ಬಾಲಿವುಡ್ ನಟ ಆಸಿಫ್ ಬಾಸ್ರಾ ಮೃತದೇಹ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಶಂಕಾಸ್ಪದವಾಗಿ ಪತ್ತೆ - Karavali Times ಬಾಲಿವುಡ್ ನಟ ಆಸಿಫ್ ಬಾಸ್ರಾ ಮೃತದೇಹ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಶಂಕಾಸ್ಪದವಾಗಿ ಪತ್ತೆ - Karavali Times

728x90

12 November 2020

ಬಾಲಿವುಡ್ ನಟ ಆಸಿಫ್ ಬಾಸ್ರಾ ಮೃತದೇಹ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಶಂಕಾಸ್ಪದವಾಗಿ ಪತ್ತೆಶಿಮ್ಲಾ, ನ. 12, 2020 (ಕರಾವಳಿ ಟೈಮ್ಸ್) : ಬಾಲಿವುಡ್ ಖ್ಯಾತ ನಟ ಆಸೀಫ್ ಬಾಸ್ರಾ (53) ಹಿಮಾಚಲ ಪ್ರದೇಶದ ಶಿಮ್ಲಾದ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಸಂಶಯಕ್ಕೆ ಕಾರಣವಾಗಿದೆ. 

ಆಸೀಫ್ ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಪಾಟಾಲ್ ಲೋಕ್’ ಎಂಬ ವೆಬ್ ಸರಣಿಯಲ್ಲಿ ಅಭಿನಯಿಸಿದ್ದರು. ಇವರು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾ ಕೆಫೆ ಬಳಿ ಖಾಸಗಿ ಅತಿಥಿ ಗೃಹವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರಾಥಮಿಕ ವರದಿಯಲ್ಲಿ ಆತ್ಮಹತ್ಯೆ ಎಂದು ಹೇಳಲಾಗಿದ್ದರೂ, ಸಾವಿನ ಬಗ್ಗೆ ಸಂಶಯಪಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಮತ್ತು ಪೆÇಲೀಸರು ಬಂದಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‍ಪಿ ಕಾಂಗ್ರಾ ವಿಮುಕ್ತ್ ರಂಜನ್ ತಿಳಿಸಿದ್ದಾರೆ. 

ಆಸೀಫ್ ಬಾಸ್ರಾ ಅವರು ಇತ್ತೀಚೆಗೆ ಬಿಡುಗಡೆಯಾದ ಪಾತಾಳ್ ಲೋಕ್, 1993ರ ಮುಂಬೈ ಬ್ಲಾಸ್ಟ್, ಬ್ಲ್ಯಾಕ್ ಫ್ರೈಡೇ, ಜಬ್ ವಿ ಮೆಟ್, ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ, ಕ್ರಿಶ್ 3, ಏಕ್ ವಿಲನ್ ಮತ್ತು 2002 ರಲ್ಲಿ ನಡೆದ ಗುಜರಾತ್ ಗಲಭೆ ಕುರಿತು 2005ರಲ್ಲಿ ತೆರೆಕಂಡ ಪಾರ್ಜಾನಿಯಾ ಸಿನಿಮಾದಲ್ಲೂ ನಟಿಸಿದ್ದರು. ಆಸೀಫ್ ಮೂಲತಃ ರಂಗಭೂಮಿ ಕಲಾವಿದರಾಗಿದ್ದು, ವಿದೇಶದಲ್ಲೂ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಾಟಕಗಳನ್ನು ಮಾಡಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಾಲಿವುಡ್ ನಟ ಆಸಿಫ್ ಬಾಸ್ರಾ ಮೃತದೇಹ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಶಂಕಾಸ್ಪದವಾಗಿ ಪತ್ತೆ Rating: 5 Reviewed By: karavali Times
Scroll to Top