ಮುಂಬೈ ಮಣಿಸಿದ ಹೈದ್ರಾಬಾದ್ ಪ್ಲೇ ಆಫ್ ಪ್ರವೇಶ : ಕೆಕೆಆರ್ ಕನಸು ಭಗ್ನ - Karavali Times ಮುಂಬೈ ಮಣಿಸಿದ ಹೈದ್ರಾಬಾದ್ ಪ್ಲೇ ಆಫ್ ಪ್ರವೇಶ : ಕೆಕೆಆರ್ ಕನಸು ಭಗ್ನ - Karavali Times

728x90

3 November 2020

ಮುಂಬೈ ಮಣಿಸಿದ ಹೈದ್ರಾಬಾದ್ ಪ್ಲೇ ಆಫ್ ಪ್ರವೇಶ : ಕೆಕೆಆರ್ ಕನಸು ಭಗ್ನ

 


ಶಾರ್ಜಾ, ನ. 04, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್-2020ಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಭರ್ಜರಿ 10 ವಿಕೆಟ್‍ಗಳಿಂದ ಪರಾಭವಗೊಳಿಸಿ ಪ್ಲೇ ಆಫ್ ಪ್ರವೇಶಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಶಹಬಾಜ್ ನದೀಮ್ ಮತ್ತು ಸಂದೀಪ್ ಶರ್ಮಾ ಅವರ ದಾಳಿಗೆ ತತ್ತರಿಸಿ ನಿಗದಿತ 20 ಓವರ್ ಗಳಲ್ಲಿ ಕೇವಲ 149 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಅವರ ಮುರಿಯದ 151 ರನ್ ಗಳ ಜೊತೆಯಾಟದಿಂದ ಇನ್ನೂ ಮೂರು ಓವರ್  ಉಳಿದಿರುವಂತೆ ಗುರಿ ತಲುಪಿತು.

ಈ ಮೂಲಕ ಈ ಬಾರಿಯ ಐಪಿಎಲ್ ಕೂಟದಲ್ಲಿ ಪ್ಲೇ ಆಫ್ ಹಂತ ತಲುಪುವ ನಾಲ್ಕು ತಂಡಗಳ ನಿರ್ಧಾರ ಕೊನೆಯ ಲೀಗ್ ಪಂದ್ಯಗಳವರೆಗೂ ಮುಂದೂಡಲ್ಪಟ್ಟಿತು. ಇದೀಗ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನಾಲ್ಕು ತಂಡಗಳು ಪ್ಲೇ ಆಫ್‍ಗೆ ಅಂತಿಮವಾಗಿ ಆಯ್ಕೆ ಆಗಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‍ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಪ್ರವೇಶಿಸಿವೆ.

ಮುಂಬೈ ನೀಡಿದ 150 ರನ್‍ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಮತ್ತು ವೃದ್ಧಿಮಾನ್ ಸಹಾ ಆರಂಭದಿಂದಲೇ ಅಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. 

ನಾಯಕ ಡೇವಿಡ್ ವಾರ್ನರ್ 35 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರೆ, ವೃದ್ದಿಮಾನ್ ಸಾಹಾ 34 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಜೊತೆಗೆ ಒಂದೂವರೆ ಶತಕದ ಜೊತೆಯಾಟವಾಡಿ ತಂಡವನ್ನು ವಿಕೆಟ್ ನಷ್ಟವಿಲ್ಲದೆ ಜಯದತ್ತ ಕೊಂಡೊಯ್ದರು.

  ಡೇವಿಡ್ ವಾರ್ನರ್ 85 ರನ್ (58 ಎಸೆತ, 10 ಬೌಂಡರಿ , 1 ಸಿಕ್ಸ್) ಹಾಗೂ ಸಹಾ 58 ರನ್ (45 ಎಸೆತ, 7 ಬೌಂಡರಿ, 1 ಸಿಕ್ಸ್) ಭಾರಿಸಿದರು.

ಗುರುವಾರ ದುಬೈಯಲ್ಲಿ ನಡೆಯಲಿರುವ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಮೊದೆಲೆರಡು ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ನಂತರ ಶುಕ್ರವಾರ ಅಬುಧಾಬಿಯಲ್ಲಿ ನಡೆಯಲಿರುವ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‍ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದ್ದು, ನಂತರ ಎರಡನೇ ಎಲಿಮಿನೇಟರ್ ಭಾನುವಾರ ನಡೆಯಲಿದೆ.  • Blogger Comments
  • Facebook Comments

0 comments:

Post a Comment

Item Reviewed: ಮುಂಬೈ ಮಣಿಸಿದ ಹೈದ್ರಾಬಾದ್ ಪ್ಲೇ ಆಫ್ ಪ್ರವೇಶ : ಕೆಕೆಆರ್ ಕನಸು ಭಗ್ನ Rating: 5 Reviewed By: karavali Times
Scroll to Top