ಒಂದೇ ಮನೆಯ ಸದಸ್ಯರಲ್ಲಿ ಭಿನ್ನತೆ ಮೂಡಿಸುವುದು ಸರಿಯಲ್ಲ : ಉಪಾಧ್ಯಕ್ಷೆ ಜೆಸಿಂತಾ - Karavali Times ಒಂದೇ ಮನೆಯ ಸದಸ್ಯರಲ್ಲಿ ಭಿನ್ನತೆ ಮೂಡಿಸುವುದು ಸರಿಯಲ್ಲ : ಉಪಾಧ್ಯಕ್ಷೆ ಜೆಸಿಂತಾ - Karavali Times

728x90

18 November 2020

ಒಂದೇ ಮನೆಯ ಸದಸ್ಯರಲ್ಲಿ ಭಿನ್ನತೆ ಮೂಡಿಸುವುದು ಸರಿಯಲ್ಲ : ಉಪಾಧ್ಯಕ್ಷೆ ಜೆಸಿಂತಾಬಂಟ್ವಾಳ, ನ. 18, 2020 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭಾಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಗೈರು ಹಾಜರಿಯಾದ ಬಗ್ಗೆ ನೂತನ ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜಾ ಅವರೂ ಕೂಡಾ ತಮ್ಮ ಮನಸ್ಸಿನ ನೋವನ್ನು ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ. 

ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಹಾಗೂ ಸರಕಾರದಿಂದ ನೇಮಕಗೊಂಡ ಅಧಿಕಾರಿ-ಸಿಬ್ಬಂದಿ ವರ್ಗ ಎಲ್ಲವೂ ಸೇರಿ ಈ ಪುರಸಭಾ ಕಛೇರಿ ಒಂದು ಮನೆಯಿದ್ದಂತೆ. ಒಂದೇ ಮನೆಯ ಸದಸ್ಯರ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಕಛೇರಿಯ ಒಳಗಡೆ ಅದನ್ನು ಬಗೆಹರಿಸಿಕೊಳ್ಳಬಹುದು. ಅದು ಬಿಟ್ಟು ಬಹಿರಂಗವಾಗಿ ಭಿನ್ನಾಭಿಪ್ರಾಯ ತೋರುವುದು ಸರಿಯಲ್ಲ ಎಂದ ಉಪಾಧ್ಯಕ್ಷೆ ಜೆಸಿಂತಾ ಅವರು ಮುಖ್ಯಾಧಿಕಾರಿಗೂ ನಮಗೂ ಯಾವುದೇ ರೀತಿಯ ಹೊಂದಾಣಿಕೆ ಕೊರೆತೆಯಿಲ್ಲ. ಅಧಿಕಾರ ಇಲ್ಲದಿದ್ದರೂ ನಾವು ವಾರ್ಡಿನ ಅಭಿವೃದ್ದಿ ಬಗ್ಗೆ ಜನರ ಸಮಸ್ಯೆಗಳ ಬಗ್ಗೆ ಮುಖ್ಯಾಧಿಕಾರಿ ಜೊತೆ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಆದರೆ ಯಾವ ಕಾರಣಕ್ಕೆ ಮುಖ್ಯಾಧಿಕಾರಿಗಳು ಈ ರೀತಿಯ ನಿಷ್ಠುರತೆಗೆ ಮುಂದಾಗಿದ್ದಾರೆ ಎಂದು ಗೊತ್ತಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಒಂದೇ ಮನೆಯ ಸದಸ್ಯರಲ್ಲಿ ಭಿನ್ನತೆ ಮೂಡಿಸುವುದು ಸರಿಯಲ್ಲ : ಉಪಾಧ್ಯಕ್ಷೆ ಜೆಸಿಂತಾ Rating: 5 Reviewed By: karavali Times
Scroll to Top