ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಮುನ್ನಡೆದಾಗ ಯಶಸ್ಸು ಸಾಧ್ಯ : ಉಪನ್ಯಾಸಕ ಚೇತನ್ ಮುಂಡಾಜೆ - Karavali Times ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಮುನ್ನಡೆದಾಗ ಯಶಸ್ಸು ಸಾಧ್ಯ : ಉಪನ್ಯಾಸಕ ಚೇತನ್ ಮುಂಡಾಜೆ - Karavali Times

728x90

22 November 2020

ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಮುನ್ನಡೆದಾಗ ಯಶಸ್ಸು ಸಾಧ್ಯ : ಉಪನ್ಯಾಸಕ ಚೇತನ್ ಮುಂಡಾಜೆ



ಬಂಟ್ವಾಳ, ನ. 22, 2020 (ಕರಾವಳಿ ಟೈಮ್ಸ್) : ವಿದ್ಯಾರ್ಥಿಗಳು ದೊಡ್ಡ ಗುರಿಯನ್ನು ಇಟ್ಟುಕೊಂಡು ಅದನ್ನು ತಲುಪುವಲ್ಲಿ ತಮ್ಮ ಸಂಪೂರ್ಣ ಗಮನ ಕೇಂದ್ರೀಕರಿಸಿಕೊಂಡಾಗ ಯಶಸ್ಸು ಸಾಧ್ಯ ಎಂದು ಕನ್ನಡ ಉಪನ್ಯಾಸಕ ಚೇತನ್ ಮುಂಡಾಜೆ ಹೇಳಿದರು.

ಬಿ ಸಿ ರೋಡಿನ ಯುನಿಕ್ ಎಜ್ಯುಕೇರ್ ಸಂಸ್ಥೆಯ ವತಿಯಿಂದ ಭಾನುವಾರ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಅಧ್ಯಯನ ತಂತ್ರಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ತಯಾರಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು ವರ್ತಮಾನ ಪತ್ರಿಕೆಗಳನ್ನು ಓದುವ ಮೂಲಕ ವಿದ್ಯಾರ್ಥಿಗಳು ಸಾಧ್ಯವಾದಷ್ಟು ಮಟ್ಟಿಗೆ ಪ್ರಸ್ತುತ ವಿಚಾರಗಳನ್ನು ತಿಳಿದುಕೊಳ್ಳಬೇಕು. ಆ ಮೂಲಕ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಬಂಟ್ವಾಳ ಲಯನ್ಸ್ ಕ್ಲಬ್ಬಿನ ಕೃಷ್ಣಶ್ಯಾಮ್ ಕಾರ್ಯಕ್ರಮ ಉದ್ಘಾಟಿಸಿದರು. ಯುನಿಕ್ ಎಜುಕೇರ್‍ನ ಲಕ್ಷ್ಮಣ ಅಗ್ರಬೈಲ್ ಸ್ವಾಗತಿಸಿ, ಕವಿತಾ ಯಾದವ್ ವಂದಿಸಿದರು. ಉಪನ್ಯಾಸಕಿ ಭಾರತಿ ವಸಂತ ಕುಮಾರ್ ಅಣ್ಣಳಿಕೆ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಮತ್ತು ಧನ್ಯಾ ಪ್ರಾರ್ಥಿಸಿದರು. ನ್ಯಾಯವಾದಿ ಯಶೋಧ, ಪತ್ರಕರ್ತ ಯಾದವ ಅಗ್ರಬೈಲ್, ಪ್ರಮುಖರಾದ ದೇವದಾಸ್, ಡಾ. ಬಾಲಕೃಷ್ಣ ಕುಮಾರ್ ಸಹಕರಿಸಿದರು.









  • Blogger Comments
  • Facebook Comments

0 comments:

Post a Comment

Item Reviewed: ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಮುನ್ನಡೆದಾಗ ಯಶಸ್ಸು ಸಾಧ್ಯ : ಉಪನ್ಯಾಸಕ ಚೇತನ್ ಮುಂಡಾಜೆ Rating: 5 Reviewed By: karavali Times
Scroll to Top