಿ ಹಾನಿ ಸಂಭವಿಸಿದೆ.

ಕೋವಿಡ್ ಶಿಷ್ಟಾಚಾರದ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ಆಗಮನಕ್ಕೆ ನಿಯಂತ್ರಣ ಹೇರಲಾಗಿದೆ. ಈ ಕಾರಣದಿಂದಾಗಿ ನಿಯಮ ಪಾಲನೆಗಳೊಂದಿಗೆ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ನೆರವೇರುತ್ತಿದೆ. ನಷ್ಟದ ಅಂದಾಜು ನಡೆಸಿ ಪುನರ್ ನಿರ್ಮಾಣ ಕಾಮಗಾರಿ ನಡೆಸಲಾಗುತ್ತದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ನೋಣಯ್ಯ ನಾಯ್ಕ್ ತಿಳಿಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ತಾಲೂಕಿನಾದ್ಯಂತ ಭಾರೀ ಮಳೆ : ಕಾರಿಂಜ ದೇವಸ್ಥಾನದ ತಡೆಗೋಡೆ ಕುಸಿತ Rating: 5 Reviewed By: karavali Times
Scroll to Top