ಅರ್ಜೆಂಟೀನಾ ದೇಶದ ಫುಟ್ಬಾಲ್ ದಿಗ್ಗಜ ಡಿಗೋ ಮರಾಡೋನ ಹೃದಯಾಘಾತಕ್ಕೆ ಬಲಿ - Karavali Times ಅರ್ಜೆಂಟೀನಾ ದೇಶದ ಫುಟ್ಬಾಲ್ ದಿಗ್ಗಜ ಡಿಗೋ ಮರಾಡೋನ ಹೃದಯಾಘಾತಕ್ಕೆ ಬಲಿ - Karavali Times

728x90

25 November 2020

ಅರ್ಜೆಂಟೀನಾ ದೇಶದ ಫುಟ್ಬಾಲ್ ದಿಗ್ಗಜ ಡಿಗೋ ಮರಾಡೋನ ಹೃದಯಾಘಾತಕ್ಕೆ ಬಲಿ

 


ಬ್ಯೂನಸ್ ಐರಿಸ್, ನ. 26, 2020 (ಕರಾವಳಿ ಟೈಮ್ಸ್) : ಅರ್ಜೆಂಟೀನಾ ದೇಶದ ಖ್ಯಾತ ಫುಟ್ಬಾಲ್ ಆಟಗಾರ ಡಿಗೊ ಮರಾಡೋನ (60) ಬುಧವಾರ ಸಂಜೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಮಂಗಳವಾರವಷ್ಟೆ ಅವರು ತಮ್ಮ 60ನೇ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದರು ಎನ್ನಲಾಗಿದೆ. ಇವರು ಕೆಲ ವಾರಗಳ ಹಿಂದೆಯಷ್ಟೆ  ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನ. 25 ರಂದು ಬುಧವಾರ ಸಂಜೆ ಬ್ಯೂನಸ್ ಐರಿಸ್ ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಡಿಗೊ ಮರಡೋನ ಫುಟ್ಬಾಲ್ ದಂತಕಥೆಯೆಂದೇ ಖ್ಯಾತಿ ಪಡೆದಿದ್ದರು. ಅರ್ಜೆಂಟೀನಾದ ಅಧ್ಯಕ್ಷರು ಫುಟ್ಬಾಲ್ ದಂತಕಥೆ ನಿಧನಕ್ಕೆ ಸಂತಾಪ ಸೂಚಿಸಿದ್ದು ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ. 1986 ರಲ್ಲಿ ಮರಡೋನಾ ನೇತೃತ್ವದ ತಂಡ ಪಶ್ಚಿಮ ಜರ್ಮನಿಯನ್ನು ಮಣಿಸಿ ವಿಶ್ವಕಪ್ ಗೆದ್ದಿತ್ತು. ಮರಡೋನ ಅವರ ದಿ ಹ್ಯಾಂಡ್ ಆಫ್ ಗಾಡ್ ಎಂದೇ ಕರೆಯಲ್ಪಡುವ ಗೋಲು ಪ್ರಸಿದ್ಧವಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಅರ್ಜೆಂಟೀನಾ ದೇಶದ ಫುಟ್ಬಾಲ್ ದಿಗ್ಗಜ ಡಿಗೋ ಮರಾಡೋನ ಹೃದಯಾಘಾತಕ್ಕೆ ಬಲಿ Rating: 5 Reviewed By: karavali Times
Scroll to Top