ಉಳ್ಳಾಲ ಪಾಕಿಸ್ತಾನದಂತೆ ಕಾಣುತ್ತಿದೆ, ಹಲವೆಡೆ ಪಾಕಿಸ್ತಾನ ನಿರ್ಮಾಣವಾಗಿದೆ : ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕಲ್ಲಡ್ಕ ಭಟ್ - Karavali Times ಉಳ್ಳಾಲ ಪಾಕಿಸ್ತಾನದಂತೆ ಕಾಣುತ್ತಿದೆ, ಹಲವೆಡೆ ಪಾಕಿಸ್ತಾನ ನಿರ್ಮಾಣವಾಗಿದೆ : ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕಲ್ಲಡ್ಕ ಭಟ್ - Karavali Times

728x90

2 November 2020

ಉಳ್ಳಾಲ ಪಾಕಿಸ್ತಾನದಂತೆ ಕಾಣುತ್ತಿದೆ, ಹಲವೆಡೆ ಪಾಕಿಸ್ತಾನ ನಿರ್ಮಾಣವಾಗಿದೆ : ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕಲ್ಲಡ್ಕ ಭಟ್

 

ವಿಷವಿಕ್ಕುವ ಸರ್ಪಗಳಿಗೆ ಪಾಕಿಸ್ಥಾನವೇ ಬಂಡವಾಳ : ಶಾಸಕ ಖಾದರ್ ಗರಂ



ಮಂಗಳೂರು, ನ. 03, 2020 (ಕರಾವಳಿ ಟೈಮ್ಸ್) : ಮಂಗಳೂರಿನ ಉಳ್ಳಾಲಕ್ಕೆ ಹೋದರೆ ಪಾಕಿಸ್ತಾನಕ್ಕೆ ಹೋದ ಅನುಭವವಾಗುತ್ತದೆ. ಈಗಾಗಲೇ ಅನೇಕ ಕಡೆ ಪಾಕಿಸ್ತಾನ ನಿರ್ಮಾಣವಾಗಿದೆ ಎಂದು ಆರೆಸ್ಸೆಸ್ ಪ್ರಮುಖ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉಳ್ಳಾಲ ಸಮೀಪದ ಕಿನ್ಯಾದಲ್ಲಿ ಸಂಘಟನೆಯೊಂದು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನೆಯಲ್ಲಿ ಒಂದೇ ಮಗುವಿದ್ದಾಗ ಆ ಮಗು ಸ್ವಾರ್ಥಿಯಾಗುತ್ತದೆ. ಏಕೆಂದರೆ ಆ ಮಗುವಿಗೆ ಅಣ್ಣ, ತಮ್ಮ, ಅಕ್ಕ, ತಂಗಿನೂ ಯಾರೂ ಇರುವುದಿಲ್ಲ. ಮನೆಯಲ್ಲಿ ಮಕ್ಕಳು ಹೆಚ್ಚಿದಷ್ಟು ಆನಂದ, ಖುಷಿ ಹೆಚ್ಚಾಗಿರುತ್ತದೆ. ಇದೀಗ ಹಿಂದೂ ಸಮಾಜದಲ್ಲಿ ಸಂಖ್ಯೆ ಕಡಿಮೆ ಇದೆ ಎಂದರು.

ಕಿನ್ಯಾದಲ್ಲಿ ಕೇಳಿ ಸುತ್ತಲೂ ಯಾರಿದ್ದಾರೆ ಎಂದು, ಅಲ್ಲದೇ ಉಳ್ಳಾಲದ ಬಗ್ಗೆ ನಾನೇನು ಹೇಳಬೇಕಾಗಿಲ್ಲ. ಆಗ ನಮ್ಮ ದೇವಸ್ಥಾನವನ್ನು ಉಳಿಸುವವರು ಯಾರು..? ದೈವಸ್ಥಾನವನ್ನು ಉಳಿಸುವವರು ಯಾರು..? ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸುವವರು ಯಾರು..? ಪಾಕಿಸ್ತಾನ ಯಾಕೆ ಸೃಷ್ಟಿಯಾಯಿತು..? ನಮ್ಮವರ ಸಂಖ್ಯೆ ಕಡಿಮೆ ಇತ್ತು ಅವರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಪಾಕಿಸ್ತಾನ ಬಾಂಗ್ಲಾದೇಶ ನಿರ್ಮಾಣವಾಯಿತು ಎಂದವರು ತಮ್ಮ ಭಾಷಣದುದ್ದಕ್ಕೂ  ವಿವಾದಾತ್ಮಕವಾಗಿಯೇ ಮಾತನಾಡುವ ಮೂಲಕ ಭಾರತೀಯರಿಗೆ ಪಾಕಿಸ್ಥಾನ ಪಟ್ಟ ಕಟ್ಟಿ ಅವಮಾನಿಸಿದ್ದಾರೆ. 


ವಿಷ ಕಕ್ಕುವ ಸರ್ಪಗಳಿಗೆ ಪಾಕಿಸ್ಥಾನವೇ ಬಂಡವಾಳ : ಖಾದರ್


ಭಟ್ ಅವರ ಹೇಳಿಕೆಗೆ ಗರಂ ಆಗಿ ಎದಿರೇಟು ನೀಡಿರುವ ಉಳ್ಳಾಲ ಶಾಸಕ ಯು.ಟಿ. ಖಾದರ್, ಕಲ್ಲಡ್ಕ ಪ್ರಭಾಕರ್ ಭಟ್ ಅವರ ಪಾಕಿಸ್ತಾನ ಪ್ರೇಮ ಇದು ಹೊಸದೇನೂ ಅಲ್ಲ. ಅವರು ಮಾತು ಮಾತಿಗೆ ಪಾಕಿಸ್ತಾನದ ಜಪ ಮಾಡುವುದನ್ನು ನೋಡಿದರೆ ಮುಹಮ್ಮದ್ ಅಲಿ ಜಿನ್ನಾ ಅವರ ಗುರುಗಳೇ ಆಗಿರಬೇಕು. ಇವರು ಭಾರತಕ್ಕಿಂತ ಪಾಕಿಸ್ತಾನದ ಇತಿಹಾಸ ಹೆಚ್ಚು ಓದಿದಂತಿದೆ. ಸಮಾಜದಲ್ಲಿ ವಿಷ ಕಕ್ಕುವ ಕೆಲವು ಸರ್ಪಗಳಿಗೆ ಪಾಕಿಸ್ತಾನವೇ ಬಂಡವಾಳ. ನನಗಂತೂ ಉಳ್ಳಾಲದ ಕಣಕಣದಲ್ಲೂ ಭಾರತವೇ ಕಾಣುತ್ತಿದೆ ಎಂದು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.







  • Blogger Comments
  • Facebook Comments

0 comments:

Post a Comment

Item Reviewed: ಉಳ್ಳಾಲ ಪಾಕಿಸ್ತಾನದಂತೆ ಕಾಣುತ್ತಿದೆ, ಹಲವೆಡೆ ಪಾಕಿಸ್ತಾನ ನಿರ್ಮಾಣವಾಗಿದೆ : ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕಲ್ಲಡ್ಕ ಭಟ್ Rating: 5 Reviewed By: karavali Times
Scroll to Top