ಬಿಇ ಆರ್ಕಿಟೆಕ್ಚರ್ ಸಿಇಟಿ ಪ್ರವೇಶ ಪರೀಕ್ಷೆಯ ರ್ಯಾಂಕ್ ಪಟ್ಟಿಗೆ ಪರೀಕ್ಷಾ ಪ್ರಾಧಿಕಾರ ತಡೆಯಾಜ್ಞೆ - Karavali Times ಬಿಇ ಆರ್ಕಿಟೆಕ್ಚರ್ ಸಿಇಟಿ ಪ್ರವೇಶ ಪರೀಕ್ಷೆಯ ರ್ಯಾಂಕ್ ಪಟ್ಟಿಗೆ ಪರೀಕ್ಷಾ ಪ್ರಾಧಿಕಾರ ತಡೆಯಾಜ್ಞೆ - Karavali Times

728x90

3 November 2020

ಬಿಇ ಆರ್ಕಿಟೆಕ್ಚರ್ ಸಿಇಟಿ ಪ್ರವೇಶ ಪರೀಕ್ಷೆಯ ರ್ಯಾಂಕ್ ಪಟ್ಟಿಗೆ ಪರೀಕ್ಷಾ ಪ್ರಾಧಿಕಾರ ತಡೆಯಾಜ್ಞೆ



ಬೆಂಗಳೂರು, ನ. 03, 2020 (ಕರಾವಳಿ ಟೈಮ್ಸ್) : 2020-21ನೇ ಸಾಲಿನ ಬಿಇ ಆರ್ಕಿಟೆಕ್ಚರ್ ಪ್ರವೇಶಾತಿಗೆ ಪ್ರಕಟಗೊಂಡಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರ್ಯಾಂಕ್ ಪಟ್ಟಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಂಗಳವಾರ ತಡೆಯಾಜ್ಞೆ ನೀಡಿದೆ.

ರ್ಯಾಂಕ್ ಪಟ್ಟಿ ತಯಾರಿಸುವ ಸಂದರ್ಭದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಅನೇಕ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಪ್ರಾಧಿಕಾರ ಈ ಆದೇಶ ನೀಡಿದೆ. ಎನ್‍ಟಿಎ ಅಂಕವನ್ನು ಶೇಕಡಾವಾರು ಮಾದರಿಯಲ್ಲಿ ನೀಡಿದ ಜೆಇಇ ಪರೀಕ್ಷೆ ಫಲಿತಾಂಶ ಆಧರಿಸಿ ಕೆಇಎ ರ್ಯಾಂಕ್ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿವೆ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದರು. 

ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಗಳಿಸಿರುವ ಒಟ್ಟು ಅಂಕದ ಶೇ. 50ರಷ್ಟು ಮತ್ತು ಜೆಇಇ/ ನಾಟಾ (ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಅಂಕದಲ್ಲಿ ಹೆಚ್ಚು ಅಂಕ ಗಳಿಸಿದ ಅದರ ಶೇ.50ರಷ್ಟು ಸೇರಿಸಿ ಕೆಇಎ ಅ. 30 ರಂದು ರ್ಯಾಂಕ್ ಪಟ್ಟಿ ಪ್ರಕಟಿಸಿತ್ತು. ವಿದ್ಯಾರ್ಥಿಗಳ ಮನವಿ ಕುರಿತು ಸಂಬಂಧಪಟ್ಟ ಸಂಸ್ಥೆಗಳಿಂದ ಸ್ಪಷ್ಟೀಕರಣ ಪಡೆದು ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಈ ಸಂಬಂಧ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಗಿರುವ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸಿದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ. 








  • Blogger Comments
  • Facebook Comments

0 comments:

Post a Comment

Item Reviewed: ಬಿಇ ಆರ್ಕಿಟೆಕ್ಚರ್ ಸಿಇಟಿ ಪ್ರವೇಶ ಪರೀಕ್ಷೆಯ ರ್ಯಾಂಕ್ ಪಟ್ಟಿಗೆ ಪರೀಕ್ಷಾ ಪ್ರಾಧಿಕಾರ ತಡೆಯಾಜ್ಞೆ Rating: 5 Reviewed By: karavali Times
Scroll to Top