ಕೊಲ್ಕತ್ತಾಗೆ 60 ರನ್ ಜಯ : ಟೂರ್ನಿಯಿಂದ ಹೊರ ನಡೆದ ರಾಜಸ್ಥಾನ್ ರಾಯಲ್ಸ್ - Karavali Times ಕೊಲ್ಕತ್ತಾಗೆ 60 ರನ್ ಜಯ : ಟೂರ್ನಿಯಿಂದ ಹೊರ ನಡೆದ ರಾಜಸ್ಥಾನ್ ರಾಯಲ್ಸ್ - Karavali Times

728x90

1 November 2020

ಕೊಲ್ಕತ್ತಾಗೆ 60 ರನ್ ಜಯ : ಟೂರ್ನಿಯಿಂದ ಹೊರ ನಡೆದ ರಾಜಸ್ಥಾನ್ ರಾಯಲ್ಸ್



ಅಬುಧಾಬಿ, ನ. 02, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಐಪಿಎಲ್ ಕೂಟದ 54ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 60 ರನ್‍ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಕೊಲ್ಕತಾ ತಂಡ ಪ್ಲೇ ಆಫ್‍ಗಾಗಿ ನೆಟ್ ರನ್‍ರೇಟಿಗಾಗಿ ಕಾಯಬೇಕಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಾಯಕ ಇಯೊನ್ ಮೋರ್ಗಾನ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‍ಗಳಲ್ಲಿ 191 ರನ್‍ಗಳ ಭಾರೀ ಮೊತ್ತ ಪೇರಿಸಿತು. ಕಠಿಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಪ್ಯಾಟ್ ಕಮ್ಮಿನ್ಸ್ ಮತ್ತು ವರುಣ್ ಚಕ್ರವರ್ತಿ ಅವರ ಬೌಲಿಂಗ್ ದಾಳಿಗೆ ತತ್ತರಿಸಿ ಸೋಲನುಭವಿಸಿತು. 

ಆರಂಭದಿಂದಲೇ ಉಗ್ರವಾಗಿ ದಾಳಿ ಸಂಘಟಿಸಿದ ವೇಗಿ ಪ್ಯಾಟ್ ಕಮ್ಮಿನ್ಸ್ 4 ಓವರ್‍ಗಳಲ್ಲಿ 34 ರನ್ ನೀಡಿ ಪ್ರಮುಖ 4 ವಿಕೆಟ್ ಉರುಳಿಸಿದರು. ಸ್ಪಿನ್ನರ್ ವರುಣ್ ಚಕ್ರವರ್ತಿ 4 ಓವರ್‍ಗಳಲ್ಲಿ 20 ರನ್ ನೀಡಿ 2 ವಿಕೆಟ್ ಕಬಳಿಸಿದರೆ. ಶಿವಂ ಮಾವಿ 2 ವಿಕೆಟ್ ಕಿತ್ತು ಗೆಲುವಿನ ಪ್ರಮುಖ ಪಾತ್ರ ವಹಿಸಿದರು. 

ಕೋಲ್ಕತಾ ನೈಟ್ ರೈಡರ್ಸ್ ನಿಗದಿಪಡಿಸಿದ ಕಠಿಣ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್‍ಗೆ ಕೋಲ್ಕತ್ತಾ ವೇಗಿ ಪ್ಯಾಟ್ ಕಮ್ಮಿನ್ಸ್ ಆರಂಭಿಕ ಆಘಾತ ನೀಡಿದರು. 6 ರನ್ ಗಳಿಸಿದ್ದ ರಾಬಿನ್ ಉತ್ತಪ್ಪ ಕ್ಯಾಚ್ ನೀಡಿದರು. ನಂತರ ಬೆನ್ ಸ್ಟೋಕ್ಸ್ ಮತ್ತು ಸ್ಟೀವನ್ ಸ್ಮಿತ್ ಜೊತೆಯಾಗಿ ಉತ್ತಮ ಇನ್ನಿಂಗ್ಸ್ ಕಟ್ಟುವ ತವಕದಲ್ಲಿದ್ದರು. ಆದರೆ ಮತ್ತೆ ದಾಳಿಗೆ ಬಂದ ಪ್ಯಾಟ್ ಕಮ್ಮಿನ್ಸ್ ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡಿದರು. 18 ರನ್‍ಗಳಿಸಿದ್ದ ಸ್ಟೋಕ್ಸ್ ದಿನೇಶ್ ಕಾರ್ತಿಕ್ ಹಿಡಿದ ಉತ್ತಮ ಕ್ಯಾಚಿಗೆ ಬಲಿಯಾದರು.

