ಬಂಟ್ವಾಳ ಪೊಲೀಸರ ಮೇಲೆ ದಾಳಿಗೆ ಯತ್ನ : ಆರೋಪಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು - Karavali Times ಬಂಟ್ವಾಳ ಪೊಲೀಸರ ಮೇಲೆ ದಾಳಿಗೆ ಯತ್ನ : ಆರೋಪಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು - Karavali Times

728x90

21 December 2020

ಬಂಟ್ವಾಳ ಪೊಲೀಸರ ಮೇಲೆ ದಾಳಿಗೆ ಯತ್ನ : ಆರೋಪಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪುಬಂಟ್ವಾಳ, ಡಿ. 21, 2020 (ಕರಾವಳಿ ಟೈಮ್ಸ್) : ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 94/2018 ಕಲಂ 399, 402, 353, 307 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸದ್ದಾಂ ಹುಸೈನ್, ಮಹಮ್ಮದ್ ಇರ್ಶಾದ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 

ಕಳೆದ 2018 ರ ಜೂನ್ 1 ರಂದು ಬೆಳ್ತಂಗಡಿ ತಾಲೂಕು ಗುರುವಾಯನಕೆರೆ ವ್ಯಾಪ್ತಿಯಲ್ಲಿ ರಾತ್ರಿ 11-30 ಗಂಟೆಗೆ ಅನುಮಾನಸ್ಪದವಾಗಿ ತಿರುಗುತ್ತಿದ್ದ ಕಾರನ್ನು ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಗುರುವಾಯನಕೆರೆ ಪೆÇಲೀಸ್ ಚೆಕ್ ಪಾಯಿಂಟ್‍ನಲ್ಲಿ ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ಬಂಟ್ವಾಳ ಕಡೆ ಬರುತ್ತಿದ್ದ ಕಾರನ್ನು ರಾತ್ರಿ ಗಸ್ತಿನಲ್ಲಿದ್ದ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಹಾಗೂ ಬಂಟ್ವಾಳ ನಗರ ಠಾಣಾ ಪಿಎಸ್ಸೈ ಅವರ ತಂಡ ಮಣಿಹಳ್ಳದ ಬಳಿ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ಸಿಬ್ಬಂದಿಯವರ ಮೇಲೆ ಕಾರು ಚಲಾಯಿಸಲು ಬಂದಾಗ ಅಪಾಯದ ಮುನ್ಸೂಚನೆ ಅರಿತ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ಅವರು ತಮ್ಮ ಇಲಾಖಾ ಪಿಸ್ತೂಲಿನಿಂದ ಕಾರಿನ ಕಡೆ ಫೈರಿಂಗ್ ಮಾಡಿದ್ದು, ಇದೇ ವೇಳೆ ಬಂಟ್ವಾಳ ನಗರ ಠಾಣಾ ಎಸ್ಸೈ ಚಂದ್ರಶೇಖರ್ ಅವರು ಕಾರಿನ ಚಕ್ರಕ್ಕೆ ತಮ್ಮ ಬಳಿ ಇದ್ದ ಪಂಪ್ ಆಕ್ಷನ್ ಗನ್‍ನಿಂದ ಫೈರಿಂಗ್ ಮಾಡಿದ್ದು, ಈ ವೇಳೆ ಆರೋಪಿಗಳು ಪೆÇಲೀಸರ ಮೇಲೆ ಹಲ್ಲೆ ನಡೆಸಲು ಬಂದಾಗ ಸಿಬ್ಬಂದಿಯವರೊಂದಿಗೆ ಮೂವರು ಆರೋಪಿಗಳಾದ ಮಹಮ್ಮದ್ ಮುಕ್ಸೀನ್, ಸದ್ದಾಂ ಹುಸೈನ್, ಮಹಮ್ಮದ್ ಇರ್ಶಾದ್ ಅವರನ್ನು ವಶಕ್ಕೆ ಪಡೆದಿದ್ದು, ಮತ್ತಿಬ್ಬರು ಆರೋಪಿಗಳಾದ ಮನ್ಸೂರ್ ಹಾಗೂ ಅಮ್ಮಿ ತಪ್ಪಿಸಿಕೊಂಡಿದ್ದರು. 

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2018 ಕಲಂ 399, 402, 353, 307 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಬಂಟ್ವಾಳ ಸಿಐ ಟಿ ಡಿ ನಾಗರಾಜ್ ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿರುತ್ತಾರೆ. ಸದ್ರಿ ಪ್ರಕರಣವು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಸ್ ಸಿ ನಂಬ್ರ 201/2018 ಮತ್ತು 246/2018 ರಂತೆ ವಿಚಾರಣೆಗೊಂಡು ಡಿಸೆಂಬರ್ 21 ರಂದು ಆರೋಪಿತರಾದ ಸದ್ದಾಂ ಹುಸೈನ್, ಮಹಮ್ಮದ್ ಇರ್ಶಾದ್ ಅವರಿಗೆ ತಲಾ 1  ವರ್ಷ ಸಾದಾ ಕಾರಾಗೃಹ ವಾಸ ಮತ್ತು ತಲಾ 3,000/- ರೂಪಾಯಿ ದಂಡವನ್ನು ವಿಧಿಸಿದೆ. ಆರೋಪಿ ಮಹಮ್ಮದ್ ಮುಕ್ಸೀನ್ ತಲೆಮರೆಸಿಕೊಂಡಿದ್ದು, ಆತನ ವಿರುದ್ದ ವಿಚಾರಣೆ ಮುಂದುವರಿದಿರುತ್ತದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪೊಲೀಸರ ಮೇಲೆ ದಾಳಿಗೆ ಯತ್ನ : ಆರೋಪಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು Rating: 5 Reviewed By: karavali Times
Scroll to Top