ಆ ನಂತರ ನಾಯಕ ಸ್ಟೀವನ್ ಸ್ಮಿತ್ ಪ್ಯಾಟ್ ಕಮ್ಮಿನ್ಸ್‍ಗೆ ಬೌಲ್ಡ್ ಆದರು. ನಂತರದ ಶಿವಂ ಮಾವಿ ಅವರ ಓವರಿನಲ್ಲಿ ಸಂಜು ಸ್ಯಾಮ್ಸನ್ ಔಟ್ ಆದರು. ಈ ಮೂಲಕ ಅರ್ಧ ಪವರ್ ಪ್ಲೇ ಮುಕ್ತಾಯಕ್ಕೆ ಮುಂಚೆಯೇ ರಾಜಸ್ಥಾನ್ ತನ್ನ 4 ಪ್ರಮುಖ ವಿಕೆಟ್ ಕಳೆದುಕೊಂಡಿತ್ತು. ಇದಾದ ನಂತರ ಬಂದ ರಿಯಾನ್ ಪರಾಗ್ 7 ಎಸೆತಗಳನ್ನು ಎದುರಿಸಿ ಶೂನ್ಯ ಸಂಪಾದಿಸಿ ಹೊರನಡೆದರು. ಪರಿಣಾಮ ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ 5 ವಿಕೆಟ್ ನಷ್ಟಕ್ಕೆ ಕೇವಲ 41 ರನ್ ಗಳಿಸಿ ಸೋಲಿನತ್ತ ಮುಖ ಮಾಡಿತ್ತು. 

ನಂತರ ಬಟ್ಲರ್ ಮತ್ತು ತಿವಾಟಿಯಾ ಉತ್ತಮವಾಗಿ ಆಡಿದ್ದರು. ಆದರೆ 10ನೇ ಓವರಿನ 4ನೇ ಎಸೆತದಲ್ಲಿ ಜೋಸ್ ಬಟ್ಲರ್ (35 ರನ್, 22 ಎಸೆತ) ಔಟ್ ಆದರು. ನಂತರ ರಾಹುಲ್ ತಿವಾಟಿಯಾ ಅವರು ಕೂಡ ವರುಣ್ ಚಕ್ರವರ್ತಿ ಸ್ಪಿನ್ ಮೋಡಿಗೆ ಬಲಿಯಾದರು. ನಂತರ ಬಂದ ಜೋಫ್ರಾ ಆರ್ಚರ್ ಅವರು ಕೂಡ ಕಮಲೇಶ್ ನಾಗರಕೋಟಿ ಅವರ ಬೌಲಿಂಗ್‍ನಲ್ಲಿ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಕಾರ್ತಿಕ್ ತ್ಯಾಗಿ ಅವರು ಕ್ಯಾಚ್ ನೀಡಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 60 ರನ್‍ಗಳಿಂದ ಶರಣಾಗುವ ಮೂಲಕ ಐಪಿಎಲ್ ಟೂರ್ನಿಗೆ ವಿದಾಯ ಹೇಳಿತು. 








  • Blogger Comments
  • Facebook Comments

0 comments:

Post a Comment

Item Reviewed: ಕೊಲ್ಕತ್ತಾಗೆ 60 ರನ್ ಜಯ : ಟೂರ್ನಿಯಿಂದ ಹೊರ ನಡೆದ ರಾಜಸ್ಥಾನ್ ರಾಯಲ್ಸ್ Rating: 5 Reviewed By: karavali Times
Scroll to Top